ಕೊಟ್ಟೂರು ಬೇಜವಾಬ್ದಾರಿ ಜೆಸ್ಕಾಂ ಶಾಖಾಧಿಕಾರಿ-ಜಿ ಕೊಟ್ರೇಶ್.
ಕೆ.ಅಯ್ಯನಹಳ್ಳಿ ಅಕ್ಟೋಬರ್.4

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ ಅಯ್ಯನಳ್ಳಿ ಗ್ರಾಮದಲ್ಲಿ ಪರಸಪ್ಪ ಮತ್ತು ಕೊಟ್ರಪ್ಪ ಎಂಬುವರ ಟ್ರಾನ್ಸ್ಫಾರಂ ಸುಟ್ಟು 12 ದಿನಗಳಾದರೂ ಜೆಸ್ಕಾಂ ಅಧಿಕಾರಿಗಳು ತಿರುಗಿ ನೋಡುತ್ತಿಲ್ಲ ನಮ್ಮ ಹೊಲದಲ್ಲಿ ಮೆಕ್ಕೆಜೋಳ ಒಣಗಿಹೋಗಿದೆ ಆದರೆ ನಾವು ಈಗ ಈರುಳ್ಳಿ ಬಿತ್ತನೆ ಮಾಡಬೇಕೆಂದು ಹೊಲಕ್ಕೆ ನೀರು ಬಿಡಲು ಟ್ರಾನ್ಸ್ಫಾರಂ ಇಲ್ಲದ ಕಾರಣ ನಮಗೆ ತುಂಬಾ ತೊಂದರೆ ಆಗಿದೆ ಇದರ ವಿಚಾರವಾಗಿ ಜೆಸ್ಕಾಂ ಅಧಿಕಾರಿಗಳ ಕೊಟ್ರೇಶ್ ಕೇಳಿದರೆ ನಾಳೆ ಬಾ ನಾಡಿದ್ದು ಬಾ ಎಂದು ಹೀಗೆ ಹೇಳುತ್ತಾ ಸುಮಾರು 10-12 ದಿನಗಳಾಯಿತು.
ನಾವು ಮೂರು ನಾಲ್ಕು ಬಾರಿ ಬಂದರು ಇವರು ಆಫೀಸ್ ರ ಇರುವುದಿಲ್ಲ ಎಂದು ಪರಸಪ್ಪ ಸಿಪಿಎಂಎಲ್ ಅಖಿಲ ಭಾರತ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯದರ್ಶಿಗಳು ನಿರ್ಲಕ್ಷ್ಯ ತೋರಿಸುತ್ತಿರುವ ಅಧಿಕಾರಿ ಬಗ್ಗೆ ಬೇಸತ್ತು ಹೋಗಿದ್ದಾರೆ.

ನಾವು ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಮತ್ತು ಸರ್ಕಾರದ ಆದೇಶದಂತೆ ಒಬ್ಬ ರೈತನ ಟ್ರಾನ್ಸ್ಫರೆಂಟ್ ಸುಟ್ಟರೆ 24 ಗಂಟೆಯೊಳಗೆ ರೈತನಿಗೆ ಟ್ರಾನ್ಸ್ಫಾರಂ ನೀಡಬೇಕು ಆದರೆ ಇಲ್ಲಿ ಬೇಜವಾಬ್ದಾರಿ ಕೇವಲ ಸಂಬಳಕ್ಕಾಗಿ ದುಡಿಯುವ ಅಧಿಕಾರಿಗಳು ಜೆಸ್ಕಾಂ ಆಫೀಸ್ನಲ್ಲಿ ಇರದೆ ಎಲ್ಲೋ ದೂರ ನಿಂತುಕೊಂಡು ನಿರ್ಲಕ್ಷ್ಯತನದ ಮಾತುಗಳನ್ನು ದೂರವಾಣಿ ಮೂಲಕ ಮಾತನಾಡುತ್ತಾರೆ ಇಂತಹ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ಮಾಡುವುದಾದರೆ ಮಾಡಲಿ ಇಲ್ಲದಿದ್ದರೆ ವರ್ಗಾವಣೆ ಆಗಲಿ ಮತ್ತು ಇದರಿಂದ ಬೇಸತ್ತ ಸಿಪಿಎಂಎಲ್ ಅಖಿಲ ಭಾರತ ಕಮ್ಯುನಿಸ್ಟ್ ಪಾರ್ಟಿ ತಾಲೂಕು ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಕೋಡಿಹಳ್ಳಿ ತಿಳಿಸಿದರು.ಈ ವರ್ಷ ಮಳೆ ಇಲ್ಲದೆ ರೈತನ ಬಾಳು ಕಣ್ಣೀರಿಡುವಂತಾಗಿದೆ ಆದರೆ ಇಲ್ಲಿನ ನಿರ್ಲಕ್ಷ್ಯತನ ತೋರುತ್ತಿರುವ ಪ್ರಕಾಶ್ ಪತ್ತೆನೂರು ಕಾರ್ಯನಿರ್ವಾಹಕ ಅಭಿಯಂತರರು ಕೂಡ್ಲಿಗಿ ಮತ್ತು ಜಿ ಕೊಟ್ರೇಶ್ ಜೆಸ್ಕಾಂ ಶಾಖಾ ಅಧಿಕಾರಿ ಕೊಟ್ಟೂರು ಇಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ಇವರ ಮೇಲೆ ಕೊಟ್ಟೂರು ಭಾಗದ ರೈತರು ಅಪಾರ ನಂಬಿಕೆ ಇಟ್ಟಿದ್ದಾರೆ ದಯವಿಟ್ಟು ಇಂಥ ಬಡಪಾಯಿ ರೈತರನ್ನು ಉಳಿಸಿಕೊಡಿ ಎಂದು ಹಾಲಯ್ಯ ಬಾಲಗಂಗಾಧರ ಅಖಿಲ ಭಾರತ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರುಗಳು ಹಾಗೂ ಮತ್ತಿತರರು ಕೇಳಿಕೊಂಡಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು