ಕೃಷ್ಣೆಗೆ ನಿರಂತರ ನೋವಿನ ಕಣ್ಣೀರು – ಕಾವೇರಿ ಸದಾ ಹೋರಾಟಗಾರರ ಪನ್ನೀರು ಇದು ನ್ಯಾಯವೇ…? – ಮಲ್ಲಿಕಾರ್ಜುನ.ಎಂ.ಬಂಡರಲ್ಲ.

ಹುನಗುಂದ ಸಪ್ಟೆಂಬರ್.29

ಕೃಷೆ ಮತ್ತು ಕಾವೇರಿ ನದಿಗಳು ಅಖಂಡ ಕರ್ನಾಟಕದ ಜೀವ ನದಿಗಳು ಎಂದು ದೊಡ್ಡ ದೊಡ್ಡ ಭಾಷಣ ಬಿಗಿಯುವ ರಾಜಕಾರಣಿಗಳು,ಕನ್ನಡಪರ ಹೋರಾಟಗಾರರು,ಬುದ್ದಿ ಜೀವಿಗಳು,ಕಾವೇರಿ ನದಿ ನೀರಿನ ವಿಚಾರಕ್ಕೆ ತೋರುವ ಮಹತ್ವ ಕೃಷ್ಣೆಗೆ ಅನ್ಯಾಯವಾದಾಗ ಅಸಡ್ಡೆ ಮನೋಭಾವ ತೋರುವುದು ಯಾಕೆ ? ಒಂದು ಕಣ್ಣಿಗೆ ಬೆಣ್ಣೆ ಇನ್ನುಂದು ಕಣ್ಣಿಗೆ ಸುಣ್ಣ ಬಳಿಯುವ ನಾಟಕ ಕರ್ನಾಟಕದ ನದಿ ವಿಚಾರದ ಇತಿಹಾಸದಲ್ಲಿ ನಿರಂತರ ಕೃಷ್ಣೆಗೆ ಮಲತಾಯಿ ಧೋರಣೆ ಯಾಕೆ ? ಎನ್ನುವ ಬಹುದೊಡ್ಡ ಪ್ರಶ್ನೆ ಸಧ್ಯ ಉತ್ತರ ಕರ್ನಾಟಕದ ಜನತೆಗೆ ಕಾಡುತ್ತಿದೆ.ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಆಗೊಮ್ಮೆ ಈಗೊಮ್ಮೆ ಕೇಳಿ ಮತ್ತೇ ಮರೆಯಾಗಿ ಹೋಗುತ್ತದೆ.ಅದರಲ್ಲೂ ನದಿ ನೀರಿನ ವಿಚಾರ,ನೀರಾವರಿ ಅನುದಾನ ವಿಚಾರದಲ್ಲಿ ಉತ್ತರ ಕರ್ನಾಟಕಗಿಂತಲ್ಲೂ ದಕ್ಷಿಣ ಕರ್ನಾಟಕಕ್ಕೆ ಪ್ರತಿ ಬಜೆಟ್‌ನಲ್ಲಿ ಸಿಂಹಪಾಲು ನೀಡುವಾಗಲೂ ಅಸಮದಾನದ ಹೊಗೆ ತಾಂಡವಾಡುತ್ತಿದೆ.ಸಧ್ಯ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯ ಕೊಳ್ಳದ ಜನತೆಗೆ ನಿರಂತರ ಅನ್ಯಾಯ ಕ್ಕೊಳಗಾಗುತ್ತಿದ್ದರೂ ಕೂಡಾ ಆ ಅನ್ಯಾಯದ ವಿರುದ್ದ ಉತ್ತರ ಕರ್ನಾಟಕದ ಜನರು ಮಾತ್ರ ಹೋರಾಟ ಮಾಡತ್ತಾರೆ ಆದರೆ ದಕ್ಷಿಣ ಕರ್ನಾಟಕದ ಕಾವೇರಿ ನದಿಯ ನೀರಿನ ವಿಚಾರದಲ್ಲಿ ಹೋರಾಟ ಮಾಡುವ ಬುದ್ದಿ ಜೀವಿಗಳು ಕೃಷ್ಣೆಯ ವಿಚಾರದಲ್ಲಿ ತುಟಿ ಪಿಟಕ್ಕೆನ್ನದೆ ಕುಳಿತುಕೊಳ್ಳುವುದು ಯಾಕೆ ? ಕಾವೇರಿ ನದಿ ನೀರಿಗೆ ಹೋರಾಟ ಮಾಡಿದ್ದಂತೆ ಯಾವಾಗ ಕೃಷ್ಣೆಯ ವಿಚಾರದಲ್ಲಿ ಹೋರಾಟ ಮಾಡಿದ ಉದಾಹರಣೆ ಇದೆ ಹೇಳಿ ? ಕೃಷ್ಣೆಯು ನಮ್ಮ ರಾಜ್ಯದ ಉದ್ದವಾದ ನದಿ ಅದಕ್ಕೆ ಅನ್ಯಾಯವಾಗಿದೆ.ಅಲ್ಲಿನ ನದಿ ಪಾತ್ರದ ಜನತೆ ನಿತ್ಯ ಅನ್ಯಾಯಕೊಳ್ಳಗಾಗಿ ಕೃಷ್ಣೆಯ ಒಡಲಿನಲ್ಲಿ ನೂರಾರು ಗ್ರಾಮಗಳು ಆಸ್ತಿ ಪಾಸ್ತಿ,ಜನ ಜಾನುವಾರುಗಳು ನೀರಿನಲ್ಲಿ ನೀರಾಗಿ ಹೋಗಿವೆ,ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗಿ ಕೃಷ್ಣೆ ಮತ್ತು ಮಲಪ್ರಭೆ ನದಿ ಪಾತ್ರದ ಜನರು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ.ಮನೆ ಆಸ್ತಿಯನ್ನು ಕಳೆದುಕೊಂಡು ಮಳೆ,ಚಳಿ,ಬಿಸಿಲೆನ್ನದೇ ಬೀದಿಯ ಮೇಲೆ ಹತ್ತು ಹದಿನೈದು ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ಜೀವನ ನಡೆಸುತ್ತಿದ್ದಾರೆ ಮಾನವೀಯತೆಗಾದರೂ ಅವರಿಗೊಂದು ನೆಲೆಯನ್ನು ಕಲ್ಪಿಸುವಂತೆ ದಕ್ಷಿಣ ಕರ್ನಾಟಕದ ಹೋರಾಟಗಾರರು ಯಾವಾಗ ಬೀದಿಗೀಳಿದು ಹೋರಾಟ ಮಾಡಿದ್ದೀರಿ ? ಮನೆಯನ್ನು ಕಳೆದುಕೊಂಡು ಬೀದಿಯಲ್ಲಿ ಜೀವನ ನಡೆಸುತ್ತಿರುವ ಅದೆಷ್ಟೋ ಗ್ರಾಮಗಳ ಜನತೆಯ ಪುನರ್ ವಸತಿ ಕಲ್ಪಿಸುವಂತೆ ಸೌಜನ್ಯಕ್ಕಾದರೂ ಅವರ ಗೋಳು ಕೇಳುವ ಗೋಚಿಗಾದರೂ ಹೋರಾಟ ಮಾಡಲು ದಕ್ಷಿಣ ಕರ್ನಾಟಕದ ಯಾವೊಬ್ಬ ರಾಜಕಾರಿಣಿ,ನಾಡು ನುಡಿ ಜಲಕ್ಕೆ ಅನ್ಯಾಯವಾದಾಗ ಹೋರಾಟ ಮಾಡುವ ಕನ್ನಡಪರ ಸಂಘಟನೆಗಳ ರಾಜ್ಯಾಧ್ಯಕ್ಷರು ಯಾರೊಬ್ಬರು ಧ್ವನಿ ಎತ್ತಿದ್ದೀರಿ ಹೇಳಿ? ಕೃಷ್ಣೆ ಸಲುವಾಗಿ ಯಾವ ಸಂದರ್ಭದಲ್ಲಿ ಬೆಂಗಳೂರ ಬಂದ್ ಮಾಡಿ ಹೋರಾಟ ಮಾಡೀದ್ದೀರಿ ಹೇಳಿ? ಕೃಷ್ಣಾ ತೀರದಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ ಅವುಗಳ ಅಭಿವೃದ್ದಿ ವಿಚಾರದಲ್ಲಿ ಹೋರಾಟ ಮಾಡಿದ್ದೀರಾ ? ಕಾವೇರಿಗೆ ಅನ್ಯಾಯವಾದಾಗ ಇಡೀ ಕರ್ನಾಟಕದ ಜನತೆ ಹೋರಾಟಕ್ಕೆ ಬೆಂಬಲ ಸೂಚಿಸಿ ಬೀದಿಗೀಳಿದು ಹೋರಾಟ ಮಾಡುತ್ತಾರೆ.ಕೃಷ್ಣೆ ವಿಚಾರಕ್ಕೆ ಯಾಕೆ ಹೋರಾಟ ಮಾಡಲ್ಲ.ಕಾವೇರಿಗೆ ನೀಡುವ ಮಾನ್ಯತೆ ಕೃಷ್ಠೆಗೆ ಯಾಕಿಲ್ಲ.ಕೃಷ್ಣಗೆ ಕಣ್ಣೀರು ಕಾವೇರಿಗೆ ಪನ್ನೀರುನಾ ? ಎನ್ನುವ ನೂರಾರು ನೋವಿನ ಪ್ರಶ್ನೆಗಳು ಉತ್ತರ ಕರ್ನಾಟಕದ ಪ್ರತಿಯೊಬ್ಬ ಕೃಷ್ಣೆಯ ಮಲಪ್ರಭೆ ನದಿ ಕೊಳ್ಳದ ಮಕ್ಕಳದಾಗಿದೆ.ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡಬೇಕೆಂದು ಹೇಳುತ್ತಿದ್ದಂತೆಯೇ ಬೆಂಗಳೂರನಲ್ಲಿ ಪ್ರತಿಭಟನೆ,ಬಂದ್ ಕರೆ ಜೋರಾಗಿ ಬಿಡುತ್ತೇ ಅಷ್ಟೆಯಲ್ಲ ಇಡೀ ಕರ್ನಾಟಕವೇ ಅದರ ಬೆಂಬಲಕ್ಕೆ ನಿಲ್ಲುತ್ತದೆ.ಆದರೆ ಉತ್ತರ ಕರ್ನಾಟಕದ ಕೃಷ್ಣ ನದಿ ಕೊಳ್ಳಕ್ಕೆ ಅದರ ಒಡಲಿನಲ್ಲಿರುವ ಅವಳ ಮಕ್ಕಳಿಗೆ ಅನ್ಯಾಯವಾದಾಗ ಕಾವೇರಿಗೆ ತೋರಿದ ಪ್ರೀತಿ,ಮಹತ್ವ,ಪ್ರತಿಭಟನೆ,ಹೋರಾಟ ಯಾಕೆ ಮರೆಯಾಗಿ ಹೋಗುತ್ತವೆ ಎನ್ನುವುದು ಉತ್ತರ ಕರ್ನಾಟಕ ಜನತೆಯ ಯಕ್ಷ ಪ್ರಶ್ನೆಯಾಗಿದೆ.ಕಾವೇರಿ ನದಿ ನೀರಿನ ಸಲುವಾಗಿ ಉತ್ತರ ಕರ್ನಾಟಕದ ಜನತೆ ಬೆಂಬಲ ನೀಡುವ ಮುಂಚೆ ಒಂದಿಷ್ಟು ಯೋಚಿಸಿ ಪ್ರತಿಭಟನೆ ಮತ್ತು ಬಂದ್‌ಗೆ ಬೆಂಬಲ ಸೂಚಿಸುವದು ಸೂಕ್ತ ಎನ್ನುತ್ತಿದ್ದಾರೆ ಉತ್ತರ ಕರ್ನಾಟಕದ ಜನತೆ.ಬಾಕ್ಸ್ ಸುದ್ದಿ-ಕೃಷ್ಣೆಯ ಒಡಲಿಗೆ ನಿರಂತರ ನೋವಿನ ಮೇಲೆ ನೋವು ಕೃಷ್ಣೆ ಕೊಳ್ಳದ ಮಕ್ಕಳು ಆಸ್ತಿಪಾಸ್ತಿ ಕಳೆದುಕೊಂಡು ನಿರಂತರ ಅನ್ಯಾಯಕ್ಕೊಳಗಾದರೂ ಕೂಡ ದಕ್ಷಿಣ ಕರ್ನಾಟಕದ ಜನರು ಕಿಂಚಿತ್ತು ಕಾಳಜಿ ಮಾಡೋದಿಲ್ಲ.ಸಧ್ಯ ಕಾವೇರಿ ಎಂದಾಕ್ಷಣವೇ ಹೋರಾಟ ಬಂದ್,ಪ್ರತಿಭಟನೆ,ಸರ್ಕಾರಕ್ಕೆ ಘೇರಾವು ಹಾಕುವುದು ನಿರಂತರ ನಡೆಯುತ್ತೇ ಇದನ್ನು ಕೃಷ್ಣೆ ಅನ್ಯಾಯವಾದಾಗ ಯಾಕೆ ಮಾಡೋದಿಲ್ಲ.ಬಸವರಾಜ ಕಮ್ಮಾರ ಹಿರಿಯ ಪತ್ರಕರ್ತರು ಹಾಗೂ ಸಮಾಜಿಕ ಹೋರಾಟಗಾರ ಹುನಗುಂದ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button