ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯತೆಗೆ ಬೀದಿ ನಾಯಿಗಳ ದಾಳಿಗೆ ಮತ್ತೊಂದು ಟಗರು ಬಲಿ.
ಕೂಡ್ಲಿಗಿ ಅಕ್ಟೋಬರ್.3

ಪಟ್ಟಣದ ನಾಲ್ಕನೇ ವಾರ್ಡಿನ ಆಜಾದ್ ನಗರ ನಿವಾಸಿ ಮಾಬುಬಿ ಎನ್ನುವರು. ತಮ್ಮ ಮನೆಯ ಮುಂಭಾಗ ದಲ್ಲಿರುವ ಸ್ವಂತ ಸೈಟ್ ನಲ್ಲಿ ಎಮ್ಮೆ ಆಕಳು ಕೋಳಿ ಟಗರು. ಮರಿಗಳು ತನ್ನ ಜೀವನೋಪಾಯಕ್ಕಾಗಿ ಸಾಕಾಣಿಕೆ ಮಾಡುತ್ತಿದ್ದು ರಾತ್ರಿ ಸುಮಾರಿಗೆ ಬೀದಿ ನಾಯಿಗಳು ಟಗರು ಮೇಲೆ ದಾಳಿ ನಡೆಸಿ ಮನ ಬಂದಂತೆ ಕಡಿದು ಜಗಿದು ತಿಂದಾಕಿ ಬೀದಿ ನಾಯಿಗಳ ದಾಳಿಯಿಂದ ಸಾಕು ಟಗರು ಸಾವನ್ನಪ್ಪಿದ್ದು ಇಂತಹ ಪ್ರಕರಣಗಳು ಅನೇಕ ಬಾರಿ ಪಟ್ಟಣದಲ್ಲಿ ಮಕ್ಕಳ ಮೇಲೆ ಕೆಲ ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿ ಮರು ಕಳಿಸಿದ್ದರು ಪಟ್ಟಣ ಪಂಚಾಯತಿ ನಿರ್ಲಕ್ಷ್ಯತ, ಬೇಜವಾಬ್ದಾರಿ ತನದಿಂದ ನಡೆದುಕೊಳ್ಳುತ್ತಿದೆ, ಬೀದಿ ನಾಯಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮೌನವಹಿಸಿದ್ದು ವಿಪರ್ಯಾಸವೆ ಸರಿ. ಕೂಡ್ಲಿಗಿ ಪಟ್ಟಣದಲ್ಲಿ ಅನೇಕ ನಡೆದ ಪ್ರಕರಣಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಇದುವರೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನೂ ಪ್ರಮುಖ ರಸ್ತೆಗಳಲ್ಲಿ ನಾಯಿಗಳ ಸೈನ್ಯ ಯುದ್ಧಕ್ಕೆ ಸಿದ್ದ ರಿದ್ದಂತೆ ರೆಡಿಯಾಗಿ ಪ್ರಮುಖ ರಸ್ತೆಯಲ್ಲಿ ಗುಂಪು ಗುಂಪು ಬೀದಿ ನಾಯಿಗಳ ಸೈನ್ಯ ಪ್ರತಿ ದಿನ ಸೇರಿರುತ್ತವೆ ಇದನ್ನು ನೋಡಿದ ಅಧಿಕಾರಿಗಳು ಇದುವರೆಗೆ ತಮಗೆ ಕಣ್ಣಿಗೆ ಕಂಡರು ಕಂಡಿಲ್ಲವೆಂದು ಕಾಣದಂತೆ ಸಂಚರಿಸುತ್ತಿರುವುದು ವಿಷಾದ ಸಂಗತಿಯಾಗಿದೆ,ಇದರ ಮಧ್ಯ ಅದೆಷ್ಟೋ ವಾಹನ ಸವಾರರಿಗೆ ತೊಂದರೆ ಪಡಿಸಿ ಬೈಕ್ ಸವಾರರು ಅಪಘಾತಕ್ಕೆ ತುತ್ತಾಗಿರುವ ಘಟನೆಗಳು ನಡೆದಿದ್ದು ಕೆಲವು ಮಾಂಸದ ಅಂಗಡಿಗಳು ಪಟ್ಟಣದ ಹೃದಯ ಭಾಗದ ಕೋಳಿ ಅಂಗಡಿಗಳು ನಾಯಿಗಳ ಸೈನ್ಯಕ್ಕೆ ಸಹಕಾರ ನೀಡುತ್ತಿದ್ದು.

ಮಾಂಸದ ಮದದಲ್ಲಿದ್ದ ನಾಯಿಗಳು ಕೂಡ್ಲಿಗಿ ಪಟ್ಟಣ ದೊಳಗಡೆ ಮಾನವರು ಸಾಕುತ್ತಿರುವ ಪ್ರಾಣಿಗಳನ್ನು ಮನೆಯ ಮುಂದೆ ಕಟ್ಟಿಕೊಂಡು ಸಾಕುವಂತಹ ಕುರಿ ಮೇಕೆ ಇನ್ನಿತರ ಪ್ರಾಣಿಗಳ ಬೇಟೆ ಆಡುತ್ತಾ ದಾಳಿ ನಡೆಸಿ ಪ್ರಾಣಪಾಯ ಮಾಡುತ್ತಿವೆ ಆದ್ದರಿಂದ ಇಂದು ಕೂಡ್ಲಿಗಿ ಪಟ್ಟಣದಲ್ಲಿ ಟಗರನ್ನು ನಾಯಿಗಳ ದಾಳಿಗೆ ಬಲಿಯಾಗಿದೆ , ಈಗಲಾದರೂ ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತು ಕೊಂಡು ಬೀದಿ ನಾಯಿಗಳ ವಿರುದ್ಧ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ನಡೆಯದಂತೆ ಕ್ರಮ ಜರುಗಿಸಬೇಕೆಂದು ಸ್ಥಳೀಯರ ಆಕ್ರೋಶವಾಗಿದೆ. ಹಾಗೆ ಈ ಹಿಂದೆ ರಾಮ ನಗರ ಕೊತ್ಲೇಶ್ ರವರ 4 ಕುರಿಗಳನ್ನು ಬೀದಿ ನಾಯಿಗಳು ಕಚ್ಚಿ ಕಚ್ಚಿ ಎಲ್ಲೆಂದರಲ್ಲಿ ಜಿಗಿದು ತಿಂದಿರುವ ಘಟನೆಯನ್ನು ಅಧಿಕಾರಿಗಳಿಗೆ ನಡೆದ ಘಟನೆ ತಿಳಿಸಿದಾಗ ಸ್ಥಳಕ್ಕೆ ಪಟ್ಟಣ ಪಂಚಾಯಿತಿಯ ಆರೋಗ್ಯ ನಿರೀಕ್ಷಕರಾದ ಗೀತಾ ರವರು ವೀಕ್ಷಿಸಿ ಕುರಿಗಳು ಹಾನಿ ಗೊಳಗಾದ ಮಾಲೀಕರಿಗೆ ಅರ್ಜಿ ಕೊಡುವಂತೆ ತಿಳಿಸಿದ್ದರು, ಸರ್ಕಾರ ಪರಿಹಾರ ನೀಡಲು , ಸಂಬಂಧಪಟ್ಟಂತಹ ಇಲಾಖೆಗೆ ನಮ್ಮ ಕಡೆಯಿಂದ ಪತ್ರವನ್ನು ಬರೆಯುವುದಾಗಿ ತಿಳಿಸಿದರು .ಆದರೂ ಯಾವುದೇ ಮನವಿ ಬಗ್ಗೆ ದೂರು ನೀಡಿದ್ದರು ಹಿಂದಿಗೂ ಯಾವುದೇ ರೀತಿಯ ಪರಿಹಾರವೂ ಸಹ ಮಾಲೀಕರಿಗೆ ಬಂದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೂಡ್ಲಿಗಿ ಪಟ್ಟಣದ ಅನೇಕ ಮುಖಂಡರು ಅಧಿಕಾರಿಗಳಿಗೆ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ ಪ್ರಸಂಗದ ಬಗ್ಗೆ ಪತ್ರಿಕೆಗಳ ಮೂಲಕ ಸುದ್ದಿಗಳು ಬಿತ್ತನೆ ಮಾಡಿದರು ಸಾರ್ವಜನಿಕರ ಕೂಗು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿಸ್ತಾನೆ ಇಲ್ಲ ಆದ್ದರಿಂದ ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಅಧಿಕಾರಿಗಳಿಗೆ ಜನರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಈ ದಿನಗಳ ಬಗ್ಗೆ ಕ್ರಮ ಕೈಗೊಳ್ಳಲು ಶೀಘ್ರದಲ್ಲೇ ತಿಳಿಸಿ, ಹಾಗೂ ಬೀದಿ ನಾಯಿಗಳ ಹಾವಳಿಯಿಂದ ತಪ್ಪಿಸುವ ಕೆಲಸ ವಾಗಬೇಕಾಗಿದೆ ಎಂದು ಬಲಿಯಾದ ಟಗರು ಮಾಲೀಕರು, ಕೂಡ್ಲಿಗಿಯ ಕೆಲ ಸಂಘಟನೆಯ ಮುಖಂಡರುಗಳು ನಾಗರಿಕರು ಒತ್ತಾಯಿಸಿದ್ದಾರೆ ಎಂದು ಪತ್ರಿಕಾ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ