ಸ್ವಚ್ಛತಾ ಕಾರ್ಯಕ್ರಮ ಮಾಡಿ ಗಾಂಧಿ ಜಯಂತಿ ಆಚರಿಸಿದ ಗ್ರಾಮ ಪಂಚಾಯತ ಸಿಬ್ಬಂದಿಗಳು.
ಇಂಡಿ ಅಕ್ಟೋಬರ್.2
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ಪಂಚಾಯತದಲ್ಲಿ ಇಂದು ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ಯವಾಗಿ ಮೊದಲು ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಸಾವ೯ಜನಿಕರು ವಿಶೇಷವಾಗಿ ಪಂಚಾಯತ ಅಧ್ಯಕ್ಷರಾದ ಸಿಧರಾಯ ಐರೋಡಗಿಯವರು ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಮಾಡಿ ಸಾವ೯ಜನಿಕರಿಗೆ ಮಾದರಿಯಾದರು.ನಂತರ ಪಂಚಾಯತದಲ್ಲಿ ಗಾಂಧೀಜಿಯವರ ಕುರಿತು ಮಾತನಾಡಿ-ಗಾಂಧಿಜೀಯವರು ಗುಜರಾತ ರಾಜ್ಯದ ಪೊರ್ ಬಂದರಿನಲ್ಲಿ 2 ಅಕ್ಟೋಬರ್ 1869 ರಲ್ಲಿ ಜನಿಸಿದರು.ಇವರ ಪೂಣ೯ ಹೆಸರು ಮೋಹನದಾಸ ಕರಮಚಂದ ಗಾಂಧಿ.ಆದರೆ ಗಾಂಧೀಜಿಯವರು ನಮ್ಮ ದೇಶಕ್ಕೆ ಮರೆಯಲಾಗದ ಮಾಣಿಕ್ಯ ಕೊಡುಗೆ ಕೊಟ್ಟಿದ್ದಾರೆ.
ಸುಳ್ಳು ಹೇಳದ ಗಾಂಧಿ:-ಗಾಂಧಿ ಅವರು ಪ್ರೌಢ ಶಾಲೆಯಲ್ಲಿದ್ದಾಗ ಒಂದು ದಿನ ಶಿಕ್ಷಣಾಧಿಕಾರಿ ಭೇಟಿ ನೀಡಿದರು.ಐದು ಇಂಗ್ಲಿಷ್ ಪದ ಬರೆಯಲು ಹೇಳಿದರು .ಮೂರನೆಯ ಪದ Kettle ಎಂದು ತಪ್ಪಾಗಿ ಬರೆಯುತ್ತಾರೆ.ಇದನ್ನು ಕಂಡ ಶಿಕ್ಷಕರು , ತಮ್ಮ ಗಮನ ಸೆಳೆಯಲು ಗಾಂಧಿ ಕಾಲಿಗೆ ಕಾಲಿನಿಂದ ತಿವಿದರು.ಕಣ್ಣು ಸನ್ನೆ ಮಾಡಿ ಪಕ್ಕದ ವಿದ್ಯಾರ್ಥಿ ಬರೆದಿರುವುದನ್ನು ನೋಡಲು ಸುಳಿವು ಕೊಟ್ಟರು.ಆದರೆ ಗಾಂಧೀಜಿ ನಕಲು ಮಾಡಲು ಇಷ್ಟಪಡಲಿಲ್ಲ.ಗಾಂಧಿ ಹೊರತುಪಡಿಸಿ ಎಲ್ಲಾ ವಿದ್ಯಾಥಿ೯ಗಳು ಪ್ರತಿಯೊಂದು ಪದವನ್ನು ಸರಿಯಾಗಿ ಬರೆದರು.ಅಧಿಕಾರಿ ತರಗತಿಯಿಂದ ಹೊರಹೋದ ನಂತರ ಶಿಕ್ಷಕರು ಗಾಂಧಿ ಅವರನ್ನು ಕರೆದು ,ಪಕ್ಕದವನಿಂದ ಕಾಪಿ ಮಾಡುವಂತೆ ಹೇಳಿದೆ.ಆದರೆ ನನ್ನ ಮಾತನ್ನು ಕೇಳಲಿಲ್ಲ. ನೀನು ನನ್ನ ತರಗತಿಗೆ ಅಪಕೀತಿ೯ ಎಂದರಂತೆ .ಆಗ ಗಾಂಧಿ ನಾನು ಅಪಕೀತಿ೯ ಆಗಿರಬಹುದು ,ಆದರೆ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದರಂತೆ.
ಗಾಂಧಿ ಜಯಂತಿ ಆಚರಿಸುವುದರಿಂದ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಭಾವನೆ ಉಂಟು ಮಾಡುತ್ತದೆ.ಗಾಂಧಿಜೀಯವರ ಆದಶ೯ಗಳು ಹಿಂದಿನ, ಇವತ್ತಿನ, ಮುಂದಿನ ಪೀಳಿಗೆಗೆ ಉದಾಹರಣೆಯಾಗಿದೆ.ಎಂದು ಹೇಳಿದರು.ಈ ಸಂದರ್ಭದಲ್ಲಿ ಪಂ.ಅಧ್ಯಕ್ಷರಾದ ಶ್ರೀ ಸಿಧರಾಯ ಐರೋಡಗಿ. ಪಂ.ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಲೋಣಿ.ಕಾಯ೯ದಶಿ೯ಗಳಾದ ಶ್ರೀ ಸೋಮಣ್ಣ ತೊಂಟಾಪೂರ.ಸದಸ್ಯರಾದ ಶ್ರೀ ದಿಲೀಪ ಪತ್ತಾರ -ಶ್ರೀ ಮುತ್ತಪ್ಪ ಸಿನ್ನೂರ .ಶ್ರೀ ಸೋಮಶೇಖರ ಮ್ಯಾಕೇರಿ.ಶ್ರೀ ಪಂಡರಿಗೌಡ ಪಾಟೀಲ. ಶ್ರೀ ಜಿಂದೇವಾಲಿ ಸರ್.ಶ್ರೀ ಲಾಲು ಸರ್. ಶ್ರೀ ಶಾಮರಾಯ ಬಿರಾದಾರ.ಗೋವಿಂದ ಅಂಬಾರೆ .ರಾಜಕುಮಾರ ಕಾಂಬಳೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀ ಮಹಾಂತೇಶ ಐರಸಂಗ.ಶ್ರೀಮತಿ ಎಸ್.ಎ.ಶೇಖ.ಆಶಾ ಕಾಯ೯ ಕತೆ೯ಯರು ಹಾಗೂ ಅಂಗನವಾಡಿ ಸಿಬ್ಬಂದಿಗಳು ಭಾಗವಹಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ