ಅ.1 ರಂದು ಕೊಪ್ಪಳದಲ್ಲಿ ಸರ್ಕಾರಿ ನೌಕರರ ಸಂಘದ ವಿಶೇಷ ಮಹಾಸಭೆ.
ಹುನಗುಂದ ಸಪ್ಟೆಂಬರ್.29
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2೦22 ರ ಉಪವಿಧಿಗಳ ತಿದ್ದುಪಡೆ ಮತ್ತು ಬೈಲಾ ತಿದ್ದುಪಡಿಯನ್ನು ತರುವ ಸಲುವಾಗಿ ಅ.1 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಹಿರೇಸಿಂದೋಗಿ ರಸ್ತೆ ಗೋಶಾಲೆ ಹತ್ತಿರದ ಮಹಾವೀರ ಸಮುದಾಯ ಭವನದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಢಾಕ್ಷರಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಸರ್ವ ಸದಸ್ಯರ ವಾಸ್ತವ ಮತ್ತು ವರ್ಚುವಲ್ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ ಎಂದು ಹುನಗುಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಗಣ್ಣ ಹಂಡಿ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರಿಗೆ ಇದು ಮಹತ್ವದ ಸಭೆಯಾಗಿದ್ದು.ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಆನಂದ ಗದ್ದನಕೇರಿ ಮಾತನಾಡಿ ಸರ್ಕಾರಿ ನೌಕರರ ಸಂಘದ ಹಲವಾರು ಇಲಾಖೆಗಳ ಸಮೂಹವನ್ನು ಹೊಂದಿದ್ದು.ಸಂಘದಲ್ಲಿ ಕೆಲವೊಂದು ಇಲಾಖೆಗಳ ನೌಕರರಿಗೆ ಮಾತ್ರ ಇಲ್ಲಿವರಗೆ ನಿರ್ದೇಶಕ ಸ್ಥಾನ ಸಿಗುತ್ತಿತ್ತು.ಅದರ ಜೊತೆಗೆ ಹಣಕಾಸಿನ ವಿಷಯಕ್ಕೂ,ನೌಕರರ ಹಿತ ರಕ್ಷಣೆಗಾಗಿ ಸಂಘದ ಮೂಲ ಬೈಲಾ ತಿದ್ದುಪಡೆಯನ್ನು ತರುವ ಮೂಲಕ ಎಲ್ಲ ಇಲಾಖೆಗಳ ನೌಕರರಿಗೆ ಅವಕಾಶ ಕಲ್ಪಿಸುವ ಮತ್ತು ಸೌಲಭ್ಯ ನೀಡುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದ್ದು.ಸರ್ಕಾರಿ ನೌಕರರು ಸ್ವಯಂ ಪ್ರೇರಿತರಾಗಿ ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.ಸಭೆಗೆ ಆಗಮಿಸದೇ ಇರುವ ನೌಕರರು ಕೇಂದ್ರ ಸಂಘದ ಫೇಸ್‌ಬುಕ್ ಖಾತೆ hಣಣಠಿs;//ತಿತಿತಿ.ಜಿಚಿಛಿebooಞ.ಛಿom/ಞsgeಚಿoಜಿಜಿiಛಿಚಿಟ/ ಖಾತೆಯಲ್ಲಿ ಲಭ್ಯವಿದ್ದು ಅದರಲ್ಲಿ ವಿಶೇಷ ಮಹಾಸಭೆಯನ್ನು ನೋಡಬೇಕು ಎಂದರು.ಈ ಸಂದರ್ಭದಲ್ಲಿ ಪಿ.ಟಿ.ದೊಡಮನಿ,ಈಶ್ವರ ಗೌಡರ,ಪಿ.ಕೆ.ಮುಲ್ಲಾ,ಎಸ್.ಎಲ್.ವನಜಕರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ