ಕರ್ನಾಟಕ ಬಂದ್ ಕಾವೇರಿ ಕಿಚ್ಚು ವಿಜಯನಗರದಲ್ಲಿ ಪ್ರತಿಭಟನೆ.
ಹೊಸಪೇಟೆ ಸಪ್ಟೆಂಬರ್.29

ವಿಜಯನಗರದ ಗಾಂಧೀಜಿ ವೃತದಿಂದ ಆರಂಭಗೊಂಡ ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ಸಹ ಯೋಗದೊಂದಿಗೆ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮುಖೇನ ಪ್ರತಿಭಟನೆ ಆರಂಭಗೊಂಡಿತು ತಮಿಳುನಾಡಿನ ವಿರುದ್ಧ ಘೋಷಣೆ ಕೂಗುತ್ತಾ ಕಾಲ್ನಡಿಗೆಯಲ್ಲಿ ಪುನೀತ್ ರಾಜಕುಮಾರ್ ಸರ್ಕಲ್ ಬಳಿ ಆಗಮಿಸಿ ಮಾನವ ಸರ್ಪಳಿ ರಚಿಸಿ ಪ್ರತಿಭಟನೆ ಕೈಗೊಂಡರು ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಮುಖಂಡರು ಹಾಗೂ ರೈತ ಪರ ಸಂಘಟನೆ ಮುಖಂಡರು ಮಾತನಾಡಿದರು ಕರ್ನಾಟಕದಲ್ಲಿ ಮುಂಗಾರು ಮಳೆ ವಿಫಲವಾಗಿದೆ. ರಾಜ್ಯ ಬರದ ಬೇಗೆಯಲ್ಲಿದೆ ರಾಜ್ಯದ ಸುಮಾರು ತಾಲೂಕುಗಳನ್ನು ಹೀಗಾಗಲೇ ಬರ ಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಕರ್ನಾಟಕ ಕನ್ನಂಬಾಡಿ ಕಟ್ಟಿ ಇನ್ನು ತುಂಬಿರುವುದಿಲ್ಲ. ಭತ್ತ ಬೆಳೆಯದಂತೆ ಅಚ್ಚು ಕಟ್ಟು ಪ್ರದೇಶದ ರೈತರಿಗೆ ಸೂಚಿಸಲಾಗಿದೆ, ಬೆಳೆದು ನಿಂತಿರುವ ಕಬ್ಬಿಗೆ ನೀರು ಸಾಲುತ್ತಿಲ್ಲ, ಬೆಂಗಳೂರು ಸೇರಿದಂತೆ ಕುಡಿಯುವ ನೀರಿಗಾಗಿ ಕಾವೇರಿಯನ್ನು ಅವಲಂಬಿಸಿರುವ ನಗರ ಪಟ್ಟಣಗಳು ಕೊರತೆ ಅನುಭವಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತಮಿಳು ನಾಡಿಗೆ ಸುಪ್ರಿಮ್ ಕೋರ್ಟ್ 5000 ಕ್ಯೂಸೆಕ್ಸ್ ನೀರನ್ನು ಬಿಡಲು ಆದೇಶಿಸಿದ ಇದು ನಿಜಕ್ಕು ಖಂಡನೀಯವಾಗಿದೆ.

ಕಾವೇರಿ ನದಿ ಪ್ರಾಧಿಕಾರ ತಮಿಳುನಾಡಿನ ಪರ ನಿರ್ಣಯ ತೆಗೆದುಕೊಂಡಿರುವ ಬಗ್ಗೆ ಕನ್ನಡ ಪರ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತವೆ. ಕರ್ನಾಟಕದ ರೈತರಿಗೆ ಮಾಡುವ ಯಾವುದೇ ಅನ್ಯಾಯವನ್ನು ಕನ್ನಡ ಪರ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ಸಹಿಸಿಕೊಳ್ಳುವುದಿಲ್ಲ. ಆದ್ದರಿಂದ ಕೂಡಲೇ ನಾವುಗಳು ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಿಬೇಕೆಂದು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ನೀಡಿದರು.ಹಾಗೂ ಇಲ್ಲಿಯೂ ಸಹ ರೈತರಿದ್ದಾರೆ ಹೋರಾಟಗಾರರು ಇದ್ದಾರೆ ನಮ್ಮಲ್ಲಿಯೂ ಸಹ ಸಮಸ್ಯೆಗಳಿದ್ದಾವೆ ನಾವುಗಳು ಯಾವ ರೀತಿ ಬೆಂಬಲವನ್ನು ಸೂಚಿಸುತ್ತೇವೆ ಅದೇ ರೀತಿಯಲ್ಲಿ ನೀವು ಸಹ ನಮಗೆ ಬೆಂಬಲ ನೀಡಬೇಕೆಂದು ಹೇಳಿದರು.ಈ ಹೋರಾಟಕ್ಕೆ ಆಗಮಿಸಿದ ‘ಪುನೀತ್ ರಾಜಕುಮಾರ್’ಗನ್ ಮ್ಯಾನ್ ಆಗಿ ಕೆಲಸ ಮಾಡಿದ ‘ಚಲಪತಿ ‘ದೊಡ್ಡಮನೆ ಅವರ ಅಪ್ಪಾಜಿ ಹಾಗೂ ನಮ್ಮ ಯಜಮಾನರು ಆದ ಪುನೀತ್ ಸರ್ ಕನ್ನಡಪರ ಹಾಗೂ ನೀರಿನ ವಿಚಾರದಲ್ಲಿ ಹೋರಾಟಕೆ ಬೆಂಬಲ ನೀಡುತ್ತಾ ಬಂದಿರುವ ಕುಟುಂಬ ಅದೇ ರೀತಿಯಲ್ಲಿ ನನಗೂ ಸಹ ಕಾವೇರಿ ಪರ ಹೋರಾಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಯಜಮಾನರು ಇದ್ದಿದ್ದರೆ ನಾನು ಅವರ ಜೊತೆಯಲ್ಲಿ ಇರುತ್ತಾ ಇದ್ದೆ ಅವರ ಪ್ರತಿಮೆ ಮುಂಭಾಗದಲ್ಲಿ ನಿಂತು ಮಾತನಾಡುವಂತಾಗಿದೆ ಆದರೆ 15 ವರ್ಷಗಳ ಕಾಲ ಅವರ ಜೊತೆಗಿರುವ ಅವಕಾಶ ಸಿಕ್ಕಿರುವುದು, ನೀರಿಗಾಗಿ ಮಾಡುತ್ತಿರುವಂತ ಹೋರಾಟಕ್ಕೆ ನ್ಯಾಯ ಸಿಗಲೆಂದು ಹೇಳಿದರು.ವಿಜಯನಗರ ಬಂದ್ ಮಿಶ್ರ ಪ್ರತಿಕ್ರಿಯೆ ಸಾರ್ವಜನಿಕರ ಆಸ್ತಿಗಳಿಗೆ ಯಾವುದೇ ರೀತಿ ಕುಂದು ಕೊರತೆ ಆಗದಂತೆ ಎಚ್ಚರಿಕೆ ವಹಿಸಿದರುಪೊಲೀಸರು ಯಾವುದೇ ರೀತಿಯ ಅಹಿತಿಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

