ಶ್ರೀಘದಲ್ಲೆ ಚಿಕ್ಕೋಡಿ ಪಟ್ಟಣದ ಗುರುವಾರ ಪೇಠೆ ರಸ್ತೆ ಅಗಲೀಕರಣ.
ಚಿಕ್ಕೋಡಿ ಜನೇವರಿ.13

ಪಟ್ಟಣದ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಪಟ್ಟಣದ ಗುರುವಾರ ಪೇಠದಲ್ಲಿರುವ ವ್ಯಾಪಾರಸ್ಥ ರೊಂದಿಗೆ ಸಭೆ ನಡೆಸಿ ಚಿಕ್ಕೋಡಿ ಪಟ್ಟಣದ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಗುರುವಾರ ಪೇಠ ರಸ್ತೆ ಅಗಲೀಕರಣದ ಬಗ್ಗೆ ಚರ್ಚಿಸಿದರು.ಶ್ರೀ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೆರಿಯವರ ಪ್ರಯತ್ನದಿಂದ ಚಿಕ್ಕೋಡಿ ಪಟ್ಟಣದ ಗುರುವಾರ ಪೇಠದ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಭೂ ಸ್ವಾಧೀನ ಪರಿಹಾರ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಸುಮಾರು ‘7 ಕೋಟಿ ರೂ.’ ನೀಡಲಾಗುವುದು ಎಂದು ಹೇಳಿದರು.ಗುರುವಾರ ಪೇಠ ರಸ್ತೆ ಅಗಲೀಕರಣದ ವಿಷಯ ತಿಳಿದು ಪಟ್ಟಣದ ವ್ಯಾಪಾರಸ್ಥರು ಸಹಮತ ದಿಂದ ಒಪ್ಪಿಗೆ ಸೂಚಿಸಿ ಹರ್ಷ ವ್ಯಕ್ತಪಡಿಸಿದರು.ಗುರುವಾರ ಪೇಠ ರಸ್ತೆಯಲ್ಲಿ ಹೊಸ ಮಾದರಿಯ ಭೂಗತ ವಿದ್ಯುತ್ ಕೇಬಲ್ ಅಳವಡಿಕೆಯ ತಂತ್ರಜ್ಞಾನದ ಮೂಲಕ ಬೀದಿ ದೀಪಗಳನ್ನು ಅಳವಡಿಸಲಾಗುವುದು ಹಾಗೂ ಜನ ದಟ್ಟಣೆ ತಗ್ಗಿಸಲು ಅತಿ ಶೀಘ್ರದಲ್ಲಿಯೇ ಗುರುವಾರ ಪೇಠ ರಸ್ತೆಯ ಅಗಲೀಕರಣ ಮಾಡಿ ವ್ಯಾಪಾರಿಗಳಿಗೆ ಹಾಗೂ ನಗರದ ಜನತೆಗೆ ಅನುಕೂಲ ಕಲ್ಪಿಸಲಾಗುವುದು. ಎಂದು ಹೇಳಿದರು.ತಹಶೀಲ್ದಾರು, ಪುರ ಸಭೆ ಸದಸ್ಯರು ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ