ಈದ್ ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸದ ಮುಸ್ಲಿಂ ಭಾಂಧವರು.
ಹುನಗುಂದ ಸಪ್ಟೆಂಬರ್.28

ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಆಚರಿಸಲಾಗುತ್ತಿದೆ.ಬೆಳಿಗ್ಗೆ ಪಟ್ಟಣದ ಶಾದಿ ಮಾಲ್‌ನಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಮೆರವಣಿಗೆ ಉದ್ದಕ್ಕೂ ಬೃಹತ್ತಾದ ಹಸಿರು ಬಣ್ಣದ ಧ್ವಜಗಳ ಹಾರಾಟ ಧ್ವಜಗಳಲ್ಲಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳು ಮೆರವಣಿಗೆಯಲ್ಲಿ ವಿಶೇಷವಾಗಿತ್ತು.ಮೆರವಣಿಗೆಯಲ್ಲಿ ಮಹಮದ್ ಪೈಗಂಬರ್ ಅವರ ಸಂದೇಶಗಳನ್ನು ಒಳಗೊಂಡ ಹಾಡುಗಳು ಡಿಜೆಯೊಂದಿಗೆ ಪ್ರಸಾರವಾಗುತ್ತಿದ್ದಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ಸಮಾಜ ಬಾಂಧವರು ಹೆಜ್ಜೆ ಹಾಕುತ್ತಿರುವ ದೃಶ್ಯ ಕಂಡುಬಂದಿತು.ಈದ್ ಮಿಲಾದ್ ಆಚರಣೆ ಪ್ರಯುಕ್ತ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು ಹೊಸ ಬಟ್ಟೆ ಧರಿಸಿದ್ದ ಮಕ್ಕಳು ಮೆರವಣಿಗೆಗೆ ರಂಗು ತಂದರು.ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿ.ಮ.ವೃತ್ತಕ್ಕೆ ಆಗಮಿಸಿತು ನಂತರ ಈದ್ ಮಿಲಾದ್ ಆಚರಣೆ ಅಂಗವಾಗಿ ಕರ್ನಾಟಕ ಮುಸ್ಲಿಂ ಯೂನಿಟಿ ಸದಸ್ಯರು ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು.ಈ ಸಂದರ್ಭದಲ್ಲಿ ವೇ.ಮೂ.ಮಹಾಂತಯ್ಯ ಗಚ್ಚಿನಮಠ,ಮುಸ್ಲಿಂ ಯುನಿಟಿಯ ರಾಜ್ಯಾಧ್ಯಕ್ಷ ಜಬ್ಬಾರ ಕಲ್ಬುರ್ಗಿ,ಮಹೆಬೂಬ್ ಸರ್ಕಾವಸ್, ಮಹಾಂತೇಶ ಅವಾರಿ.ನೀಲಪ್ಪ ತಪೇಲಿ,ರವಿ ಹುಚನೂರ,ಇಮಾಮ್ ಕರಡಿ,ಅಲ್ತಾಫ್ ಕಲ್ಬುರ್ಗಿ,ಮಹೆಬೂಬ್ ಖತೀಬ್,ರಿಯಾಜ್ ಸರ್ಕಾವಸ್, ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ