ಪ್ರವಾದಿ ಅವರ ಕುರಿತು ತಾಲೂಕ ಮಟ್ಟದ ರಸಪ್ರಶ್ನೆ ಹಾಗೂ ನಾತ್ ಪಠಣ ಕಾರ್ಯಕ್ರಮ ಜರುಗಿತು.

ಇಂಡಿ ಸಪ್ಟೆಂಬರ್.26

ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲೆ ಮ್ಮಹಮ್ಮದಿಯಾ ನಾತ್ ಕಮಿಟಿ ವತಿಯಿಂದ ತಾಲೂಕಾ ಮಟ್ಟದಲ್ಲಿ ಪ್ರವಾದಿ ಅವರ ಕುರಿತು ರಸಪ್ರಶ್ನೆ ಹಾಗೂ ನಾತ್ ಪಠಣ ಕಾರ್ಯಾಕ್ರಮ ನಡೆಯಸಲಾಯಿತು.ಈ ಕಾರ್ಯಕ್ರಮ ಮುಖ್ಯಾತಿಥಿಯಾಗಿ ಆಗಮಿಸಿ ಮಾತನಾಡಿದ ಸೀರಾಜ ಜಂಖಾನಿ , ಮೂಪ್ತಿ ಅಬ್ದುಲ ರಾಹೆಮಾನ ಅರಬ, ಮೌಲಾನಾ ಜಿಯಾವುಲಹಕ್ ಉಮರಿ,ಇಲಿಯಾಸ ಬೋರಾಮಣಿ, ಪ್ರವಾದಿ ಮುಹಮ್ಮದ್‌ರ ಬಗ್ಗೆ ಅಪ ಪ್ರಚಾರವನ್ನು ಮಾಡುತ್ತಿದ್ದಾರೆ. ಅವರು ಬದುಕಿದ್ದಾಗಲೂ ಅಪ ಪ್ರಚಾರ ಮಾಡಿದ್ದರು. ಆದರೆ, ಅವೆಲ್ಲವನ್ನೂ ಅವರು ಮಾನವೀಯ ಮೌಲ್ಯಗಳ ಗುಣಗಳ ಮೂಲಕ ಎದುರಿಸಿದರು. ಮನುಷ್ಯ ಕುಲವೊಂದೇ ಎಂಬುದನ್ನು ಪ್ರವಾದಿಗಳು ಸಾರಿದರು. ಭಾರತದಂತಹ ದೇಶ ಮುನ್ನಡೆಸಲು ಎಲ್ಲರೂ ಜೊತೆ ಗೂಡಿದರೆ ಮಾತ್ರ ಸಾಧ್ಯ. ಭಾರತೀಯರು ಇದನ್ನು ಅರ್ಥೈಸಬೇಕು ಪ್ರವಾದಿಗಳ ಸಂದೇಶಗಳು ಜನರ ಮನ ಮುಟ್ಟಬೇಕಾಗಿದೆ. ಗುಡಿ-ಮಸೀದಿಗಳಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿದರು. ಪ್ರವಾದಿ ಸಂದೇಶ ಸಾರ್ವಕಾಲಿಕವಾದುದು. ಮನುಷ್ಯ ಸಮಾನತೆಯ ಅತ್ಯುತ್ಕೃಷ್ಟ ಮಾದರಿಯನ್ನು ಸಮಾಜಕ್ಕೆ ತೋರಿಸಿಕೊಟ್ಟರು.ಭಾರತೀಯ‌ ಸಮಾಜಕ್ಕೆ ಅವರ ಸಂದೇಶ ಪ್ರಸ್ತುತ ಎಂದರು. ನಾವು ಪರರ ಹಿತ ಬಯಸುವವರಾಗಬೇಕು. ಪ್ರವಾದಿಗಳು ಮಾನವೀಯ ಬದುಕು ಸವೆಸಿದರು. ಅವರು ದಾರಿ ದೀಪಗಳು. ದೇವನ ಸಂದೇಶ ಆಲಿಸಿ ಪಾಲಿಸಬೇಕು” ‌ಎಂದು ಹೇಳಿದರು.ನಮಹಮ್ಮದಿಯಾ ನಾತ್ ಕಮೀಟಿ ಜಿಲ್ಲಾ ಅಧ್ಯಕ್ಷ ಸೈಯದ್ ಮುಸತಫಾ ಕಾದರಿ, ಜಹಾಂಗಿರ ಹಿಪ್ಪರಗಿ, ಅಬ್ದುಲ ನಬಿ ಜಾಮಾದಾರ, ಅಬ್ದುಲ ರಜಾಕ ಕೋಲಾರ, ಮಹಿಯೊದ್ದಿನ ಬೊದಿಹಾಳ, ಅಬುಬಕರ ಅಂಬಾರಖಾನೆ, ಪುರಸಭೆ ಸದಸ್ಯ ಅಯುಬ ಬಾಗವಾನ, ಅಬ್ದುಲಮಾಜಿದ ಸೌದಾಗರ, ಅತೀಕ ಶೇಖ್, ಬಶೀರ ಇನಾಮದಾರ, ರಫೀಕ ಜಂಬಗಿ, ಇಸಾಕ ಮುಲ್ಲಾ, ಹಸನ ಮುಜಾವರ, ಅಶಿಫ್ ಜಮಾದಾರ, ರಫೀಕ ಮುಲ್ಲಾ, ನಾಸೀರ ಇನಾಮದಾರ, ಮುಜೀಬ ಅಫಜಲಪೂರ, ಮುನ್ನಾ ಇಂಡಿಕರ, ಅಬ್ದುಲಾ ಪಾಟೇಲ ಸೆರಿದಂತೆ ಇದತರರು ಇದ್ದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button