ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ವಿರೋಧಿಸಿ ಧರಣಿ.
ಹೊಸಪೇಟೆ ಅಕ್ಟೋಬರ್.2
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಗಾಂಧೀಜಿ ಪ್ರತಿಮೆ ಮುಂಭಾಗ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ವತಿಯಿಂದ ಅಹೋರಾತ್ರಿ ಧರಣಿ ನಡೆಸಲಾಯಿತು ದಿನಾಂಕ 01/10/2023 ಸಮಯ 2:00 ಆಗಮಿಸಿದ ಮಹಿಳೆಯರು ಪಾಲ್ಗೊಂಡಿದ್ದರು ಯಾವುದೇ ಸರಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ” ಎಂದರು ಗಾಂಧೀಜಿ. ಈ ಹಣವನ್ನು ದೇಶ ಕಟ್ಟಲು ಬಳಸಬಾರದು ಎಂದು ದೃಢವಾಗಿ ನಂಬಿದವರು. ಸಂವಿಧಾನದ ಆಶಯವೂ ಸಹ ಸರಕಾರಗಳು ನಿಧಾನವಾಗಿ ಮದ್ಯ ನಿಷೇಧ ದತ್ತ ಸಾಗಬೇಕೆಂಬುದೇ ಆಗಿದೆ.ವಿಪರ್ಯಾಸವೆಂದರೆ ಗಾಂಧಿ ಜಯಂತಿಯ ಈ ದಿನ ಸರಕಾರ ಅಕ್ರಮ ಮದ್ಯ ಮಾರಾಟತಡೆಗಟ್ಟುವ ಬದಲು 6೦೦ ಗ್ರಾಮ ಪಂಚಾಯತಿಗಳೂ ಸೇರಿದಂತೆ 1,೦೦೦ ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿರುವುದನ್ನು ತಿಳಿದು ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟಗೊಂಡಿದ್ದ ನಾವು ಈಗ ಆತಂಕದಿಂದ ಇರುವಂತೆ ಮಾಡಿದೆ ಸರ್ಕಾರ.ನಾವು ಆಂದೋಲನದ ಮಹಿಳೆಯರು 2೦೧5 ರಿಂದಲೂ ತಮ್ಮಲ್ಲಿ ಒತ್ತಾಯಿಸುತ್ತಾ ಬಂದಿರುವ ಬೇಡಿಕೆಗಳನ್ನು ಮತ್ತೆ ನಿಮ್ಮ ಮುಂದಿಡುತ್ತಿದ್ದೇವೆ.01.12.20 ರ ಉಚ್ಚ ನ್ಯಾಯಾಲಯದ ಆದೇಶದಂತೆ ( ಸಂಖ್ಯೆ: 13774) ಅಕ್ರಮ ಮದ್ಯಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಅಕ್ರಮ ಮಾರಾಟಗಾರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನ ಅನ್ವಯ(73 ನೇ ತಿದ್ದುಪಡಿ) ಗ್ರಾಮ ಸಭೆಗೆಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು.
ಮಹಾರಾಷ್ಟ್ರ ಮತ್ತುಹರ್ಯಾಣ ರಾಜ್ಯಗಳಂತೆ ಶೇ.1೦ ರಷ್ಟು ಮಹಿಳೆಯರು ಅಯಾ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರ ದೆಂದು ಗ್ರಾಮ ಸಭೆಯಲ್ಲಿ ನಿರ್ಧರಿಸಿದಲ್ಲಿ ಆ ಠರಾವನ್ನು ಸರಕಾರ ಎತ್ತಿ ಹಿಡಿಯಬೇಕು.ಸರಕಾರ ಹೊಸದಾಗಿ 1.000 ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ, ಮಾಲ್, ಸುಪರ್ ಮಾರ್ಕೆಟ್ ಗಳಲ್ಲಿ ಮತ್ತು ಅನ್ಸನ್ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಕ್ಷಣ ಹಿಂತೆಗೆದು ಕೊಳ್ಳಬೇಕು,ಮಹಿಳೆಯರಿಗೆ ಮಾತ್ರವಲ್ಲ ಸಮಾಜದ ನೆಮ್ಮದಿ, ಅರೋಗ್ಯ ಎಲ್ಲವನ್ನೂ ಹಾಳು ಮಾಡುವ ಈ ವಿಚಾರಗಳನ್ನು ಕೈ ಬಿಟ್ಟು ಗಾಂಧಿ ಆಶಯಗಳನ್ನು ಅನುಷ್ಠಾನಕ್ಕೆ ತರುವಂತ ಈ ಮೂಲಕ ಒತ್ತಾಯಿಸುತ್ತಿದ್ದೇವೆ. ನಮ್ಮ ಹಕ್ಕೊತ್ತಾಯಗಳನ್ನು ಕಾರ್ಯರೂಪಕ್ಕೆ ತಂದು ಗೌರವದಿಂದ ನಡೆಸಿಕೊಳ್ಳುತ್ತೀರೆಂದು ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಮಾತನಾಡಿದರು ಇಂದಿನಿಂದ ಆರಂಭಗೊಂಡ ನಮ್ಮ ಧರಣಿ ನಾಳೆ ವರೆಗೂ ನಡೆಯುತ್ತದೆ ನಾಳೆ ಗಾಂಧಿ ಜಯಂತಿ ಇರುವದರಿಂದ ಇಲ್ಲಿಗೆ ಆಗಮಿಸುವ ಉಸ್ತವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಎಚ್ ಆರ್ ಗವಿಯಪ್ಪ ಅವರಿಗೆ ಗಾಂಧೀಜಿ ಪ್ರತಿಮೆಗೆ ನಾವುಗಳು ಮಾಲಾರ್ಪಣೆ ಮಾಡಲು ಬಿಡುವುದಿಲ್ಲ ನಮ್ಮ ಬೇಡಿಕೆಗಳನ್ನು ರಾಜ್ಯಾದ್ಯಂತ ಏಕ ಕಾಲಕ್ಕೆ ಪ್ರತಿಭಟನೆ ಮಾಡಲು ಹಮ್ಮಿಕೊಂಡಿದ್ದೇವೆ ರಾಜ್ಯ ಸರ್ಕಾರವು 5 ಗ್ಯಾರಂಟಿಗಳನ್ನು ನೀಡಿ ಜೀವನ ಸುಧಾರಣೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದಂತ ಸಂದರ್ಭದಲ್ಲಿ 1.000 ಮಧ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಮೂಲಕ ನಮ್ಮ ಸೌಭಾಗ್ಯವನ್ನು ನೆಮ್ಮದಿ ಕಿತ್ತುಕೊಳ್ಳುತ್ತಿದ್ದಾರೆ14-18 ವಯಸ್ಸಿನ ಹುಡುಗರು ಕುಡಿತಕ್ಕೆ ದಾಸರಾಗಿದ್ದಾರೆ ಸಣ್ಣ ವಯಸ್ಸಿನಲ್ಲಿ ಸಾಯುತ್ತಾ ಇದ್ದಾರೆ ಮನೆಯ ಕಡೆ ಜವಾಬ್ದಾರಿ ಇಲ್ಲದೆ ಕುಡುತದಿಂದ ಹಾಳಾಗುತ್ತಿದ್ದಾರೆ ಹಲವಾರು ಕುಟುಂಬಗಳು ಈ ಹಾಳಾದ ಕುಡಿತದಿಂದ ಬೀದಿಗೆ ಬಂದಿದ್ದಾರೆ ಹಲವಾರು ಹೆಣ್ಣು ಮಕ್ಕಳು ವಿಧವೆ ಯಾರಾಗಿದ್ದಾರೆ ನಶೆದ ಅಮಲಿನಲ್ಲಿ ಅತ್ಯಾಚಾರಗಳು ಜನಗಳ ಕೊಲೆಗಳು ಆಗುತ್ತಾ ಇದ್ದಾವೆ ಅಂತಾ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದರು ಹಾಗೂ ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಮುಖಂಡರು ಕಾರ್ಯದರ್ಶಿಗಳು ಮಹಿಳೆಯರು ಆಕ್ರೋಶದಿಂದ ಮುಂದಿನ ಹೋರಾಟ ಉಗ್ರ ಸ್ವರೂಪದಿಂದ ಕೂಡಿರುತ್ತದೆ ಎಂದು ಎಚ್ಚರಿಸಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ