ಸಮಯದ ಸದುಪಯೋಗ…..

ಸಮಯವದು ಬಿಟ್ಟ ಬಾಣ
ಮರಳಿ ಬಾರದು ತಿಳಿಯೋ ಜಾಣ
ಸಮಯಕ್ಕೆ ಬೆಲೆ ಕೊಡದಿದ್ದರೆ ನೀ ಕೋಣ
ಸಮಯದ ಮಹತ್ವ ಎಲ್ಲರೂ ಅರಿಯೋಣ
ಹೋದ ಸಮಯ ಮರಳಿ ಸಿಗುವುದಿಲ್ಲ
ಸಮಯಕ್ಕೆ ಬೆಲೆ ಕೊಡದಿದ್ದರೆ ನಮಗೆ ಬೆಲೆ
ಇಲ್ಲ
ಸಮಯವೆಂಬುದು ಅತ್ಯಮೂಲ್ಯ
ಲೋಕದಲ್ಲೆಲ್ಲ
ಕಳೆದ ಸಮಯಕ್ಕೆ ಚಿಂತಿಸಿ ನೆಲೆ ಇಲ್ಲ
ಸಮಯ ಬಲು ಮಹತ್ವದ್ದು ತಿಳಿಯಿರಿ
ಸಮಯ ಬಲು ದುಬಾರಿ ಅರಿಯಿರಿ
ಸಮಯಕ್ಕೆ ಗೌರವ ಕೊಟ್ಟು ಬದುಕಿರಿ
ಸಮಯ ಬದುಕಿನ ಪಾಠ ತಿಳಿಸುವುದು
ನೋಡಿರಿ
ಇವತ್ತಿನ ಸಮಯ ನಾಳೆ ನಮಗೆ ಸಿಗುವುದಿಲ್ಲ
ಇವತ್ತಿನ ಬದುಕು ನಾಳೆ ನಮಗೆ
ದೊರೆಯುವುದಿಲ್ಲ
ಒಂದಲ್ಲ ಒಂದು ದಿನ ಮಣ್ಣಾಗೋರೆಲ್ಲ
ಸಮಯದ ಅರಿವು ಇರಲಿ ಮನುಜರಿಗೆಲ್ಲ
ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು ಬಾಗಲಕೋಟ
Mob-9845568484