ಗಣೇಶೋತ್ಸವ ಶಾಂತಿ ರೀತಿಯಿಂದ ಆಚರಿಸಿ – ಎಸ್.ಪಿ ಡಾ. ವಿಕ್ರಮ್ ಅಮಟೆ.
ತರೀಕೆರೆ ಸಪ್ಟೆಂಬರ್.19

ಜಿಲ್ಲೆಯಲ್ಲಿ 1711 ಸಾರ್ವಜನಿಕ ಗಣೇಶೋತ್ಸವಗಳನ್ನು ಏರ್ಪಡಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಪ್ರದೇಶಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ. ವಿಕ್ರಮ್ ಅಮಟೆ ರವರು ಸೋಮವಾರ ಪಟ್ಟಣದಲ್ಲಿ ಸಾರ್ವಜನಿಕ ಗಣಪತಿ ಮೆರವಣಿಗೆ ಮಾಡುವ ಮಾರ್ಗಗಳಲ್ಲಿ ಪೋಲಿಸ್ ಪತ ಸಂಚಲ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಜಾಗ್ರತಾ ಕ್ರಮವಾಗಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಡಿ ಎಸ್ ಪಿ, ವೃತ್ತ ನಿರೀಕ್ಷಕರು, ಪೋಲಿಸ್ ಇನ್ಸ್ಪೆಕ್ಟರ್, ಮತ್ತು ಪೊಲೀಸ್ ಉಪ ನಿರೀಕ್ಷಕರು, ಸಭೆಗಳನ್ನು ಮಾಡಿ ಈ ಬಾರಿಯ ಸರ್ಕಾರಿ ಸುತ್ತೋಲೆಯಂತೆ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಬೇಕು,
ಪೋಲಿಸ್ ಕಂಟ್ರೋಲ್ ಬೋರ್ಡ್ ನಿರ್ದೇಶನವನ್ನು ಪಾಲಿಸಬೇಕು ಎಂದು ತಿಳಿಸಿರುತ್ತಾರೆ. ತರೀಕೆರೆಯಲ್ಲಿಯೂ ಗಣೇಶೋತ್ಸವ ಉತ್ತಮ ರೀತಿಯಲ್ಲಿ ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಸಮಸ್ಯೆಗಳನ್ನು ಉಂಟು ಮಾಡುವಂತವರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಕೋಮು ಸಂಘರ್ಷಕ್ಕೆ ಕಾರಣವಾಗುವ ಘೋಷಣೆ ಕೂಗುವಂತಿಲ್ಲ, ಪಟಾಕಿ, ಸಿಡಿಮದ್ದು, ಸಿಡಿಸುವಂತಿಲ್ಲ, ಡಿ ಜೆ ಗೆ ಅನುಮತಿ ನೀಡುತ್ತಿಲ್ಲ. ಸಂಘಟನೆಗಳು ಸಹಕಾರ ನೀಡುತ್ತಿವೆ, ಗಣೇಶೋತ್ಸವವನ್ನು ಶಾಂತಿ ರೀತಿಯಿಂದ ಆಚರಿಸಬೇಕೆಂದು ಕೋರುತ್ತೇವೆ.
ಗಣಪತಿ ವಿಸರ್ಜನೆಯ ಮೆರವಣಿಗೆ ಮಾಡುವ ಮಾರ್ಗದಲ್ಲಿ ಬರುವ ಸೂಕ್ಷ್ಮ, ಅತಿ ಸೂಕ್ಷ್ಮ,ಪ್ರದೇಶಗಳ ಮಾರ್ಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕೆ ಎಸ್ ಆರ್ ಪಿ ಪೋಲಿಸ್ ತುಕ್ಕಡಿ, ಹೋಂ ಗಾರ್ಡ್ಸ್, ಪೋಲಿಸ್ ಸಿಬ್ಬಂದಿಗಳೊಂದಿಗೆ ಪತ ಸಂಚಲನ ಮಾಡಿರುತ್ತೇವೆ ಎಂದು ಹೇಳಿದರು. ಪಥ ಸಂಚಲನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ವಿಕ್ರಮ್ ಅಮಟೆ, ಡಿಎಸ್‌ಪಿ ಹಾಲುಮತೀರಾವ್, ಪೋಲಿಸ್ ನಿರೀಕ್ಷಕರಾದ ವೀರೇಂದ್ರ, ಉಪನಿರೀಕ್ಷಕರಾದ ಕೃಷ್ಣ ನಾಯ್ಕ, ಅಭಿಷೇಕ್, ನಾಗೇಂದ್ರ ನಾಯಕ್, ಬಸವಣ್ಣ ಗೌಡ ಬದಲಿ, ಎಚ್ ಮಂಜುನಾಥ್, ರವರು ಸಿಬ್ಬಂದಿಗಳೊಂದಿಗೆ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ