ಉದ್ಭವ ಮೂರ್ತಿ ವೀರಭದ್ರ ಮುಚಖಂಡಿ
ಮುಚಖಂಡಿ ಏಪ್ರಿಲ್.09

ಮುಳುಗಡೆ ನಗರಿಗೆ ಖ್ಯಾತ ಧಾರ್ಮಿಕ, ಸಾಂಸ್ಕೃತಿಕ ಅಸಂಖ್ಯಾತ ಭಕ್ತರ ಆಚರಣೆ ಉತ್ಸವಗಳಿಗೆ ಹೆಸರುವಾಸಿಯಾದ ನಮ್ಮ ಕರುನಾಸಾಗರ ಕಣವಿ ವೀರಭದ್ರೇಶ್ವರ ದೇವರು, ಹಲವು ವೈಶಿಷ್ಟೇಗಳಿಗೆ ಖ್ಯಾತಿ ಪಡೆದ ಬಾಗಲಕೋಟೆ ನಗರದ ಮುಚಖಂಡಿ ಕೆರೆಯ ತಟದಲ್ಲಿ ಉದ್ಭವ ಮೂರ್ತಿಯಾಗಿ ಅಸಂಖ್ಯಾತ ಭಕ್ತರ ಮನದೊಳಗೆ ನೆಲೆ ಗೊಂಡಿರುವ ಶ್ರೀ ವೀರಭದ್ರೇಶ್ವರ ರಥೋತ್ಸವವು ಮಂಗಳವಾರ ಸಂಜೆ ನೇರವೇರಿಸಿ ಮಾರನೇಯ ದಿನ ಅಗ್ಗಿ (ಅಗ್ನಿ ) ಉತ್ಸವದೊಂದಿಗೆ ನೆರವೇರುವುದು.

ಸುಮಾರು ವರ್ಷಗಳ ಇತಿಹಾಸ ಹೊಂದಿರುವ ವೀರಭದ್ರ ದೇವರು ಕಡಿದಾದ ನಿರ್ಜನ್ ಪ್ರದೇಶದಲ್ಲಿ ತುಂಬು ಆಳದ ನೀರಿನ ಜಾಗದಲ್ಲಿ ಭೂಮಿಯಿಂದ ಮೇಲೇದ್ದು ಉದ್ಭವ ಮೂರ್ತಿಯಾಗಿ ದನಗಾಯಿ ಭಕ್ತಳ ನೆದರಿಗೆ ಬಿದ್ದು, ಊರ ಸಮೂಹದ ಭಕ್ತರೆಲ್ಲ ಸೇರಿಕೊಂಡು ಉದ್ಭವ ಜಾಗದಲ್ಲಿ ಪ್ರತಿಷ್ಠಾಪಿಸಿ ಕಣವಿ ವೀರಭದ್ರೇಶ್ವರನೆಂದು ನಾಮಕರಣ ಮಾಡಿ ಪೂಜಾ ಕೈಂಕರ್ಯ ಮಾಡುತ್ತಾ ದೇವಸ್ಥಾನದ ಜೀರ್ಣನ್ನೋದಾರ ಕೈಗೊಂಡು ಉಪ್ಪಿನ ಶಾಬಾದಿ ಅರಕೇರಿ ಕಲಾದಾಗಿ ಮನೆತನದವರೆಲ್ಲ ಸೇರಿ ಸರಕಾರದ ಸಹಕಾರದೊಂದಿಗೆ ದೇವಸ್ಥಾನ ಬೆಳೆದು ಇಂದು ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಶ್ರೀ ಬಸವೇಶ್ವರ್ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಜೀರ್ಣದ್ದಾರದ ನಿರ್ವಹಣೆಯನ್ನು ಈ ಟ್ರಸ್ಟ ನಿಭಾಯಿಸುತ್ತಿದೆ.
ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ. ಶಿರೂರು.