ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಮಠ ಸಿದ್ದಯ್ಯನ ಕೋಟೆ 15 ರಿಂದ 20.ನೇ ತಾರೀಖಿನ ವರೆಗೆ ಜಾತ್ರೆ ಮಹೋತ್ಸವ.
ಸಿದ್ದಯ್ಯನ ಕೋಟೆ ಫೆಬ್ರುವರಿ.19

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನ ಕೋಟೆ ಗ್ರಾಮದಲ್ಲಿ ಇಳಕಲ್ ವಿಜಯ ಮಾಂತೇಶ್ವರ ಸಂಸ್ಥಾನ ಶಾಖಾ ಮಠವಿದ್ದು ವರ್ಷಕ್ಕೊಮ್ಮೆ ಜಾತ್ರೆ ಆರಂಭಿಸಿ ಕೊಳ್ಳುತ್ತಾರೆ ಈ ಜಾತ್ರೆಯಲ್ಲಿ ಭಜನೆ ನಾಟಕ ನೃತ್ಯ ಕಲಾ ನೃತ್ಯಗಳು ಕಬಡ್ಡಿ ಕೋಲಾಟ ಇನ್ನೂ ಅನೇಕ ಕಲಾ ನೃತ್ಯಗಳನ್ನು ಬಸವಲಿಂಗ ಸ್ವಾಮೀಜಿಗಳು ಜಾತ್ರೆಯಲ್ಲಿ ನಾಲ್ಕೈದು ದಿವಸ ಜಾತ್ರೆಯನ್ನು ಮಾಡುತ್ತಾರೆ ಈ ಮಠದ ಉಸ್ತುವಾರಿ ಕಾಂತರಾಜ್ ಮಾಜಿ ಸಚಿವ ಎಚ್ ಆಂಜನೇಯ ಈ ಮಠಕ್ಕೆ ಭೇಟಿ ಕೊಡುತ್ತಾರೆ ಮತ್ತೆ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಹ ಬಂದು ಹೋಗುತ್ತಾರೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಬಂದು ಸಿದ್ದಗಂಗಾ ಮಠದ ಸ್ವಾಮೀಜಿಗಳು ಮುರುಗ ಮಠದ ಸ್ವಾಮೀಜಿಗಳು ಇಳಕಲ್ ಸ್ವಾಮೀಜಿಗಳು ಗವಿಮಠದ ಸ್ವಾಮೀಜಿಗಳು ಈ ಸ್ವಾಮೀಜಿಗಳಿಗೆ ಭಕ್ತಾದಿಗಳು ಆಶೀರ್ವಾದ ಪಡೆಯುತ್ತಾರೆ ಈ ಜಾತ್ರೆಗೆ ಆಗಮಿಸುತ್ತಾರೆ ಮತ್ತು ಈ ಜಾತ್ರೆಗೆ ರಾಜಕೀಯವರು ಸಹ ಆಗಮಿಸುತ್ತಾರೆ ಈ ಜಾತ್ರೆಯಲ್ಲಿ ಸಿದ್ದನಕೋಟೆ ಓಣಿ ಓಣಿಗಳಲ್ಲಿ ಪಲ್ಲಕ್ಕಿಯೊಂದಿಗೆ ತಮಟೆ ವಾದ್ಯಗಳೊಂದಿಗೆ ಗೊಂಬೆ ನಂದಿಕೋಲು ಮೆರವಣಿಗೆ ಮುಖಾಂತರ ಪಲ್ಲಕ್ಕಿ ಸಾಗುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ತಿಪ್ಪೆಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು