ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಸನ್ಮಾನ ಮಾಡುವುದರ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕೊಟ್ಟೂರು ಅಕ್ಟೋಬರ್.1

ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಣೆ ಮಾಡಿ ಶತಾಯಿಷಿ ಮತದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಭಾನುವಾರ ದಂದು ಅಭಿನಂದಿಸುವ ಕಾರ್ಯ ನಿರ್ವಹಿಸಿದರು.ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು ಇವರು ಆದೇಶದ ಮೇರೆಗೆ ಪಟ್ಟಣದ ಹಳ್ಳಿ ನಾಗಮ್ಮ, ಎಂ ಶಂಕ್ರಮ್ಮ, ಇವರನ್ನು ಸನ್ಮಾನಿಸಲಾಯಿತು.ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು.

.ಭಾರತ ಚುನಾವಣಾ ಆಯೋಗವು ಈ ಬಗ್ಗೆ ವಿಶೇಷವಾಗಿ ಆಚರಿಸಿ. ಈ ಸಂಬಂಧ 100+ ವರ್ಷ ಪೂರೈಸಿದ ಶತಾಯುಷಿ ಮತದಾರರ ಬಗ್ಗೆ ಪರಿಶೀಲಿಸಿ, ಅವರ ಹಿನ್ನೆಲೆ ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ ಹಾಗೂ ತಾಲೂಕು ಸ್ತ್ರೀಪ್ ನೋಡಲ್ ಅಧಿಕಾರಿಗಳು ಮೈದುರ್ ಶಶಿಧರ್, ಪಟ್ಟಣ ಪಂಚಾಯತಿ ಆರ್ ಐ ಕೊಟ್ರೇಶ್, ಪರಶುರಾಮ್ , ಮಂಜುನಾಥ್ , ವಿಜಯ್ ಕುಮಾರ್ ,ಸಿಬ್ಬಂದಿ ವರ್ಗ ಹಾಗೂ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು