ಐದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ಗೆ ಇಂದು ಉದ್ಘಾಟನಾ ಭಾಗ್ಯ – ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.
ಹುನಗುಂದ ಸಪ್ಟೆಂಬರ್.25
ಪಟ್ಟಣ ಅಮರಾವತಿ ರಸ್ತೆಯಲ್ಲಿ ಕಳೆದ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ನಿರ್ಮಾಣವಾಗಿ ಕಾರ್ಯಾರಂಭವಾಗದೇ 5 ವರ್ಷಗಳಿಂದ ಧೂಳು ಇಡಿದು ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟಿನ್‌ಗೆ ಸಧ್ಯ ಉಧ್ಘಾಟನಾ ಭಾಗ್ಯ ಕೂಡಿ ಬಂದಿದ್ದು ಹುನಗುಂದ ಪಟ್ಟಣ ಸೇರಿದಂತೆ ಇಡೀ ತಾಲೂಕಿನ ಜನತೆಗೆ ಸಂತಸ ತಂದಿದೆ.ಹೌದು ಕಳೆದ ಕಾಂಗ್ರೇಸ್ ಸರ್ಕಾರ ಬಡವರ,ನಿರ್ಗತಿಕರ,ಕೂಲಿ ಕಾರ್ಮಿಕರಿಗೆ ಕಡಿಮೆ ಬೆಲೆಯಲ್ಲಿ ಊಟ ಮತ್ತು ತಿಂಡಿಯನ್ನು ನೀಡಬೇಕು ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಉದ್ದೇಶದಿಂದ ಕಳೆದ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯನವರ 2೦೧7 ಆ.15 ರಂದು ಇಂದಿರಾ ಕ್ಯಾಂಟೀನ್ ಆರಂಭಿಸಿದರು.ಅದೇ ವೇಳೆಗೆ ಹುನಗುಂದ ಪಟ್ಟಣದ ಅಮರಾವತಿ ರಸ್ತೆಯ ಗುರುಭವನದ ಪಕ್ಕಕ್ಕೆ 2೦೧7 ವರ್ಷದ ಅಂತ್ಯಕ್ಕೆ ಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿ ಪೂರ್ಣಗೊಂಡು ಇನ್ನೇನು ಉದ್ಘಾಟಿಸಬೇಕು ಎನ್ನುವಷ್ಟರಲ್ಲಿ 2೦೧8ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಉದ್ಘಾಟನೆ ಭಾಗ್ಯವಿಲ್ಲದೇ ಹಾಗೆ ಉಳಿದಿತ್ತು. ಅದರಲ್ಲೂ ಮಹಾಮಾರಿ ಕರೋನಾ ಬಂದಾಗ ಕೆಲಸವಿಲ್ಲದೇ ಕಂಗಾಲಾದ ಅನೇಕ ಕುಟುಂಬಗಳಿಗೆ ಆಸರೆಯಾಗಬಹುದು ಇಂದಿರಾ ಕ್ಯಾಂಟೀನ್‌ನ್ನು ಈಗಲಾದರೂ ಸರ್ಕಾರ ಮನಸ್ಸು ಮಾಡಿ ಆರಂಭಿಸುತ್ತಾರಾ ಅಂತಾ ಕಾಯ್ದುವರಿಗೂ ಆಗೀನ ಸರ್ಕಾರ ಇಂದಿರಾ ಕ್ಯಾಂಟಿನ ಆರಂಭಿಸಲಿಲ್ಲ.ಇದರಿಂದ ಪಟ್ಟಣದ ಸಾರ್ವಜನಿಕರಿಗೆ ಕಾಂಗ್ರೇಸ್ ಸರ್ಕಾರದ ಹಸಿವು ನೀಗಿಸುವ ಯೋಜನೆ ಕೇವಲ ಕಟ್ಟಡ ರೂಪದಲ್ಲಿಯೇ ಐದು ವರ್ಷ ಕಳೆದು ಹೋಯಿತು.ಸಧ್ಯ ಮತ್ತೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮತ್ತು ವಿಜಯಾನಂದ ಕಾಶಪ್ಪನವರ ಮತ್ತೇ ಹುನಗುಂದ ಮತಕ್ಷೇತ್ರದ ಶಾಸಕರಾಗಿದ್ದರಿಂದ ಇಂದಿರಾ ಕ್ಯಾಂಟೀನ್‌ಗೆ ಮರುಜೀವ ಬಂದಿದ್ದು.

ಅದರಲ್ಲೂ ಹುನಗುಂದ ಪಟ್ಟಣದ ಇಂದಿರಾ ಕ್ಯಾಂಟಿನ್ ಧೂಳು ಇಡಿದು ಅನಾಥವಾಗಿದ್ದ ಇಂದಿರಾ ಕ್ಯಾಂಟಿನ್‌ಗೆ ಸೆ.25 ರಂದು ಉದ್ಘಾಟನೆ ಭಾಗ್ಯ ಒಲಿದು ಬಂದಿದ್ದರಿಂದ ಪಟ್ಟಣದ ಜನತೆಯ ಬಹುದಿನಗಳ ಕನಸ್ಸು ಕೊನೆಗೂ ನನಸ್ಸಾಗಿದೆ.ಬಾಕ್ಸ್ ಸುದ್ದಿ-ಪೌರಾಡಳಿತ ಇಲಾಖೆ ಮತ್ತು ಪುರಸಭೆಯ ಸಹಯೋಗದಲ್ಲಿ ಸೆ.25 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಸಮಾರಂಭ ಜರುಗಲಿದೆ.ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಸುವರು,ಅಬಕಾರಿ ಇಲಾಖೆ ಹಾಗೂ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ,ಶಾಸಕ ಎಚ್.ವಾಯ್,ಮೇಟಿ,ಸಂಸದ ಪಿ.ಸಿ.ಗದ್ದಿಗೌಡರ,ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರಿ,ಹನಮಂತ ನಿರಾಣಿ,ಸುನೀಲಗೌಡ ಪಾಟೀಲ,ಪ್ರಕಾಶ ಹುಕ್ಕೇರಿ,ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ,ತಹಶೀಲ್ದಾರ ನಿಂಗಪ್ಪ ಬಿರಾದಾರ,ಸಿಪಿಐ ಸುನೀಲ ಸವದಿ,ಪಿಎಸ್‌ಐ ಚನ್ನಯ್ಯ ದೇವೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ