ಗಾಂಧಿ ಮತ್ತು ಶಾಸ್ತ್ರೀ ಜಯಂತಿ.
ಕೆ.ಆಯ್ಯನಹಳ್ಳಿ ಅಕ್ಟೋಬರ್.3
ಕೊಟ್ಟೂರು ತಾಲೂಕಿನ ಕೆ ಅಯ್ಯನಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಸಮವಸ್ತ್ರವನ್ನು ವಿತರಣೆ ಮಾಡುವುದರ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು. ಶಾಂತಿ ಮತ್ತು ಅಹಿಂಸೆ ತತ್ವಗಳನ್ನು ಆದರಿಸಿದ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಸಮವಸ್ತ್ರ ಧರಿಸಿ ಶಾಂತ ರೀತಿಯಲ್ಲಿ ಹಾಗೂ ಪ್ರಾಮಾಣಿಕವಾಗಿ ದುಡಿದು ಬಾಳು ಸಾಗಿಸಬೇಕು ಹಾಗಾದರೆ ಮಾತ್ರ ಗಾಂಧೀಜಿಯವರ ಮಾತು ಗ್ರಾಮಗಳು ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ ಎಂದು ತಿಳಿಸಿದ್ದಾರೆ.
ಹಾಗಾಗಿ ಎಲ್ಲಾ ಕಾರ್ಮಿಕರು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಇರಬೇಕು ಎಂದು ರಾಘವೇಂದ್ರ ಪಿಡಿಒ ಕಾರ್ಮಿಕರನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್,ದುರುಗಪ್ಪಗ್ರಾಮ ಪಂಚಾಯತಿ ಸದಸ್ಯರು ಬಿ ಎಂ ಕರಿಬಸಯ್ಯಸಿದ್ದಲಿಂಗ ಸ್ವಾಮಿ ಎಂ ಓ ಗೋಣೆಪ್ಪ,ವೃಷಭೇಂದ್ರ ಮತ್ತಿತರರು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು