ಶ್ರೀ ಗೌರಿ ಶಂಕರ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ:6.78 ಲಕ್ಷ ನಿವ್ವಳ ಲಾಭ – ಗಂಗಾಧರ ದೊಡಮನಿ.

ಹುನಗುಂದ ಸಪ್ಟೆಂಬರ್.20

ಸಹಕಾರಿ ರಂಗದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರ ಬಹಳ ಮುಖ್ಯ.ಬ್ಯಾಂಕಿನ ವಿಷಯದಲ್ಲಿ ನಿರುತ್ಸಾಹಿಯಾಗಿ ಯಾರಾದರೂ ಮೋಸ ಮತ್ತು ವಂಚನೆ ಮಾಡಿದರೇ ನಿಮ್ಮ ಜೀವನದಲ್ಲಿ ನೀವು ಎಂದು ಉದ್ದಾರವಾಗುವುದಿಲ್ಲ.ಸಧ್ಯ ಸಿಬ್ಬಂದಿಗಳು ಉತ್ಸಾಹದಿಂದ ಕೆಲಸ ಮಾಡಿದ್ದರಿಂದ ಪ್ರಸಕ್ತ ವರ್ಷದಲ್ಲಿ 6.78 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಗೌರಿ ಶಂಕರ ಸೌಹಾರ್ಧ ಪತ್ತಿನ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ನಿರ್ದೇಶಕ ಗಂಗಾಧರ ದೊಡಮನಿ ಹೇಳಿದರು.ಮಂಗಳವಾರ ಪಟ್ಟಣದ ಪುರಸಭೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೌರಿ ಶಂಕರ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತದ 15 ನೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಬ್ಯಾಂಕ್ ಸಿಬ್ಬಂದಿ ಉತ್ಸಾಹದಿಂದ ಕೆಲಸ ಮಾಡಿದರೇ ಬ್ಯಾಂಕ್ ಬೆಳವಣೆಗೆ ಜತೆಗೆ ನಿಮ್ಮ ಹೆಸರು ಕೂಡಾ ಬರುತ್ತದೆ.

ಬ್ಯಾಂಕ್ ಬೆಳವಣೆಗೆಯಲ್ಲಿ ಗ್ರಾಹಕರ ಹಿತವನ್ನು ಕಾಡುವುದು ಮುಖ್ಯ.ಬ್ಯಾಂಕ್ 4 ಕೋಟಿ ವ್ಯವಹಾರವಿದ್ದಂತ ಸಂದರ್ಭದಲ್ಲಿ ಅಧ್ಯಕ್ಷನಾಗಿ ಸಧ್ಯ 11 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.1೦ ವರ್ಷದ ಅವಧಿಯಲ್ಲಿ ನನ್ನನ್ನು ಸೇರಿದಂತೆ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಒಂದು ಪೈಸ್ ಭತ್ಯೆಯನ್ನು ಪಡೆಯದೇ ಬ್ಯಾಂಕ್ ಅಭಿವೃದ್ದಿಗಾಗಿ ನಿಸ್ವಾರ್ಥ ಸೇವೆಯನ್ನು ಮಾಡಿದ್ದೇವೆ.ಸಧ್ಯ ನೂತನ ಅಧ್ಯಕ್ಷರನ್ನಾಗಿ ಶಾಸಕ ವಿಜಯಾನಂದ ಕಾಶಪ್ಪನವರನ್ನು ಆಯ್ಕೆ ಮಾಡಿದ್ದೇವೆ.ಕೆಲವೇ ಕೆಲವು ವರ್ಷದಲ್ಲಿ ಈ ಬ್ಯಾಂಕ್ 1೦೦ ಕೋಟಿ ದುಡಿಯುವ ಬಂಡವಾಳವನ್ನು ಹೊಂದುವುದರ ಜೊತೆಗೆ ಬ್ಯಾಂಕಿನ ಸ್ವಂತ ಹೊಸ ಕಟ್ಟಡ ಕಾರ್ಯ ಆರಂಭವಾಗಲಿದೆ.ಬ್ಯಾಂಕ್ ಗ್ರಾಹಕರ ಮತ್ತು ಮಾರ್ಗದರ್ಶಕರ ಸಲಹೆ ಮತ್ತು ಸೂಚನೆಯಂತೆ ಬ್ಯಾಂಕ್ ಆಡಳಿತ ಮಂಡಳಿ ನಡೆದುಕೊಳ್ಳಲಿದೆ ಎಂದರು.ನಿರ್ದೇಶಕ ಅಮರೇಶ ನಾಗೂರ ಮಾತನಾಡಿ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಒಂದು ವರ್ಷದಲ್ಲಿ 2 ಕೋಟಿಗೂ ಅಧಿಕ ಸಾಲ ವಸೂಲಿಯಾಗಿದ್ದು.ಅಷ್ಟೆಯಲ್ಲ 3 ಕೋಟಿಗೂ ಅಧಿಕ ಠೇವಣೆ ಕೂಡಾ ಸಂಗ್ರಹವಾಗಿದೆ.ಬ್ಯಾಂಕಿನ ಏಳ್ಗೆಯಲ್ಲಿ ಗ್ರಾಹಕರ ಸಹಕಾರ ಮುಖ್ಯ.ಸಾಲಗಾರ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೇ ಖಂಡಿತ ಬ್ಯಾಂಕ್ ಬೆಳವಣೆಯಾಗಲು ಸಾಧ್ಯ ಎಂದರು.

ಮುಖ್ಯ ಕಾರ್ಯನಿರ್ವಾಹಕ ಸಿದ್ದು ಭದ್ರಶೆಟ್ಟಿ ವಾರ್ಷಿಕ ವರದಿ ವಾಚನವನ್ನು ಮಾಡಿ ಮಾತನಾಡಿ ಗೌರಿ ಶಂಕರ ಸೌಹಾರ್ಧ ಪತ್ತಿನ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 921.87 ಲಕ್ಷ ದುಡಿಯುವ ಬಂಡವಾಳವನ್ನು ಹೊಂದಿದ್ದು.ಪ್ರತಿ ವರ್ಷ 1೦ ಕೋಟಿ ಠೇವುಗಳನ್ನು ಸಂಗ್ರಹಿಸುವ ಗುರಿಯನ್ನಿಟ್ಟುಕೊಂಡಿದ್ದು 5 ವರ್ಷದಲ್ಲಿ 5೦ ಕೋಟಿ ಠೇವಣೆಯ ಹಣವನ್ನು ಸಂಗ್ರಹಿಸಲಾಗುವುದು.ಸಧ್ಯ ಕೂಡಸಂಗಮ,ಕಂದಗಲ್ಲ,ಗುಡೂರ ಮತ್ತು ಕರಡಿಯಲ್ಲಿ ಹೊಸದಾಗಿ ನಾಲ್ಕು ಶಾಖೆಯನ್ನು ಆರಂಭಿಸಲಾಗುವುದು.ಮುಂದಿನ ದಿನಗಳಲ್ಲಿ ಬಾಗಲಕೋಟಿ,ಬದಾಮಿ,ಗುಳೇದಗುಡ್ಡ,ಬೀಳಗಿ,ಮುದ್ದೇಬಿಹಾಳ,ಬಸವನ ಬಾಗೇವಾಡಿಯಲ್ಲಿ ಶಾಖೆಯನ್ನು ತರೆಯಲಾಗುವುದು ಎಂದರು.ಈ ಸಂದರ್ಭದಲ್ಲಿ ಬ್ಯಾಂಕಿನ ಏಳ್ಗೆಗೆ ಎನ್.ಪಿ.ಮಣಸಿನಕಾಯಿ,ಈಶ್ವರ ಬಡ್ಡಿ,ನಿಂಗನಗೌಡ ನಾಡಗೌಡ್ರ ಮಾತನಾಡಿದರು,ಉತ್ತಮ ಲಾಭಾಂಶ ಮಾಡಿದ ಬೇವಿನಮಟ್ಟಿ ಶಾಖೆ,ಉತ್ತಮ ವಸೂಲಿ ಮಾಡಿದ ಇದ್ದಲಗಿ ಮತ್ತು ಹುನಗುಂದ ಬಜಾರ್ ಶಾಖೆಗಳ ವ್ಯವಸ್ಥಾಪಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ನಿರ್ದೇಶಕರಾದ ಮುತ್ತಣ್ಣ ಕಲಗೋಡಿ,ನಿಂಗಪ್ಪ ಬಿದರಕುಂದಿ,ಶಿವಪ್ಪ ಭದ್ರಶೆಟ್ಟಿ,ಮಹಾಂತೇಶ ಕಡಿವಾಲ,ಫರವೇಜ್ ಖಾಜಿ,ಜಯಶ್ರೀ ತಳವಾರ,ಅಕ್ಕಮ್ಮ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button