ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಭಾರತೀಯ ಅಂಚೆ ಇಲಾಖೆ ಹೊಂದಿದೆ – ವಿ.ಎಲ್.ಚಿತ್ ಕೋಟಿ.

ಕೊಟ್ಟೂರು ಸಪ್ಟೆಂಬರ್.24

ಎರಡು ಶತಮಾನಗಳ ಹಿಂದೆ ಸಂಪರ್ಕಕ್ಕಾಗಿ ಹುಟ್ಟಿಕೊಂಡ ಅಂಚೆ ಇಲಾಖೆ ಇಂದು ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ, ಹಳ್ಳಿಯಿಂದ ದಿಲ್ಲಿಯವರೆಗೆ, ದೇಶಗಳಿಂದ ವಿದೇಶಗಳವರೆಗೆ ಹಬ್ಬಿರುವ ಭಾರತೀಯ ಅಂಚೆ ಇಲಾಖೆ ಸೇವೆಯಲ್ಲಿ ಕೋಟಿ ಕೋಟಿ ಗ್ರಾಹಕರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ, ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಇಲಾಖೆ ಎಂದರೆ ಅದು ನಮ್ಮ ಭಾರತೀಯ ಅಂಚೆ ಇಲಾಖೆ ಎಂದು ಬಳ್ಳಾರಿಯ ಅಂಚೆ ಅಧೀಕ್ಷಕರಾದ ವಿ.ಎಲ್.ಚಿತ್ಕೋಟಿಯವರು ಕೊಟ್ಟೂರು ತಾಲೂಕಿನ ಹರಾಳ ಗ್ರಾಮದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಭಾರತ ಸರ್ಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆಯ ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ 1,56,000 ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದುರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಸೌಲಭ್ಯಗಳು ಸಿಗಲಿ ಎಂದು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು,” ಪೈಸೆಯಲ್ಲಿ ಕೊಟ್ಟ ರೊಕ್ಕವನ್ನು ರೂಪಾಯಿಯ ರೂಪ ದಲ್ಲಿ ಕೊಡುವ ಇಲಾಖೆ ಎಂದರೆ ಅದು ಅಂಚೆ ಇಲಾಖೆ” ಭಾರತ ಸರ್ಕಾರ ದೇಶದಲ್ಲಿ ಒಟ್ಟು 27 ಹೊಸ ಅಂಚೆ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಕೊಟ್ಟಿದೆ, ಅದರಲ್ಲಿ ನಮ್ಮ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಹೊಸ ಅಂಚೆ ಕಟ್ಟಡವನ್ನು ಒಂದು ಕೋಟಿ 69 ಲಕ್ಷ ರೂಪಾಯಿಗಳನ್ನು ಈಗಾಗಲೇ ಭಾರತ ಸರ್ಕಾರ ಅನುಮತಿ ಕೊಟ್ಟಿದೆ, ಶೀಘ್ರದಲ್ಲಿಯೇ ಕೊಟ್ಟೂರಿನಲ್ಲಿ ಹೊಸ ಅಂಚೆ ಕಟ್ಟಡ ತಲೆ ಎತ್ತುತ್ತದೆ, ನಂಬಿಕೆಗೆ ಇನ್ನೊಂದು ಹೆಸರೇ ಅಂಚೆ ಇಲಾಖೆ, ಇಂಥ ಇಲಾಖೆಯ ಸೌಲಭ್ಯಗಳನ್ನು ಹಳ್ಳಿಗಳಿಗೂ ವಿಸ್ತರಿಸಿರುವ ಸರ್ಕಾರ ಮತ್ತು ಇಲ್ಲಿ ಅಧಿಕಾರಿಗಳನ್ನು ನಿಜಕ್ಕೂ ಪ್ರಶಂಸೆ ಪಡಲೇಬೇಕು ಎಂದು ಕೊಟ್ಟೂರಿನ ಮುಖಂಡರು ಆದ ಶೆಟ್ಟಿ ತಿಂದಪ್ಪನವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು, ಆಧಾರ್ ಸೌಲಭ್ಯದಿಂದ ಹಲವಾರು ಸೌಲಭ್ಯಗಳು ದೊರಕುತ್ತವೆ ಮತ್ತು ಎಲ್ಲೇ ಖಾತೆ ತೆರೆದರು ಆಧಾರ್ ಕಾರ್ಡ್ ಕಡ್ಡಾಯವಾಗಿ ಇರುತ್ತದೆ, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಮತ್ತು ಅಂಚೆ ಇಲಾಖೆ ಖಾತೆಗಳಿಂದ ಹಣ ಬಿಡಿಸಿಕೊಳ್ಳುವುದು ಹಾಗೂ ಆ ಹಣವನ್ನು ಪೋಸ್ಟ್ ಆಫೀಸ್ ನ ಇತರೆ ಖಾತೆಗಳಿಗೆ ಕಟ್ಟುವುದು,

ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಹಾಕಿದ ಹಣವನ್ನು ಬಿಡಿಸಿಕೊಳ್ಳುವ ವ್ಯವಸ್ಥೆಯನ್ನು ಈಗ ಅಂಚೆ ಇಲಾಖೆಯೂ ಮಾಡುತ್ತಿದೆ, ದೇಶದ ಪ್ರಧಾನ ಮಂತ್ರಿಗಳು ಮೊನ್ನೆ ತಾನೆ ಜಾರಿ ಮಾಡಿದ ಮಹಿಳಾ ಸಮ್ಮಾನ್ ಉಳಿತಾಯ ಪತ್ರವು, ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯು ಒಬ್ಬ ಗ್ರಾಹಕನನ್ನು 21 ವರ್ಷಗಳ ಕಾಲ ನಮ್ಮ ಇಲಾಖೆಯಲ್ಲಿ ಇರಿಸಿಕೊಳ್ಳುವುದು ಇಲಾಖೆ ಹೆಮ್ಮೆಯ ವಿಷಯ, ಇಲಾಖೆಯ ಒಳಗೆ ಬಂದ ಗ್ರಾಹಕನಿಗೆ ಒಂದಲ್ಲ ಒಂದು ರೀತಿಯ ಸೌಲಭ್ಯವನ್ನು ಕೊಟ್ಟು ಆ ವ್ಯಕ್ತಿಯ ಹಣಕಾಸಿನ ಆಧಾರದ ಮೇಲೆ ಅವನಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವಲ್ಲಿ ಮತ್ತು ಪಿಂಚಿಣಿದಾರರಿಗೆ ಭದ್ರತೆಯನ್ನು ಒದಗಿಸುವಲ್ಲಿ ಇಲಾಖೆಯು ತುಂಬಾ ಕೆಲಸ ಮಾಡುತ್ತಿದೆ ಎಂದು ಕೂಡ್ಲಿಗಿ ಉಪ ಅಂಚೆ ನಿರೀಕ್ಷಕರಾದ ರಾಜಪ್ಪ ಬಾರಿಕರ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು, ಸ್ಥಳೀಯ ಮುಖಂಡರಾದ ಗುರುಮೂರ್ತಿ ನಮ್ಮ ಊರಿನಲ್ಲಿ ಅಂಚೆ ಇಲಾಖೆಯು ಇದುವರೆಗೂ ಆರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದೆ, ನಮ್ಮ ಊರು ಇಡೀ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಅಂಚೆ ಇಲಾಖೆಗೆ ಕೊಟ್ಟಿದೆ, ಹರಳು ಗ್ರಾಮದ ಜನರು ಮತ್ತು ಅಂಚೆ ಇಲಾಖೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು, ಸ್ಥಳೀಯ ಮುಖಂಡರಾದ ಬಣಾಕರ ಹಾಲಪ್ಪ ಮಾತನಾಡುತ್ತಾ ಯಾವುದೇ ಕೆಲಸವನ್ನಾದರೂ ಅಂಚೆ ಇಲಾಖೆ ತುಂಬಾ ಪ್ರಾಮಾಣಿಕವಾಗಿ ಮಾಡುತ್ತದೆ, ಅದಕ್ಕಾಗಿ ಇದು 170ಕ್ಕೂ ಹೆಚ್ಚು ವರ್ಷಗಳ ಕಾಲ ಜೀವಂತವಾಗಿದೆ ಮತ್ತು ಮುಂದು ಸಾವಿರಾರು ವರ್ಷಗಳ ಕಾಲ ಇದು ಬಾಳಿ ಬದುಕಬೇಕು, ಹಳ್ಳಿಗಳ ಕಡೆಗೆ ಮುಖ ಮಾಡಿರುವ ಅಂಚೆ ಇಲಾಖೆ ಮತ್ತು ಇದರ ಸಿಬ್ಬಂದಿ ವರ್ಗಕ್ಕೆ ನಮ್ಮ ಊರಿನವರ ಮೂಲಕ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರೇಣುಕಾಚಾರಿ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಕೊಟ್ಟೂರಿನ ಅಂಚೆ ಪಾಲಕರಾದ ರಾಜಶೇಖರ್, ಉಜ್ಜಿನಿಯ ಅಂಚೆಪಾಲಕರಾದ ರಾಜಶೇಖರ ಶೆಟ್ಟಿ, ಕೊಟ್ಟೂರು ಬಜಾರಿನ ಅಂಚೆ ಪಾಲಕರಾದ K O ನಾಗರಾಜ, ಅರಳು ಗ್ರಾಮೀಣ ಅಂಚೆಪಾಲಕರಾದ ಪೃಥ್ವಿ, ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಿಕೊಂಡಿದ್ದರು, ಕೊಟ್ಟೂರಿನ ಅಂಚೆ ಸಹಾಯಕ ಕೆಂಗನವರ ಸತೀಶ್ ಆಧಾರ್ ತಿದ್ದುಪಡಿಯನ್ನು ನಡೆಸಿಕೊಟ್ಟರು, ವಲಯ ಸಂಘಟನೆಕಾರ ಗ್ರಾಮೀಣ ಅಂಚೆ ಸೇವಕ ವಿ ಬನ್ನೇಶ್, ಹಾಗೂ ಗ್ರಾಮೀಣ ಅಂಚೆ ಪಾಲಕರಾದ ಹನುಮಂತಪ್ಪ, ಶಿವಕುಮಾರ, ಮಲ್ಲೇಶ್, ಕೊಟ್ಟೂರಿನ ಎಲ್ಲಾ ಗ್ರಾಮೀಣ ಅಂಚೆಪಾಲಕರು ಹಾಗೂ ಉಜ್ಜಿನಿಯಾ ಎಲ್ಲಾ ಗ್ರಾಮೀಣ ಅಂಚೆಪಾಲಕರು ಕಾರ್ಯಕ್ರಮದಲ್ಲಿ ಹಾಜರಿದ್ದರು, ಜೋಳದ ಕೂಡ್ಲಿಗಿ ಗ್ರಾಮೀಣ ಅಂಚೆ ಪಾಲಕರಾದ ವಿ, ಮಂಜುನಾಥ್ ಸ್ವಾಗತ ಹಾಗೂ ನಿರೂಪಣೆಯನ್ನು ಮಾಡಿದರು, ದೀಪಿಕಾ ಯಶೋದ, ವಂದನಾರ್ಪಣೆ ಮಾಡಿದರು,

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button