ವಿಜಯನಗರ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಗಳು.
ಕೊಟ್ಟೂರು ಸಪ್ಟೆಂಬರ್.30

ವಿಜಯನಗರ ಜಿಲ್ಲಾ ಮಟ್ಟದ ಖೋ ಖೋ ಪ್ರಾಥಮಿಕ ಹಾಗೂ ಪ್ರೌಢ ಬಾಲಕ ಬಾಲಕಿಯರ ಪಂದ್ಯಾವಳಿಗಳನ್ನು ಸಿಪಿಇಡಿ ಮೈದಾನದಲ್ಲಿ ನಡೆಸಲಾಗಿತ್ತು. ಖೋ ಖೋ ಆಟ ಕಲಿತರೆ ಪ್ರತಿಯೊಂದು ಆಟ ಕಲಿತಂತೆ ಎಲ್ಲಾ ಆಟಗಳಿಗೆ ತಾಯಿ ಇದ್ದಂತೆ ನಮ್ಮ ಕೊಟ್ಟೂರಿಗೆ ಬಂದಂತ ಎಲ್ಲಾ ವಿಜಯನಗರ ಜಿಲ್ಲಾ ಕ್ರೀಡಾಪಟುಗಳಿಗೂ ಹಾಗೂ ಶಿಕ್ಷಕವೃಂದ ದವರಿಗೂ ಮೈದೂರ್ ಶಶಿಧರ್ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಸ್ವಾಗತ ಕೋರಿದರು ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಮಕರಣಂ ಚಾಲನೆ ನೀಡಿದರು. ವಿಜಯನಗರ ಜಿಲ್ಲಾಮಟ್ಟದ ಖೋ ಖೋ ಪಂದ್ಯಾವಳಿಗಳಲ್ಲಿ ಪ್ರೌಢ ಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ತಂಡಗಳು ಹರಪನಹಳ್ಳಿ ತಾಲೂಕಿನ ಶ್ರೀ ನಾರದಮುನಿ ಪ್ರೌಢಶಾಲೆ ಚಿಗಟೇರಿ ಪ್ರಥಮ ಸ್ಥಾನಗಳನ್ನುಪಡೆದು ವಿಭಾಗಿ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೂ ಪ್ರಾಥಮಿಕ ಶಾಲಾ ಬಾಲಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಜುನ್ ಚಿನ್ನನಳ್ಳಿ(ಎ.ಸಿ ಹಳ್ಳಿ)ಕೂಡ್ಲಿಗಿ ತಾಲೂಕು ಪ್ರಥಮ ಸ್ಥಾನ ಪಡೆದು ವಿಭಾಗಿ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಮತ್ತು ಬಾಲಕಿಯ ಪ್ರಾಥಮಿಕ ಶಾಲಾ ತಂಡವನ್ನು ತಡೆ ಹಿಡಿಯಲಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣದ ಅಧ್ಯಕ್ಷರಾದ ಮಂಜುನಾಥ್ ಭರತೇಶ್ ಹನುಮೇಶ್ ಗ್ರೇಡ್ ಒನ್ ದೈಹಿಕ ಶಿಕ್ಷಕರು ರೇವಣ್ಣ ತಾಲೂಕು ದೈಹಿಕ ಶಿಕ್ಷಕರ ನಿರೀಕ್ಷಕರು ಅಜಯ್ ದೈಹಿಕ ಶಿಕ್ಷಕರು ಆನಂದ್ ಇಸಿಓ ಕೊಟ್ಟೂರಿನ ಎಲ್ಲಾ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಗಳು ಸಿದ್ದಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳು ವಿಜಯನಗರ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು