ಬಾಪೂಜಿ ಸಂಸ್ಥೆಯಿಂದ – ಗಾಂಧಿ ಮತ್ತು ಶಾಸ್ತ್ರೀ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಾಲು ಹಣ್ಣು ವಿತರಣೆ.

ಹುನಗುಂದ ಅಕ್ಟೋಬರ್.3

ಪಟ್ಟಣದ ಬಾಪೂಜಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ ಬಹದ್ದೂರ ಶಾಸ್ತ್ರೀ ಅವರ ಜನ್ಮ ದಿನದ ಪ್ರಯುಕ್ತ ಹುನಗುಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಣೆ ಮಾಡುವ ಮೂಲಕ ಸರಳವಾಗಿ ಮಹಾತ್ಮರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ವೇಳೆ ವಿ.ಮ.ಬ್ಯಾಂಕ್ ನಿರ್ದೇಶಕ ಮಹಾಂತೇಶ ಅವಾರಿ ಮಾತನಾಡಿ ಬಾಪೂಜಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ ದಶಕಗಳ ಹಿಂದೆ ಪಟ್ಟಣದಲ್ಲಿ ಹುಟ್ಟಿಕೊಂಡು ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರೀ ಅವರ ಜನ್ಮ ದಿನದ ನಿಮಿತ್ಯ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದ್ದು.

ಈ ಸಂಸ್ಥೆ ಇದೊಂದೆಯಲ್ಲ ಶೈಕ್ಷಣಿಕ,ಸಾಂಸ್ಕೃತಿಕ ಅನೇಕ ವಿದಾಯಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಸಂಸ್ಥೆ ಮುಂದಿನ ದಿನಗಳಲ್ಲಿ ಇಂತಹ ಹತ್ತು ಹಲವಾರು ಮಹತ್ವದ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.ಶಿಕ್ಷಕ ಹಾಗೂ ಸಾಹಿತಿ ಎಸ್.ಕೆ.ಕೊನೆಸಾಗರ ಮಾತನಾಡಿ ಮಹಾತ್ಮ ಗಾಂಧಿ ಸರಳ ವ್ಯಕ್ತಿತ್ವ ಮತ್ತು ದೇಶದ ಜನರ ಬಗ್ಗೆ ಸದಾ ಚಿಂತಕರಾಗಿದ್ದರು.ಇನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀ ನಮ್ಮ ದೇಶದ ಬಹುದೊಡ್ಡ ನಾಯಕರು ಮತ್ತು ಸರಳತೆಗೆ ಸಾಕ್ಷಿಯಾಗಿದ್ದರು ಇವರು ಮಹಾತ್ಮರ ಆದರ್ಶ ಜೀವನ ಇಂದಿನ ರಾಜಕಾರಣಿಗಳು ಮತ್ತು ಯುವಕರು ಅಳವಡಿಸಿಕೊಂಡರೇ ಭಾರತದ ಅಭಿವೃದ್ದಿ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಬಾಪೂಜಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಇಮಾಮ್ ಕರಡಿ,ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ,ವಿ.ಮ ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ,ಸಂಗಣ್ಣ ಗಂಜೀಹಾಳ,ನೀಲಪ್ಪ ತಪೇಲಿ,ಶಿವಾನಂದ ಕಂಠಿ,ಮೈನು ಧನ್ನೂರ,ಸುರೇಶ ಹಳಪೇಟಿ, ಎಂ.ಬಿ.ಶಿಂಗನಗುತ್ತಿ,ವಾಯ್,ಎಚ್,ನಾಯಕ,ಶರಣು ಶಿರೂರ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button