ಮೊಳಕಾಲ್ಮುರು ತಾಲೂಕಿನ ಬರದ ಛಾಯೆ ಮೂಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕರು ವಾಸ್ತವಾಂಶದ ಸ್ಥಿತಿಗತಿ ಬಗ್ಗೆ ವಿವರಿಸಿದರು.
ಮೊಳಕಾಲ್ಮುರು ಅಕ್ಟೋಬರ್.3

ಇಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಹಾಗೂ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ’ ಹಂತ -4 ರ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮೊಳಕಾಲ್ಮೂರು ತಾಲೂಕಿಗೆ ಬರದ ಛಾಯೆ ಬರಿ ಮಳೆ ಆಶ್ರಯ ರೈತರಿದ್ದು ಇಂತಹ ರೈತರಿಗೆ ಬೆಳೆ ಪರಿಹಾರಗಳು ಮತ್ತೆ ಇನ್ಶುರೆನ್ಸ್ ಕಟ್ಟಿದ ರೈತರಿಗೆ ಇನ್ಸೂರೆನ್ಸ್ ಯೋಜನೆ ರೂಪಿಸುವುದರ ಬಗ್ಗೆ ಮತ್ತು ಕುಡಿಯುವ ನೀರಿನ ಬಗ್ಗೆ ದನಕರು ಇವುಗಳಿಗೆ ಆಹಾರ ಮತ್ತು ಆರೋಗ್ಯದ ಬಗ್ಗೆ ಆಸ್ಪತ್ರೆಯಲ್ಲಿ ಎಲ್ಲಾ ನಾಗರಿಕರಿಗೆ ಸರಿಯಾದ ರೀತಿಯಿಂದ ಚಿಕಿತ್ಸೆ ನೀಡುವುದರ ಬಗ್ಗೆ ಮತ್ತು ಇನ್ನೂ ಹಲವಾರು ಯೋಜನೆಗಳನ್ನು ಮಾನ್ಯ ಶಾಸಕರು ಹಮ್ಮಿಕೊಂಡಿದ್ದರ ಬಗ್ಗೆ ಸೂಚನೆ ನೀಡಿದರುಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶ್ರೀ ಡಿ ಸುಧಾಕರ್ , ಶ್ರೀ ಬಿ.ಜಿ ಗೋವಿಂದಪ್ಪ, ಶ್ರೀ ಟಿ.ರಘುಮೂರ್ತಿ, ಶ್ರೀ ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು