ಪೋಲಿಸ್ ಇಲಾಖೆಯಿಂದ ಪಟ್ಟಣದಲ್ಲಿ ಪಥ ಸಂಚಲನ ಎಲ್ಲಾರೂ ಧೈರ್ಯದಿಂದ ಗಣೇಶ್ ಹಬ್ಬ ಆಚರಣೆ ಮಾಡಿ ಮಲ್ಲೇಶಪ್ಪ ಮಲ್ಲಾಪುರ.
ಕೂಡ್ಲಿಗಿ ಸಪ್ಟೆಂಬರ್.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರ ದಂದು ಬೆಳಿಗ್ಗೆ 9:ಗಂಟೆ ಸಮಯದಿಂದ ಮಾನ್ಯ ಡಿ ವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ರವರ ನೇತೃತ್ವದಲ್ಲಿ ಕೂಡ್ಲಿಗಿಯ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಹಾಗೂ ಗೃಹ ರಕ್ಷಕ ದಳದ ನೂರಕ್ಕೂ ಹೆಚ್ಚು ಸಿಬ್ಬಂದಿಗಳ ಸಮ್ಮುಖದಲ್ಲಿ ಪಟ್ಟಣದಲೆಲ್ಲಾ ಪೊಲೀಸ್ ಪಥ ಸಂಚಾಲನಾ ಮಾಡುವುದರೊಂದಿಗೆ ಪಟ್ಟಣದ ಎಲ್ಲಾ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಎಲ್ಲರೂ ಕಾನೂನು ವ್ಯಾಪ್ತಿ ಮಿರದೇ ಯಾರು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತ್ತೆ ಎಲ್ಲಾ ಸಾರ್ವಜನಿಕರು ಶಾಂತಿ ಕಾಪಾಡಬೇಕು.
ಹಾಗೂ ನ್ಯಾಯಾಲದ ಆದೇಶದಂತೆ ಶ್ರೀ ಗಣೇಶ್ ಹಬ್ಬವನ್ನು ಸಂತೋಷ ದಿಂದ ಆಚಾರಣೆ ಮಾಡಿ ಎಂದು ಜನರಿಗೆ ಧೈರ್ಯ ತುಂಬುವ ಸಂದೇಶದೊಂದಿಗೆ ಪಟ್ಟಣದಲ್ಲಿ 20 ವಾರ್ಡಿನ ಜನಗಳಿಗೆ ನಿಮ್ಮೊಂದಿಗೆ ಯಾವಾಗಲೂ ನಮ್ಮ ಪೊಲೀಸ್ ಇಲಾಖೆಯು ಇರುತ್ತವೆ ಎಂದು ಪೊಲೀಸ್ ಪಥ ಸಂಚಾಲನ ದೊಂದಿಗೆ ಜಾಗೃತಿ ಮೂಡಿಸಲಾಯಿತು. ಈ ಪಥ ಸಂಚಲನದಲ್ಲಿ ಕೂಡ್ಲಿಗಿ ಸಿ ಪಿ ಐ ಸುರೇಶ ತಳವಾರ ಹಾಗೂ ಪಿ ಎಸ್ ಐ ಧನಂಜಯ್ ಹಾಗೂ ಪೊಲೀಸ್ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಗೃಹ ರಕ್ಷಕಾ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ