ಮನೆ ಮನೆಗೆ ಭೇಟಿ ಮೂಲಕ ಕೂಲಿಕಾರರ ಬೇಡಿಕೆ ಸಂಗ್ರಹಣೆ.
ಹುನಗುಂದ ಅಕ್ಟೋಬರ್.5

ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಬಿಸಿಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಚಾಲನೆ ನೀಡಲಾಯಿತು.ಎಸ್ಸಿ ಕಾಲೋನಿಯಲ್ಲಿ ಕೂಲಿ ಕಾರ್ಮಿಕರು ಮನೆಗಳಿಗೆ ಭೇಟಿ ನೀಡಿ, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಮಹಿಳೆಯರು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಬಳಿಕ ಕೂಲಿ ಕಾರ್ಮಿಕರ ಬೇಡಿಕೆ ಪಡೆಯಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎನ್.ಆರ್ ಮಿರಜಕರ,ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.