ಮಾತೆಯಾಗಿ ದೇವರಾದ ಅವ್ವ…

ಹೃದಯದೊಳಗಿನ ದೈವ ನೀನೆ ಹಡೆದವ್ವ
ಹೊತ್ತು ಹೆತ್ತು ತುತ್ತುಣಿಸಿದ ಮಮತೆಯ ಹೆತ್ತವ್ವ
ಅತ್ತರೆ ನಗಿಸಿ ಸಂತೈಸಿದ ಕರುಣಾಮಹಿ ಅವ್ವ
ಗರ್ಭದಿ ಪೋಷಿಸಿ ಲಾಲಿಸಿದ ಪ್ರೀತಿಯ ನಮ್ಮವ್ವ
ಋಣವ ತೀರದು ಮಾಡಿಸಿದರು ಚರ್ಮದ ಚಪ್ಪಲಿಯು
ಮಡಿಲಲಿ ಸ್ವರ್ಗ ಕರುಣಿಸಿ ನೀಡಿದೆ ನೆಮ್ಮದಿಯು
ತೊಟ್ಟಿಲಲಿ ಜೋಗುಳವಾಡಿದ ಸಂಗೀತ ದೇವತೆಯು
ಬಿದ್ದಾಗ ಎಬ್ಬಿಸಿ,ಸೋತಾಗ ಬೆನ್ನು ತಟ್ಟಿದ
ಮಹಾತಾಯಿಯು
ಗುಡಿಯಿರದ ದೇವರಾದೆ ಸ್ವಲ್ಪವು ಸ್ವಾರ್ಥವಿರದ ಬಂಧು
ಮಗುವಿನ ಉಸಿರಾದೆ ಬದುಕಿದೆ ಕುಟುಂಬಕ್ಕೆ ಹೆಸರು
ತಂದುತಂದೆಗೆ ಆಸರೆಯಾದೆ ದಾನದಲಿ ಕರ್ಣನಷ್ಟೇ ಮುಂದು
ತವರಿಗೆ ದೂರವಾದೆ ಹೆತ್ತವರಿಗೆ ಮಾದರಿ ನೀನೆಂದೆಂದು
ಉಣಿಸಿದೆ ನನಗೆ ಯೋಚಿಸದೇ ನಿನ್ನ ಹಸಿದ ಹೊಟ್ಟೆ
ಕೊಡಿಸಿದೆ ಹೊಸ ಬಟ್ಟೆ ಗಮನಿಸದೇ ನಿನ್ನ ಹರಿದ ಬಟ್ಟೆ
ಕೊಟ್ಟ ದುಡ್ಡಿಗೆ ಲೆಕ್ಕವಿಡದೆ ಬದುಕೇ ಮುಡಿಪಾಗಿಟ್ಟೆ
ತ್ಯಾಗಿಯಾದೆ ಸ್ಪೂರ್ತಿಯಾದೆ ಬದುಕಾದೆ ಅಮ್ಮ ನೀ
ದೇವರಾಗಿ ಬಿಟ್ಟೆ
ಶ್ರೀ ಮುತ್ತು.ಯ.ವಡ್ಡರ(ಶಿಕ್ಷಕರು),
ಹಿರೇಮಾಗಿ ಬಾಗಲಕೋಟ
Mob-9845568484