ಹುನಗುಂದ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ 11 ನೆಯ ಶಾಖೆ ಉದ್ಘಾಟನೆ – ರಾಷ್ಟ್ರೀಕೃತ ಬ್ಯಾಂಕ್ ನಿಯಮ ಕಠಣ.

ಹುನಗುಂದ ಸಪ್ಟೆಂಬರ್.30

ಸಹಕಾರಿ ಸಂಘಗಳು ಶ್ರೀಸಾಮಾನ್ಯರ ಕಷ್ಟ ಸುಖದಲ್ಲಿ ಭಾಗಿಯಾಗಿ ಅವರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು ಹೇಳಿದರು. ಶನಿವಾರ ಪಟ್ಟಣದ ಗುರು ಭವನದಲ್ಲಿ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ಹುನಗುಂದ ಪಟ್ಟಣದಲ್ಲಿ ನೂತನ ೧೧ನೇ ಶಾಖೆಯ ಪ್ರಾಂಭೋತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಸಿಕೊಂಡು ಮಾತನಾಡಿದ ಅವರು ಸಹಕಾರಿ ಸಂಘಗಳು ಉತ್ತರ ಕರ್ನಾಟಕದ ಭಾಗದ ಜನ ಸಾಮಾನ್ಯರ ಆತ್ಮೀಯತೆ ಮತ್ತು ವಿಶ್ವಾಸವನ್ನು ಗಳಿಸಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಕಠಿಣ ನಿಯಮಗಳಿಂದ ಜನ ಸಾಮಾನ್ಯರಿಗೆ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಆದರೇ ಸಹಕಾರಿ ಸಂಘಗಳ ವ್ಯವಹಾರದ ಸರಳೀಕರಣದ ಹೆಚ್ಚು ಜನ ಸಾಮಾನ್ಯರಿಗೆ ಅನುಕೂಲವಾಗಿವೆ.ಶತಮಾನ ಕಂಡ ಈ ಬ್ಯಾಂಕ್ ಕಟ್ಟಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆದು ಸಾವಿರಾರು ನೌಕರರಿಗೆ ಅನುಕೂಲ ಮಾಡಲು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ದಾರ್ಶನಿಕರ ನೆನೆಯುವುದು ಮುಖ್ಯ.ಸರ್ಕಾರಿ ನೌಕರರನ್ನು ನರಕಯಾತೆಗೆ ತಳ್ಳುತ್ತಿರುವ ಎನ್‌ಪಿಎಸ್ ಯೋಜನೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಸರ್ಕಾರಿ ನೌಕರರು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಹೇಳಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ ಸರ್ಕಾರಿ ನೌಕರರಿಗಾಗಿ ಇರುವ ಈ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಆರ್ಥಿಕತೆ ಸದೃಢತೆಯನ್ನು ಹೊಂದಿ.ರಾಜ್ಯ ಸರ್ಕಾರಿ ನೌಕರರಿಗೆ ಅತೀ ಶೀಘ್ರದಲ್ಲಿಯೇ 7 ನೆಯ ವೇತನ ಆಯೋಗ ಜಾರಿ ಮತ್ತು ಸರ್ಕಾರಿ ನೌಕಕರ ಪಾಲಿಗೆ ಕರಾಳ ಯೋಜನೆಯಾದ ಎನ್‌ಪಿಎಸ್ ರದ್ದುಗೊಳಿಸಿ ನೌಕರರಿಗೆ ಸಹಿ ಸುದ್ದಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಲಿದ್ದಾರೆ ಎಂದರು.ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ 4೦೦ ಕೋಟಿ ದುಡಿಯುವ ಬಂಡಾವಳವನ್ನು ಹೊಂದಿದೆ ಬೃಹದ್ದಾಕಾರವಾಗಿ ಬೆಳದು ನಿಂತ ಸರ್ಕಾರಿ ನೌಕಕರ ಬ್ಯಾಂಕ್ ಸೌಲಭ್ಯವನ್ನು ಪಡೆದು ಆರ್ಥಿಕ ಸಬಲತೆಯನ್ನು ಹೊಂದಿ.ಅದರ ಜತೆಗೆ ಸಾಲವನ್ನು ಪಡೆಯುವಾಗ ಇರುವ ನಿಷ್ಠೆ ಸಾಲ ಮರುಪಾವತಿ ಮಾಡುವಾಗಲು ಇರಲಿ ಎಂದರು. ಬ್ಯಾಂಕ್ ಅಧ್ಯಕ್ಷ ಪ್ರಶಾಂತ ಚನಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ 19೦9ರಲ್ಲಿ ವಿ.ಎನ್.ಸಾಠೆ ಎನ್ನುವರು 5೦ ಸದಸ್ಯರ 1೦೦೦ ಶೇರು ಬಂಡವಾಳದಿಂದ ಸ್ಥಾಪನೆಯಾದ ಈ ಬ್ಯಾಂಕ್ ಸಧ್ಯ 5೦೦ ಕೋಟಿ ಠೇವಣೆಯನ್ನು ಹೊಂದಿದೆ.ಸಿಬ್ಬಂದಿಗಳ ಪ್ರಾಮಾಣಿಕ ಕೆಲಸ ಮತ್ತು ಆಡಳಿತ ಮಂಡಳಿಯ ಕಾರ್ಯದಕ್ಷತೆಯಿಂದ ವಿಜಯಪುರ ಮತ್ತು ಬಾಗಲಕೋಟಿಯಲ್ಲಿ 12 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ.ನಮ್ಮ ಬ್ಯಾಂಕ್ ಅತ್ಯುಆಧುನಿಕ ಸೌಲಭ್ಯಗಳು ಮತ್ತು ಗುಟಮಟ್ಟದ ತಂತ್ರಜ್ಞಾನವನ್ನು ಒಳಗೊಂಡಿದ್ದು.ನಮ್ಮ ಬ್ಯಾಂಕಿನ ಎಟಿಎಂ ವಿಶ್ವದ 65 ದೇಶಗಳಲ್ಲಿ ಚಲಾವಣೆಯಲ್ಲಿದೆ.ನಮ್ಮ ಬ್ಯಾಂಕ್ ಠೇವಣೆದಾರರ ಠೇವುಗಳ ಭದ್ರತೆಗೆ ಆರ್‌ಬಿಆಯ್‌ನಲ್ಲಿ 35 ಕೋಟಿ ಹಣವನ್ನು ಪಿಕ್ಸ್ ಮೀಸಲಿಡಲಾಗಿದೆ ಎಂದರು. ತಹಶೀಲ್ದಾರ ನಿಂಗಪ್ಪ ಬಿರಾದಾರ,ಬಿಇಒ ಜಾಸ್ಮಿನ್ ಕಿಲ್ಲೇದಾರ ಮಾತನಾಡಿದರು.ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಭಿವೃದ್ದಿಗೆ ಶ್ರಮಿಸಿದ ನಿವೃತ್ತ ವ್ಯವಸ್ಥಾಪಕರನ್ನು ಮತ್ತು ಗಣ್ಯರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಬ್ಯಾಂಕಿನ ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರ,ನಿರ್ದೇಶಕರಾದ ಈರಪ್ಪ ತೇಲಿ,ಭೀಮನಗೌಡ ಬಿರಾದಾರ,ಸುರೇಶ ಶಡಶ್ಯಾಳ,ಜಯಶ್ರೀ ಬೆಣ್ಣೆ,ಸದಾಶಿವ ದಳವಾಯಿ,ಆನಂದಗೌಡ ಬಿರಾದಾರ,ನೀಲಾ ಇಂಗಳೆ,ಪ್ರಧಾನ ವ್ಯವಸ್ಥಾಪಕಿ ಎಂ,ವಿ.ಪರ್ವತಿ,ಶಾಖಾ ವ್ಯವಸ್ಥಾಪಕ ಎಂ.ಪಿ.ಪೊಲೀಸಪಾಟೀಲ,ಗುರಲಿಂಗಪ್ಪ ಬದ್ರಣ್ಣವರ,ಪಂಚಾಕ್ಷರಯ್ಯ ಪುರಾಣಿಕಮಠ,ಎಸ್.ಡಿ.ಬಬಲಾದಿ,ಎಸ್.ಎಂ.ಹಂಡಿ,ಪರಶುರಾಮ ಪಮ್ಮಾರ,ಸಂಗಮೇಶ ಪಾಟೀಲ,ಎಂ.ಎಸ್.ಬೀಳಗಿ,ಜ.ಎಸ್.ಅಡವಿ ಸೇರಿದಂತೆ ಅನೇಕರು ಇದ್ದರು.ನಿರ್ದೇಶಕ ಹಣಮಂತ ಕೊಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಅರ್ಜುನ ಲಮಾಣಿ ಸ್ವಾಗತಿಸಿದರು.ಹುಸೇನ ತಾಳಿಕೋಟ ನಿರೂಪಿಸಿದರು. ಸಿದ್ದು ಶೀಲವಂತರ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button