ಮಾಕನಡಕು ಶಾಲೆ ಕಬ್ಬಡ್ಡಿ ಪಂದ್ಯ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ಕೂಡ್ಲಿಗಿ ಸಪ್ಟೆಂಬರ್.28

ತಾಲೂಕಿನ ಹೊಸಳ್ಳಿ ಹೋಬಳಿಯ ಚಿಕ್ಕ ಜೋಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಕನಾಡುಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ಬಡ್ಡಿ ಪಂಧ್ಯವು ಜಿಲ್ಲಾ ಮಟ್ಟದಿಂದ ವಲಯ ಮಟ್ಟಕ್ಕೆ ಆಯ್ಕೆ ಆಗಿರುವುದನ್ನು ಹೂವಿನ ಹಡಗಲಿಯಲ್ಲಿ ವಿಜಯನಗರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವನ್ನು ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದು ಈ ಜಿಲ್ಲಾ ಮಟ್ಟದ ಪಂದ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಕನಡಕು ಬಾಲಕರು ಕಬ್ಬಡಿ ವಿಭಾಗದಲ್ಲಿ ಮೊದಲಿನ ಬಾರಿಗೆ ಗೆಲವು ಸಾಧಿಸಿದ್ದಾರೆ.ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಮ್ಮ ವಿದ್ಯಾರ್ಥಿಗಳು ಈ ಹಂತಕ್ಕೆ ಪ್ರವೇಶ ಪಡೆದಿರುವುದಕ್ಕೆ ಶಾಲೆಯ ಪ್ರಭಾವರ ಮುಖ್ಯ ಶಿಕ್ಷಕಿ ಉಷಾರಾಣಿ ಇವರು ಸಂತೋಷದಿಂದ ಹೇಳುವ ಹಾಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯವನ್ನು ಗೆಲುವು ಸಾಧಿಸಲಿಕ್ಕೆ ಮುಖ್ಯ ಕಾರಣ ನಮ್ಮ ಮಾಕನಡಕು ಗ್ರಾಮದ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ನಮ್ಮ ಶಾಲಾ ಮಕ್ಕಳಿಗೆ ಕಲಿಸಿದ ಕಟ್ಟಿಣ ಅಭ್ಯಾಸ ಶ್ರಮ ಮತ್ತು ಪ್ರೋತ್ಸಾಹ ನೀಡಿದ್ದು ಜೊತೆಗೆ ನಮ್ಮ ಶಾಲೆಯ ಸಿಬ್ಬಂದಿಯವರಾದ ಪ್ರಶಾಂತ, ಕೃಷ್ಣಮೂರ್ತಿ , ಭಾಗ್ಯಲಕ್ಷ್ಮಿ ,ವೀರೇಶ್ ಪೂಜಾರಿ ಮತ್ತು ಶಿವಮೂರ್ತಿ, ಶಿವಪ್ಪ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮುದ್ದಪ್ಪ ಎಸ್ ,ಸರ್ವ ಸದಸ್ಯರು ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button