ಕೆ.ಪಿ.ಎಸ್. ಶಾಲೆಗಳನ್ನು ಮಂಜೂರು ಮಾಡಿಸಿ ಕೊಡುತ್ತೇನೆ – ಮಧು ಬಂಗಾರಪ್ಪ.
ತರೀಕೆರೆ ಸಪ್ಟೆಂಬರ್.29
ಮಕ್ಕಳನ್ನು ಓದಲಿಕ್ಕಾಗಿ ಕಳಿಸುವುದಷ್ಟೇ ಅಲ್ಲದೆ ಮನುಷ್ಯತ್ವ ಮಾನವೀಯ ಗುಣಗಳನ್ನು ಕಲಿಯುವಂತವರಾಗಬೇಕು ಮತ್ತು ಕ್ರೀಡಾ ಪಟುಗಳಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಇಂದು ತರೀಕೆರೆ ತಾಲೂಕು ಬಾವಿಕೆರೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗುಂಪು ಆಟಗಳ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದರು ರಾಜ್ಯದಲ್ಲಿ ಸುಮಾರು 76,000 ಶಾಲೆಗಳಿವೆ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳು ಎಲ್ಲವೂ ಸೇರಿ ಒಂದು ಕೋಟಿ 20 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ. ಮುಂದಿನ ವರ್ಷ ತರೀಕೆರೆ ಕ್ಷೇತ್ರಕ್ಕೆ ಕನಿಷ್ಠ ನಾಲ್ಕು ಕೆಪಿಎಸ್ ಶಾಲೆಗಳನ್ನು ಮಂಜೂರಿ ಮಾಡಿ ಕೊಡುವುದಾಗಿ ಹೇಳಿದರು. ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮ ಇರುತ್ತದೆ, ಹಾಗೂ ಎಲ್ಲಾ ಶಿಕ್ಷಕರ ಜೊತೆಗೆ ಚಿತ್ರಕಲಾ ಶಿಕ್ಷಕರು, ಸಂಗೀತ ಶಿಕ್ಷಕರು ಸಹ ಇರುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ಓದುತ್ತಿರುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಹಳ್ಳಿಯಿಂದ ದಿಲ್ಲಿ ಮಟ್ಟದವರೆಗೂ ಈ ಮಕ್ಕಳು ಬೆಳೆಯಬೇಕು. ದಿವಂಗತ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಉಚಿತ ವಿದ್ಯುತ್ತನ್ನು ನೀಡಿದ್ದರು, ಇಂದು ಸಿದ್ದರಾಮಯ್ಯನವರು ಎಲ್ಲರಿಗೂ ಸಹ ಉಚಿತ ವಿದ್ಯುತ್ತನ್ನು ಕೊಟ್ಟಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಕ್ಲಸ್ಟರ್ ಸಿಸ್ಟಮ್ ಮಾಡಲಾಗಿದೆ, ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ಮಾಡಿಕೊಟ್ಟಿದ್ದು 1,20,000 ಮಕ್ಕಳು ಪರೀಕ್ಷೆ ಬರೆದಿದ್ದಾರೆ ಅದರಲ್ಲಿ 42,000 ಮಕ್ಕಳು ಉತ್ತೀರ್ಣ ರಾಗಿರುತ್ತಾರೆ. ಮಕ್ಕಳ ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲು ವಾರಕ್ಕೆ ಎರಡು ಮೊಟ್ಟೆ ಕೊಡುವಂತೆ ಮಾಡಿದ್ದೇವೆ ಎಂದು ಹೇಳಿದರು. ಶಾಸಕರಾದ ಜಿಎಚ್ ಶ್ರೀನಿವಾಸ್ ಮಾತನಾಡಿ ದಿವಂಗತ ಎಸ್ ಬಂಗಾರಪ್ಪನವರು, ಮುಖ್ಯಮಂತ್ರಿ ಅವಧಿಯಲ್ಲಿ ಅನೇಕ ಜನಪರವಾದ ಯೋಜನೆಗಳು ಅಂದರೆ ಗ್ರಾಮೀಣ ಕೃಪಾಂಕ, ಸಂಪೂರ್ಣ ಸಾಕ್ಷರತಾ ಯೋಜನೆ, ಆಶ್ರಯ ಯೋಜನೆ, ಆರಾಧನಾ ಯೋಜನೆ, ಜಾರಿಗೆ ತಂದಿದ್ದರು. ಭದ್ರಾ ಮೇಲ್ದಂಡೆ ಯೋಜನೆಯಿಂದ ಸುರಂಗ ಮಾರ್ಗದಲ್ಲಿ ಹಲವಾರು ಕಿಲೋ ಮೀಟರ್ಗಳು ನೀರು ಹರಿಯುತ್ತಿದ್ದು ರೈತರಿಗೂ ಹಾಗೂ ಕುಡಿಯುವ ನೀರಿಗೂ ತುಂಬಾ ತೊಂದರೆಯಾಗಿದೆ ಎಂದು ಹೇಳಿದರು. ಮಾಜಿ ಲೋಕಸಭಾ ಸದಸ್ಯರಾದ ಬಿ ಎನ್ ಚಂದ್ರಪ್ಪನವರು ಮಾತನಾಡಿ 1986 ರಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಎಂಪಿಯಾಗಿ ಡೆಲ್ಲಿಯವರೆಗೂ ಹೋಗಿರುತ್ತೇನೆ ಆದರೂ ಹೆಣ್ಣು ಮಕ್ಕಳು ಹಾಲುಂಡ ತವರನ್ನು ಮರೆಯುವುದಿಲ್ಲವೋ ಹಾಗೆಯೇ ನನ್ನ ಊರನ್ನು ಮರೆಯಲು ಸಾಧ್ಯವಿಲ್ಲ,ಹಳೆ ಗೆಳೆಯರನ್ನು ಮರೆಯಲು ಸಾಧ್ಯವಿಲ್ಲ. ಕ್ರೀಡೆಗಳಲ್ಲಿ ಸೋತವರು ಯಾರು ಬೇಸರ ಪಡಬೇಡಿ, ಸೋಲೇ ಗೆಲುವಿನ ಮೆಟ್ಟಿಲು ಎಂದು ತಿಳಿಯಿರಿ ಎಂದು ಹೇಳಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ ಬಾವಿಕೆರೆ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಗ್ರಾಮದ ಎಲ್ಲಾ ಜನರ ಸಹಕಾರ, ದಾನಿಗಳ ಸಹಕಾರ, ಶಾಸಕರಾದ ಜಿಎಚ್ ಶ್ರೀನಿವಾಸರವರ ಸಹಕಾರ ಮರೆಯುವಂತಿಲ್ಲ,ಅವರ ಪ್ರೋತ್ಸಾಹವೇ ಹಿಂದಿನ ಈ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಹೇಳಿದರು. ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಸೀತಾರಾಮ್ ರವರು ಕ್ರೀಡಾಪಟುಗಳಿಗೆ ಶುಭ ಕೋರಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪ ಮಾತನಾಡಿದರು. ಉಪ ವಿಭಾಗ ಅಧಿಕಾರಿ ಡಾ, ಕೆ ಜೆ ಕಾಂತರಾಜು, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರಾದ ರಂಗನಾಥ ಸ್ವಾಮಿ, ಕೆಎಸ್ ಪ್ರಕಾಶ್, ತಹಸಿಲ್ದಾರ್ ರಾಜೀವ, ತಾಲೂಕು ಪಂಚಾಯಿತಿ ಕಾರ್ಯಾ ನಿರ್ವಹಣಾಧಿಕಾರಿ ಗೀತಾ ಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಗೋವಿಂದಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಂ ಪ್ರಕಾಶ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ಅನುಬು, ತರೀಕೆರೆ ಪುರಸಭಾ ಅಧ್ಯಕ್ಷರಾದ ಪರಮೇಶ್, ಪುರಸಭಾ ಸದಸ್ಯರಾದ ಪಾರ್ವತಮ್ಮ ತಿಮ್ಮಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭದ್ರಪ್ಪ, ಮುಂತಾದವರು ಉಪಸ್ಥಿತರಿದ್ದರು ಅಚ್ಚುತ ಪ್ರಾರ್ಥಿಸಿ,ವಸಂತ ಕುಮಾರಿ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ