ಬತ್ತಿ ಹೋದ ನರಸಿಂಹನ ಗಿರಿ ಫಾಲ್ಸ್.

ಕೂಡ್ಲಿಗಿ ಸಪ್ಟೆಂಬರ್.29

ಬರದ ನಾಡಿನಲ್ಲಿ ಆಗುತ್ತಿರುವ ಮಳೆಯಿಂದ ನರಸಿಂಹನ ಗಿರಿಯ ಎತ್ತರವಾದ ಬೆಟ್ಟ ಕಲ್ಲುಗಳ ಗುಡ್ಡಗಳು ಈ ಗುಡ್ಡಕ್ಕೆ ಅಂಟಿಕೊಂಡಿರುವ ಬೃಹತ್ಕಾರವಾದ ಜಾರುಬಂಡೆ, ಈ ಜಾರು ಬಂಡೆ ಮದ್ಯೆ ಹಾಲ್ನೂರೆಯಂತೆ ಮೇಲಿನಿಂದ ಧುಮುಕುತ್ತಿರುವ ಜಲ ರಾಶಿ, ನರಸಿಂಹನ ಗಿರಿ ಫಾಲ್ಸ್ ಸುತ್ತಲು ಬೆಟ್ಟ ಕಲ್ಲು ಗುಡ್ಡಗಳು ಉತ್ತಮ ಮಳೆಯಾದರೆ ಹಸಿರಿನಿಂದ ಕಂಗೊಳಿಸುತ್ತದೆ ಅಪರೂಪಕ್ಕೆ ಸಿಗುವ ನರಸಿಂಹನ ಗಿರಿಯ ಫಾಲ್ಸ್ ಇಲ್ಲಿನ ಜನರು ನರಸಿಂಹ ನಾಯಕನ ಬೆಟ್ಟದ ಮೇಲೆ ಫಾಲ್ಸ್ ರೀತಿ ನೀರು ಬರುತ್ತವೆ ಅಂತಾ ಮಾತನಾಡುತ್ತಿದ್ದರು ಇದಕ್ಕೆ ಯಾವುದೇ ಹೆಸರಿಲ್ಲ ಜನರು ಸುಮ್ಮನೆ ಫಾಲ್ಸ್ ಅಂತ ಹೇಳುತ್ತಿದ್ದರು. ಇದಕ್ಕೆ ನಾವೇ ನರಸಿಂಹನ ಗಿರಿ ಅಂದರೆ ನಮಗೆ ನೆನಪು ಆಗುವುದು ನರಸಿಂಹನ ಗಿರಿಯ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣನವರು ನೆನಪು ಅದಕ್ಕೆ ನಮ್ಮ ಪತ್ರಿಕಾ ತಂಡದ ಮಾಧ್ಯಮದ ಮಿತ್ರರು ಇದಕ್ಕೆ ಸೂಕ್ತವಾದ ಹೆಸರು ಎನ್.ಟಿ.ಬಿ ಗಿರಿ ಫಾಲ್ಸ್ ಹಂತ ಹೆಸರಿಡೋಣ ಅಂತ ತೀರ್ಮಾನ ತೆಗೆದುಕೊಂಡು ನಾವು ಎನ್.ಟಿ.ಬಿ ಗಿರಿ ಫಾಲ್ಸ್ ಹೆಸರಿಟ್ಟಿದ್ದೇವೆ. ಮಳೆಗಾಲ ಉತ್ತಮವಾಗಿ ಆದರೆ ಎನ್.ಟಿ.ಬಿ ಗಿರಿ ಫಾಲ್ಸ್ ನೋಡಲು ಸಾಕಷ್ಟು ಸ್ಥಳೀಯರು ಆಗಮಿಸುತ್ತಿದ್ದು, ಈ ಬಾರಿ ಮಳೆ ಬರದ ಕಾರಣ ಎನ್.ಟಿ.ಬಿ ಗಿರಿ ಫಾಲ್ಸ್ ಬತ್ತಿ ಹೋಗಿದೆ ಉತ್ತಮ ಮಳೆಗಾಲ ಆದರೆ ಸಾಕು. ಕೂಡ್ಲಿಗಿ ಸುತ್ತಮುತ್ತ ಸ್ಥಳೀಯರು ಈ ಫಾಲ್ಸ್ ನೋಡುವುದಕ್ಕೆ ಆಗಮಿಸುತ್ತಿದ್ದರು. ಈ ಫಾಲ್ಸ್ ನೋಡುವುದಕ್ಕೆ ತುಂಬ ಸೊಗಸಾಗಿ ಇರುತ್ತದೆ ಬೆಟ್ಟ ತುಂಬಾ ಎತ್ತರಕ್ಕೆ ಇರುವುದರಿಂದ ಜಾರು ಬಂಡೆ ಮೇಲೆ ಮೇಲಿನಿಂದ ಹಾಲಿನ ನೊರೆಯಂತೆ ನೀರು ಹರಿದು ಬರುವ ದೃಶ್ಯವನ್ನು ನೋಡುವುದಕ್ಕೆ ಸ್ಥಳೀಯರು ದಂಡೆ ಹರಿದು ಬರುತ್ತಿತ್ತು.

ಕೂಡ್ಲಿಗಿ ತಾಲೂಕಿನಲ್ಲಿ ಸಾಕಷ್ಟು ಬೆಟ್ಟ ಗುಡ್ಡಗಳು ಕಾಣುತ್ತದೆ ಆದರೆ ನರಸಿಂಹನ ಗಿರಿಯ ಬೆಟ್ಟವು ಕೂಡ ತುಂಬಾ ಎತ್ತರಕ್ಕೆ ಇದೆ ಈ ರೀತಿ ಬೆಟ್ಟದ ಜಾರು ಬಂಡೆ ಮೇಲುನಿಂದ ನೀರು ಹರಿದು ಬರುವ ಸ್ಥಳ ಕೂಡ್ಲಿಗಿ ತಾಲೂಕಿನಲ್ಲಿ ಎಲ್ಲಿ ಇಲ್ಲ ಫಾಲ್ಸ್ ನಲ್ಲಿ ನೀರು ಹೇಗೆ ಬರುತ್ತದೆ ಹಾಗೆ ಮಳೆಗಾಲ ಉತ್ತಮವಾಗಿ ಬಂದರೆ ಸಾಕು ನರಸಿಂಹನ ಗಿರಿ ಬೆಟ್ಟದಲ್ಲಿ ಜೋಗ್ ಫಾಲ್ಸ್ ನಲ್ಲಿ ಹೇಗೆ ನೀರು ಧುಮುಕುತ್ತವೆ ಹಾಗೆ ನರಸಿಂಹನ ಗಿರಿಯ ನರಸಿಂಹ ನಾಯಕನ ಬೆಟ್ಟದ ಮೇಲೆ ಫಾಲ್ಸ್ ನಂತೆ ನೀರು ಧುಮುಕುವ ದೃಶ್ಯವನ್ನು ನೋಡಬಹುದು,. ಇನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಪತ್ರಿಕೆ ವರದಿಗಾರರು ಹೋಗಿ ಭೇಟಿಯಾಗಿ ಉತ್ತಮ ಮಳೆ ಆದರೆ ನರಸಿಂಹನ ಗಿರಿ ಬೆಟ್ಟದ ಮೇಲಿನಿಂದ ನೀರು ಫಾಲ್ಸ್ ರೀತಿಯಲ್ಲಿ ಹರಿದು ಬರುತ್ತಿವೆ. ಬೆಟ್ಟದ ಮೇಲೆ ಉಗ್ರ ನರಸಿಂಹ ನಾಯಕ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ಹೊಂಡವನ್ನು ಸ್ವಚ್ಛಗೊಳಿಸಿ ದುರಸ್ತಿ ಮಾಡಿದರೆ ಚೆನ್ನಾಗಿ ಇರುತ್ತದೆ. ಅಂತ ನಾವು ಕೇಳಿದಾಗ. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತಪ್ಪನವರು ನಮಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರ್ಮಿಷನ್ ಕೊಟ್ಟರೆ ಖಂಡಿತವಾಗಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮಲ್ಟಿಯರ್ ಚೆಕ್ ಡ್ಯಾಮ್ ಮಾಡುವುದಕ್ಕೆ ಅವಕಾಶವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪರ್ಮಿಷನ್ ಕೊಟ್ಟರೆ ಖಂಡಿತವಾಗಿ ಮಾಡುತ್ತೇವೆ ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆ jee ಸಜ್ಜನ್ ನವರು ಮಾತನಾಡಿ ಮಲ್ಟಿಯಾರ್ ಚೆಕ್ ಡ್ಯಾಮ್ ಮಾಡುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪರ್ಮಿಷನ್ ಕೊಟ್ಟರೆ ನಾವುಗಳು ಸಂಬಂಧಪಟ್ಟ ನಮ್ಮ ಇಲಾಖೆಯ ಅಧಿಕಾರಿಗಳ ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ನರಸಿಂಹ ನಾಯಕ ಆಳ್ವಿಕೆ ಕಾಲದಲ್ಲಿ ನಿರ್ಮಿಸಿರುವ ಹೊಂಡವನ್ನು ದುರಸ್ತಿಗೊಳಿಸಿ ಮಲ್ಟಿಯಾರ್ ಚೆಕ್ ಡ್ಯಾಮ್ ನಿರ್ಮಾಣ ಮಾಡಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಹನುಮಂತಪ್ಪ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ನರಸಿಂಹಪ್ಪ, ಬಿ ಫ್ ಟಿ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್ ಅವರು ನರಸಿಂಹನ ಗಿರಿ ಬೆಟ್ಟದ ಮೇಲೆ ಇರುವ ಉಗ್ರನರಸಿಂಹ ನಾಯಕ ಕಾಲದಲ್ಲಿ ನಿರ್ಮಿಸಿರುವ ಹೊಂಡವನ್ನು ನಮ್ಮ ಪತ್ರಿಕ ತಂಡದೊಂದಿಗೆ ವೀಕ್ಷಣೆ ಮಾಡಿದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button