1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆ – ಶೀಘ್ರದಲ್ಲಿಯೇ ಹುನಗುಂದ 1. ಇಲಕಲ್ಲದಲ್ಲಿ 2 ಇಂದಿರಾ ಕ್ಯಾಂಟೀನ್.

ಹುನಗುಂದ ಸಪ್ಟೆಂಬರ್.27

ಇಂದಿರಾ ಕ್ಯಾಂಟಿನ್ ಕಳೆದ ಐದು ವರ್ಷಗಳಲ್ಲಿ ಕಾರ್ಯಾ ರಂಭವಾಗಬೇಕಿತ್ತು ಆದರೇ ಇಂದಿರಾ ಗಾಂಧಿಯವರ ಹೆಸರು ಇದ್ದುದ್ದರಿಂದ ಹಿಂದಿನ ಬಿಜೆಪಿ ಸರ್ಕಾರ ಮತ್ತು ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಅದನ್ನು ಆರಂಭಿಸಲು ಹಿಂದೇಟು ಹಾಕಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.ಪಟ್ಟಣದ ಅಮರಾವತಿ ರಸ್ತೆಯ ಗುರುಭವನದ ಪಕ್ಕದಲ್ಲಿ ೧ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟಿನ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ನಮ್ಮ ಸರ್ಕಾರ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರಾಜ್ಯದ ಜನತೆ ಹಸಿದ ಹೊಟ್ಟೆಯಲ್ಲಿ ಯಾರು ಮಲಗಬಾರದು ರಾಜ್ಯದ ಬಡವರು,ನಿರ್ಗತಿಕರು,ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ತಿಂಡಿ ಮತ್ತು ಊಟ ಕೊಡುವ ಮಹತ್ವಕಾಂಕ್ಷಿ ಯೋಜನೆಯನ್ನು ಇಡೀ ರಾಜ್ಯದ ಜಿಲ್ಲಾ ಮತ್ತು ತಾಲೂಕ ಕೇಂದ್ರದಲ್ಲಿ ಆರಂಭಿಸಿದರು.ಆದರೇ ತಾಲೂಕಿನಲ್ಲಿ ಹಸಿದವರಿಗೆ ಅನ್ನ ಕೊಡುವುದರಲ್ಲೂ ರಾಜಕಾರಣ ಮಾಡಿದರು.ಅಲ್ಲದೇ ಇಂದಿರಾ ಗಾಂಧಿಯವರ ಹೆಸರಿದೆ ಎನ್ನುವ ಕಾರಣಕ್ಕೆ ೫ ವರ್ಷ ಮುಂದೂಡಿದರು.ಅಭಿವೃದ್ದಿ ವಿಷಯದಲ್ಲಿ ಈ ರೀತಿ ಜನವಿರೋಧಿ ರಾಜಕಾರಣ ಸರಿಯಲ್ಲ.ಇಂದಿರಾ ಗಾಂಧಿ ವಿಶ್ವ ಮೆಚ್ಚಿದ ನಾಯಕಿ.ಅವರ ಕಾಲದ ಜನಪರ ಯೋಜನೆಗಳನ್ನು ಯಾವತ್ತೂ ಮರೆಯಲಾಗದು.ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ.ಜನರ ಋಣ ದೊಡ್ಡದು.ಜನ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯ.ಅದಕ್ಕೆ ನಾವು ಬದ್ಧ.ಶೀಘ್ರದಲ್ಲಿ ಇಳಕಲ್ಲದಲ್ಲಿ ಎರಡು ಮತ್ತು ಹುನಗುಂದದಲ್ಲಿ ಇನ್ನೊಂದು ಕ್ಯಾಂಟೀನ್ ತೆರೆಯಲಾಗುವುದು ಎಂದರು.

ಮುಖಂಡ ಮಹಾಂತೇಶ ಅವಾರಿ ಮಾತನಾಡಿ ಜನರ ಅನುಕೂಲಕ್ಕಾಗಿ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ ಅದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಮತ್ತು ಬಡವರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಸಿಗಬೇಕು ಯಾರು ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಇಂದಿರಾ ಕ್ಯಾಂಟಿನನಲ್ಲಿ ೫ ರೂಗೆ ತಿಂಡಿ ೧೦ ರೂ ಊಟ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ ಹಾಗೂ ವಿಜಯಮಹಾಂತೇಶ ಗದ್ದನಕೇರಿ ಮಾನಾಡಿದರು.ಪುರಸಭೆ ಸದಸ್ಯರಾದ ಮೈನು ಧನ್ನೂರ, ಚಂದ್ರು ತಳವಾರ,ರಾಜಮ್ಮ ಬದಾಮಿ,ಶಾಂತಮ್ಮ ಮೇಲಿನಮನಿ, ಶಾಂತಪ್ಪ ಹೊಸಮನಿ, ಬಸವರಾಜ ಗೊಣ್ಣಾಗರ, ನಾಗರತ್ನ ತಾಳಿಕೋಟಿ, ಶರಣು ಬೆಲ್ಲದ, ಚೆಂದಪ್ಪ ಕಡಿವಾಲ, ಮುಖಂಡರಾದ ಬಿ.ವಿ.ಪಾಟೀಲ, ಬಸವರಾಜ ಗದ್ದಿ, ಯಮನಪ್ಪ ಬೆಣ್ಣಿ, ಜೈನಸಾಬ ಹಗೇದಾಳ, ಶಿವಾನಂದ ಕಂಠಿ, ನೀಲಪ್ಪ ತಪೇಲಿ, ರವಿ ಹುಚನೂರ, ಸಂಗಣ್ಣ ಗಂಜಿಹಾಳ, ಹನಮಂತ ನಡುವಿನಮನಿ, ಮಹಾಲಿಂಗಯ್ಯ ಹಿರೇಮಠ, ಸಂಗಣ್ಣ ಎಮ್ಮಿ, ಪರಸಪ್ಪ ಸಂದಿಮನಿ, ಅರ್ಷದ ನಾಯಿಕ, ಶಾಂತಯ್ಯ ಮಠ, ದಾನಮ್ಮ ಹಾದಿಮನಿ, ಪಿಎಸ್‌ಐ ಚೆನ್ನಯ್ಯ ದೇವೂರ ಉಪಸ್ಥಿತರಿದ್ದರು.ಮುಖ್ಯಾಧಿಕಾರಿ ಸತೀಶಕುಮಾರ ಚವಡಿ ಸ್ವಾಗತಿಸಿದರು.ಶಿಕ್ಷಕ ಎಸ್.ಕೆ.ಕೊನೆಸಾಗರ ನಿರೂಪಿಸಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button