ಛಾಯಾ ಗ್ರಾಹಕರಿಗೆ ನಿವೇಶನಗಳನ್ನು ಮಂಜೂರು ಮಾಡಿಕೊಡುತ್ತೇನೆ – ಜಿ.ಎಚ್.ಶ್ರೀನಿವಾಸ್.

ತರೀಕೆರೆ ಅಕ್ಟೋಬರ್.1

ಛಾಯಾ ಗ್ರಾಹಕರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿದ್ದರು, ಯಾವುದೇ ಸೌಲಭ್ಯ ಕೊಟ್ಟಿರುವುದಿಲ್ಲ ಎಂದು ತಿಳಿದು ಬಂದಿದೆ. ಛಾಯಾ ಗ್ರಾಹಕರಿಗೆ ಸರ್ಕಾರದಿಂದ ಸವಲತ್ತುಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಎಂದು ಇಂದು ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ತರೀಕೆರೆ ತಾಲೂಕು ಛಾಯಾ ಗ್ರಾಹಕರ ಸಂಘ ಏರ್ಪಡಿಸಿದ್ದ ಛಾಯಾ ಗ್ರಾಹಕರ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.ಯಾವುದೇ ಮಧ್ಯ ವರ್ತಿಗಳಿಲ್ಲದೆ ಖುದ್ದು ಕಚೇರಿಗೆ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ತಾವು ಕಂಡುಕೊಳ್ಳಬಹುದು. ಛಾಯಾ ಗ್ರಾಹಕರಿಗೆ ಮನೆ ನಿವೇಶನಗಳನ್ನು ಮಂಜೂರಿ ಮಾಡಿಕೊಳ್ಳಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ಮಾಡಿರುತ್ತೇನೆ ಎಂದು ಹೇಳಿದರು. ಉತ್ತಮ ಸೇವೆ ಮಾಡಿರ್ತಕ್ಕಂತಹ ವೈದ್ಯರು ಮತ್ತು ಪತ್ರಕರ್ತರಿಗೆ ಹಾಗೂ ಹಿರಿಯ ಛಾಯಾ ಗ್ರಾಹಕರಿಗೆ ಸನ್ಮಾನಿಸಿ ಗೌರವಿಸಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ ಭವಾನಿ ಶಂಕರ್ ಅವರು ಮಾತನಾಡಿ ಮಾನ್ಯ ಶಾಸಕರು ಛಾಯಾ ಗ್ರಾಹಕರ ಸಮಸ್ಯೆಗಳ ಬಗ್ಗೆ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯ ಕಲಾಪಗಳಲ್ಲಿ ಮಾತನಾಡಿದ್ದಾರೆ. ತರೀಕೆರೆ ತಾಲೂಕು ಛಾಯಾ ಗ್ರಾಹಕರಿಗೆ ಮನೆಯಲ್ಲಿ ನಿವೇಶನಗಳನ್ನು ಮಂಜೂರಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಸುಮಾರು 50- 60 ವರ್ಷಗಳಿಂದಲೂ ಸಹ ಛಾಯಾ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪ ವಿಭಾಗ ಅಧಿಕಾರಿ ಡಾ ಕೆಜೆ ಕಾಂತರಾಜು ಮಾತನಾಡಿ ಛಾಯಾ ಗ್ರಾಹಕರು ಚಿತ್ರ ತೆಗೆದಾಗ ಅದು ಒಂದು ದಾಖಲೆಯಾಗುತ್ತದೆ. ಮದುವೆ ಇತರೆ ಸಮಾರಂಭಗಳಲ್ಲಿ ತೆಗೆಸಿದ ಫೋಟೋಗಳು ಆಲ್ಬಮ್ ಗಳು ನೆನಪಿಟ್ಟು ಕೊಳ್ಳುವಂತಹದ್ದು. ಕುಟುಂಬ ಸಮ್ಮಿಲನ ಕಾರ್ಯಕ್ರಮದಿಂದ ಬಾಂಧವ್ಯ ಬೆಳೆಯುತ್ತದೆ, ಈ ಕಾರ್ಯಕ್ರಮವು ಅರ್ಥ ಪೂರ್ಣವಾಗಿದೆ, ನಿಮ್ಮ ವೃತ್ತಿ ಜೀವನವು ಮೇಲೆ ಮಟ್ಟಕ್ಕೆ ಬರಲಿ ಎಂದು ಹೇಳಿದರು. ಹಿರಿಯ ಛಾಯಾ ಗ್ರಾಹಕರಾದ ಸೋಮನಾಥ ಆರಾಧ್ಯ, ಅಕ್ಬರ್, ಛಾಯಾಪತಿ ರವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್, ಡಾ. ಟಿ ಎಮ್ ದೇವರಾಜ್ ಹಾಗೂ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ ಕೃಷ್ಣನಾಯಕ್ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಧನ ಹೊಂದಿದ ಈ ಛಾಯಾ ಗ್ರಾಹಕರ ಪತ್ನಿಗೆ 10,000 ರೂ ಗಳ ಚೆಕ್ ವಿತರಣೆಯನ್ನು ಮಾಡಲಾಯಿತು ವಿವಿಧ ಕ್ರೀಡಾಕೂಟಗಳಲ್ಲಿ ಜಯಗಳಿಸಿದ ಛಾಯಾ ಗ್ರಾಹಕರ ಕುಟುಂಬದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಛಾಯಾ ಗ್ರಾಹಕರ ಸಂಘದ ಉಪಾಧ್ಯಕ್ಷರಾದ ಎಚ್ಎಸ್ ನಾಗೇಶ್, ಚಿಕ್ಕಮಗಳೂರು ಸಂಘದ ಅಧ್ಯಕ್ಷರಾದ ಬಿಕೆ ಜಯಚಂದ್ರ, ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕೆ ಟಿ, ಸಂಘದ ನಿರ್ದೇಶಕರಾದ ಬಿಎನ್ ಉಮಾ ಶಂಕರ್, ರಾಜ್ಯ ಸಂಘದ ಅಧ್ಯಕ್ಷರಾದ ಪರಮೇಶ ಸುಬ್ಬಯ್ಯ ಉಪಸಿತರಿದ್ದರು ಸವಿತಾ ರವಿಶಂಕರ್ ಪ್ರಾರ್ಥಿಸಿ, ನಿರಂಜನ್ ಸ್ವಾಗತಿಸಿ, ಜಗದೀಶ್ ವಂದಿಸಿದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button