ಗುಡೇಕೋಟೆ ಎ.ಆರ್.ಎಫ್.ಓ ವೆಂಕಟೇಶಗೆ ಮುಖ್ಯಮಂತ್ರಿ ಪದಕ.
ಕೂಡ್ಲಿಗಿ ಅಕ್ಟೋಬರ್.1

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಗಣನೀಯ ಸಾಧನೆ ಮಾಡಿರುವ ಸರಕಾರವು ತಾಲೂಕಿನ ಗುಡೇಕೋಟೆ ವಲಯದ ಕರಡಿ ಧಾಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರಾದ ಎಚ್.ವೆಂಕಟೇಶ್ ನಾಯ್ಕ ಅವರಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ. ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವ ಅರಣ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಚ್.ವೆಂಕಟೇಶ್ ನಾಯ್ಕ ಅವರಿಗೆ ಮುಖ್ಯಮಂತ್ರಿಗಳ ಪದಕ ಹಾಗೂ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನ ಮಾಡಿದರು.ಎಚ್.ವೆಂಕಟೇಶ್ ನಾಯ್ಕ ಅವರು ಗುಡೇಕೋಟೆ ಕರಡಿ ಧಾಮದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದು,

ಗುಡೇಕೋಟೆ ವಲಯ ವ್ಯಾಪ್ತಿಯ ಶಲಯಪ್ಪನಹಳ್ಳಿ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 150 ಹೆಕ್ಟೇರ್ ಒತ್ತುವರಿ ಯಾಗಿದ್ದನ್ನು ತೆರವುಗೊಳಿಸಿ ನಡುತೋಪು ನಿರ್ಮಾಣ ಮಾಡಿದ್ದಲ್ಲದೆ, ಅರಣ್ಯ ಇಲಾಖೆಯ ನವೀನತೆ ಯೋಜನೆಯಲ್ಲಿ ಬ್ಯಾಂಬೋ ಪಿಟ್ ವೈಪರ್ ಹಾವು, ಹಾರ್ಪಿಯನ್ ವಾಬ್ರಲರ್ ಹಾಗೂ ಹಳದಿ ಕೊರಳಿನ ಪಿಲ್ಳಾರ್ ಎಂಬ ಪಕ್ಷಿಗಳನ್ನು ಮೊದಲ ಬಾರಿಗೆ ಗುರುತಿಸಿ ಅರಣ್ಯ ಇಲಾಖೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.ಪ್ರಾಮಾಣಿಕ ಸೇವೆಗೆ ಸಂದ ಗೌರವದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ ಎಚ್.ವೆಂಕಟೇಶ್ ನಾಯ್ಕ ಅವರು ಕಳೆದ ೧೩ ವರ್ಷಗಳಿಂದ ಸಂಡೂರು ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಉಪ ವಲಯದ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, ಪ್ರಸ್ತುತ ಗುಡೇಕೋಟೆ ಕರಡಿ ಧಾಮ ಉಪವಲಯ ಅರಣ್ಯಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ