ಕೊಟ್ಟೂರು:ಒಳಚರಂಡಿ ಕಳಪೆ ಕಾಮಗಾರಿ ಸ್ಥಳೀಯರಿಂದ – ಆಕ್ರೋಶ.
ಕೊಟ್ಟೂರು ಅಕ್ಟೋಬರ್.3
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಹಗರಿಬೊಮ್ಮನಹಳ್ಳಿ ರಸ್ತೆಯ ಸುಮಾರು ಮೀಟರ್ ಉದ್ದಕ್ಕೂ ಒಳಚರಂಡಿ ನಡೆಯುತ್ತಿರುವ ಕಳಪೆ ಕಾಮಗಾರಿಯಾಗಿದೆ ಇದು ಲೋಕೋಪಯೋಗಿ ಇಲಾಖೆಯ ಕಾಮಗಾರಿಯ ವಿರುದ್ಧ ಆಕ್ರೋಶಗೊಂಡ ದಲಿತ ಮುಖಂಡರು ಕಾರಣ ಸುಮಾರು 300 ದಲಿತರ ಮನೆಗಳು ಇಲ್ಲಿ ಬರುವ ಚರಂಡಿ ನೀರಿನ ತೊಂದರೆಯಿಂದ ರೋಷಿ ಹೋಗಿದ್ದರು ಆದರೆ ಇಲ್ಲಿ ಪಟ್ಟಣದ ಮುಕ್ಕಾಲು ಭಾಗ ಕೊಳಚೆ ನೀರು ಹರಿದು ಬರುತ್ತದೆ ಇಲ್ಲಿನ ಲೋಕೋಪಯೋಗಿ ಇಲಾಖೆ ಕಾಮಗಾರಿ ನೀರಿನಲ್ಲಿ ಕಾಂಕ್ರೀಟ್ ಹಾಕುವುದು ಕಳಪೆಯಾಗಿದೆ. ಹಾಗೇನೇ ಪಕ್ಕದಲ್ಲಿ ಪಟ್ಟಣ ಪಂಚಾಯತಿಯ ಕುಡಿಯುವ ನೀರಿನ ಪೈಪು ತುಂಡಾಗಿ ಹರಿದು ಬರುವ ನೀರಿನಲ್ಲಿ ಕಾಂಕ್ರೀಟ್ ರಾತ್ರಿ ವೇಳೆ ಹಾಕುವುದು ಮತ್ತು ಇಲ್ಲಿ ಸಿಮೆಂಟ್ ಸ್ಟೀಲ್ ಹಾಗೂ ಮರಳು ಜಲ್ಲಿ ಎಷ್ಟು ಹಾಕುತ್ತಾರೆ ಅದು ಎಷ್ಟರ ಮಟ್ಟಿಗೆ ಗುಣಮಟ್ಟದ ಕಾಮಗಾರಿ ಆಗುತ್ತದೆ.
ಹಾಗೂ ಸರಿಯಾದ ನೀರು ಹರಿಯಲು ವಾಲ್ ಇರುವುದಿಲ್ಲ ಇಂಜಿನೀಯರ್ ಯಾವ ರೀತಿಯ ಕ್ರಿಯಾಯೋಜನೆ ತಯಾರಿಸಿದ್ದಾರೆ ಹೇಗೆ ಇರಬೇಕು ಯಾವ ಕಡೆಗೆ ನೀರು ಹರಿಸಬೇಕು ಎಂಬುದು ತಿಳಿಯದಾಗಿದೆ ಅದಲ್ಲದೆ ಇಲ್ಲಿ ದಲಿತ ಕೇರಿ ಕಡೆ ಒಂದು ಚರಂಡಿ ತಿರುವು ಇದೆ ಆದರೆ ಯಾವುದೇ ಕಾರಣಕ್ಕೂ ಆ ಕಡೆ ನೀರು ಬಿಡದಂತೆ ಮುಂದಕ್ಕೆ ನೇರವಾಗಿ ಹೋಗಬೇಕು.
ಈ ಒಳಚರಂಡಿ ದಾಟಿ ಹೋಗಲು ಇರುವ ರಸ್ತೆ ತಗ್ಗು ಪ್ರದೇಶವಾಗಿದೆ ನೀರು ಅತಿ ಹೆಚ್ಚಾಗಿ ಬಂದರೆ ಹೆಚ್ಚಾಗಿ ರಸ್ತೆಗೆ ಹರಿದು ಬರುವ ಅವಕಾಶವು ಇರಬಹುದು ನಂತರ ದಲಿತ ಮನೆಗಳಿಗೆ ಕಡೆಗೆ ಸಹ ಕೊಳಚೆ ನೀರು, ಹರಿಯಬಹುದು ಹೀಗಾದರೆ ಇಲ್ಲಿನ ಸಾರ್ವಜನಿಕರಿಗೆ ಆರೋಗ್ಯದ ಗತಿ ಏನಾಗಬೇಕು ಅನಾರೋಗ್ಯ ಆಗುವ ಸಾಧ್ಯತೆ ಅತಿ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಇಲ್ಲಿನ ದಲಿತ ಮುಖಂಡರಾದ ತೋಟದ ಶಿವಪ್ಪ ಮಂಜುನಾಥ್ ಅಂಬರೀಶ್ ಇವರು ತಿಳಿಸುವಂತೆ ಕಾಮಗಾರಿ ತುಂಬಾ ಕಳಪೆಯಾಗಿದೆ ಎಂದು ಕಂಡು ಬರುತ್ತದೆ ಹೀಗಾಗಿ ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಇಂಜಿನೀಯರ್ ಹಾಗೂ ಗುತ್ತಿಗೆದಾರರು ಎಚ್ಚರವಹಿಸಿ ಕಾಮಗಾರಿ ನಡೆಸಬೇಕು ಇಲ್ಲದಿದ್ದರೆ ಮುಂದಿನ ಕ್ರಮಕ್ಕಾಗಿ ಮುಂದುವರೆಯುವುದು ಖಚಿತ ಎಂದು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು