ಮನುಷ್ಯನಲ್ಲಿ ದುಡ್ಡು ಮತ್ತು ಅಧಿಕಾರಕ್ಕಿಂತ ಅಂತರಂಗದ ಶಕ್ತಿ ಮುಖ್ಯ – ಗೂರುಮಹಾಂತ ಶ್ರೀಗಳು.
ಹುನಗುಂದ ಅಕ್ಟೋಬರ್.5

ಒಳ್ಳೆಯ ಕಾರ್ಯಗಳನ್ನು ಮಾಡಲು ಮನುಷ್ಯನಲ್ಲಿ ದುಡ್ಡು ಮತ್ತು ಅಧಿಕಾರಕ್ಕಿಂತ ಅಂತರಂಗದ ಶಕ್ತಿ ಬಹಳ ಮುಖ್ಯ ಎಂದು ಚಿತ್ತರಗಿ ಸಂಸ್ಥಾನಮಠ ಇಳಕಲ್ಲದ ಗುರುಮಹಾಂತ ಶ್ರೀಗಳು ಹೇಳಿದರು.ಗುರುವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ವಿಜಯ ಮಹಾಂತೇಶ ನೂತನ ಸಭಾ ಭವನ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದ ಅವರು ಸಂಸ್ಥೆ,ಸಮಾಜಕ್ಕೆ ಧಕ್ಕೆ ಯಾಗದಂತೆ ಆಧ್ಯತಾ ಕಾರ್ಯಗಳನ್ನು ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾಡುತ್ತಿದ್ದಾರೆ.ಸಂಘದ ಪ್ರಗತಿಗೆ ಅವರು ಮಾಡುತ್ತಿರುವ ದೂರದೃಷ್ಠಿಯ ಕಾರ್ಯಗಳು ಮೆಚ್ಚುವಂತವು.ಸಂಸ್ಥೆ ಕಟ್ಟುವಲ್ಲಿ ಯೋಜನೆ,ಶಿಸ್ತು,ಸಮಯ ಪಾಲನೆ ಬಹಳ ಮುಖ್ಯ ಎಂದರು.ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸಭಾ ಭವನ ಉದ್ಘಾಟಿಸಿ ಮಾತನಾಡಿ ಈ ಮೊದಲು ಶಾಲಾ ಕಾಲೇಜುಗಳು ಪಾಲಿಟ್ನಿಕ್,ಪಾಮರ್ಸಿ,ನಸಿಂಗ್ ಕಾಲೇಜುಗಳು ಶಿಥಿಲಾವಸ್ಥೆಯಿಂದ ಕೂಡಿದ್ದು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗ ಬಾರದು ಎನ್ನುವ ಉದ್ದೇಶದಿಂದ ಸುಸಜ್ಜಿತ ಕೊಠಡಿಗಳನ್ನು ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಕೊಠಡಿಗಳಿಗೆ ದಾನಿಗಳು ನೀಡಿದ ಹಣ ಯಾವದೇ ರೀತಿ ಪೋಲಾಗದಂತೆ ಅಚ್ಚುಕಟ್ಟಾಗಿ ಲೆಕ್ಕಪತ್ರವನ್ನು ಹಿಡಲಾಗಿದೆ ಎಂದರು.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ ಸಭಾ ಭವನ ನಿರ್ಮಾಣಕ್ಕೆ ನಮ್ಮ ಸಂಸ್ಥೆಯ ಶಿಕ್ಷಕರು ಒಂದು ತಿಂಗಳ ವೇತನ ಜೊತೆಗೆ ಹಳೆ ವಿದ್ಯಾರ್ಥಿಗಳು ಹಣ ನೀಡಿದ್ದಾರೆ.ದಾನಿಗಳಿಂದ ಸಂಸ್ಥೆ ಹೆಚ್ಚಿನ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.ಶಾಲೆ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಅಭಿಯಂತರ ಮಹೇಶ ಕಕರಡ್ಡಿ ಮಾತನಾಡಿ ಈ ಸಂಸ್ಥೆಯಲ್ಲಿನ ಶಿಕ್ಷಕರು ನೀಡಿದ ಮಾನವೀಯ ಮೌಲ್ಯ ಗಳನ್ನೊಳಗೊಂಡ ಶಿಕ್ಷಣ ನನ್ನ ಪ್ರಗತಿಗೆ ಕಾರಣವಾಗಿದೆ.ಇಂತಹ ಸಂಸ್ಥೆಯಲ್ಲಿ ಕಲಿಯೋದು ಒಂದು ಸೌಭಾಗ್ಯ ಎಂದರು.ಈ ಸಂದರ್ಭದಲ್ಲಿ ಡಿ.ಎಸ್.ಕೆಂದೂರ,ಎಂ.ಎಸ್.ಮಠ.ಎಂ.ಆಯ್.ಕತ್ತಿ,ವಿ.ಪಿ.ಬಳೊಟಗಿ.ಅರುಣ ದುದ್ಗಿ,ರವಿ ಹುಚನೂರ,ಸಂಗಣ್ಣ ಚಿನಿವಾಲರ,ಶಿವಪ್ಪ ನಾಗೂರ,ಬಸವರಾಜ ರಕ್ಕಸಗಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ