ಕೊಟ್ಟೂರಿನಲ್ಲಿ ರೈತರ ಧರಣಿ ಸತ್ಯಾಗ್ರಹ.
ಕೊಟ್ಟೂರು ಸಪ್ಟೆಂಬರ್.25
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಇವರು ಉಜ್ಜಿನಿ ಸರ್ಕಲ್ ನಿಂದ ತಾಲೂಕು ತಹಶೀಲ್ದಾರರ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮಳೆಗಾಲದ ಮುಕ್ಕಾಲು ಭಾಗ ಮುಕ್ತಾಯವಾಗಿದ್ದರು ಸರ್ಕಾರ 161 ತಾಲೂಕುಗಳನ್ನು ಮಾತ್ರ ಬರಗಾಲವೆಂದು ಘೋಷಣೆ ಮಾಡಿದ್ದು ಉಳಿದ 74 ತಾಲ್ಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು. ವಿದ್ಯುತ್ತನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು, ಬ್ಯಾಂಕ್ ಮತ್ತು ಫೈನಾನ್ಸ್ ಗಳ ಸಾಲ ವಸೂಲಾತಿ ಕಿರುಕುಳವನ್ನು ನಿಲ್ಲಿಸಬೇಕು.

ರೈತರ ಪಂಪ್ ಸೆಟ್ ಗಳ ಆರ್ ಆರ್ ನಂಬರ್ ಗಳಿಗೆ ಮಾಡಬೇಕೆಂದು ರೈತ ವಿರೋಧಿ ನೀತಿಗಳ ವಿರುದ್ಧ ಜಿಲ್ಲಾ ತಾಲೂಕು ಕಚೇರಿಗಳ ಎದುರು ರೈತರ ಧರಣಿ ಸತ್ಯಾಗ್ರಹ ಮಾಡಿ ಕೊಟ್ಟೂರು ತಾಲೂಕಿನಲ್ಲಿ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿ ಅಂಟಿಕೊಂಡಿರುವುದು ಹಾಗೂ ಟ್ರಾನ್ಸ್ಫರೆಂಟ್ ಹಾಗೂ ಮರಗಳಿಗೆ ಮರ ಟೊಂಗೆಗಳು ಹಾದು ಹೋಗಿರುವುದು ಅತಿ ಹೆಚ್ಚಾಗಿ ಕಂಡುಬರುತ್ತದೆ ಇದಲ್ಲದೆ ಟ್ರಾನ್ಸ್ಫಾರಂ ಮತ್ತು ಆರ್ ಆರ್ ನಂಬರ್ ಪಡೆಯಲು 20000 ರೂ. ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರಂತೆ ಮತ್ತು ತೋಟಗಾರಿಕೆ ರೇಷ್ಮೆ ಇಲಾಖೆಯಲ್ಲಿ ರೈತರಿಗೆ ಆಗುವ ಅನ್ಯಾಯ ಅಕ್ರಮಗಳು ಅತಿರೇಕವಾಗಿವೆ ಇದಕ್ಕೆ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಮುಂದೆ ಇಂತಹ ಧರಣಿಗಳಲ್ಲದೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುವುಲಾಗುವುದು ಎಂದು ಎನ್ ಭರಮಣ್ಣ ರಾಜ್ಯ ಉಪಾಧ್ಯಕ್ಷರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಎನ್ ನಾಗಪ್ಪ ಜಿಲ್ಲಾ ಉಪಾಧ್ಯಕ್ಷರು ಶ್ರೀಧರ್ ಎಸ್ ಒಡೆಯರ್ ಕೊಟ್ಟೂರು ತಾಲೂಕು ಅಧ್ಯಕ್ಷರು ಮತ್ತು ಅನೇಕ ರೈತ ಪದಾಧಿಕಾರಿಗಳು ಗೀತಾಂಜಲಿ ಸಿಂಧೆ ಪಿಎಸ್ಐ ಕೊಟ್ಟೂರು ಮತ್ತು ಸಿಬ್ಬಂದಿ ವರ್ಗ ಹಾಗೂ ರೈತಾಪಿ ವರ್ಗದವರು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು