ಅರ್ಧ ಶೈಕ್ಷಣಿಕ ವರ್ಷ ಮುಗಿದರೂ – ಹಾಸ್ಟೇಲ್ ಮಕ್ಕಳಿಗೆ ದೊರೆಯದ ಸೋಪ್ ಕಿಟ್ ಭಾಗ್ಯ : ಮಲ್ಲಿಕಾರ್ಜುನ.ಎಂ.ಬಂಡಗರಲ್ಲ.
ಹುನಗುಂದ ಅಕ್ಟೋಬರ್.5

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 7 ವಸತಿ ನಿಯಲಗಳ ವಿದ್ಯಾರ್ಥಿಗಳಿಗೆ ಕಳೆದ ಜೂನ್ ದಿಂದ ಮೂರು ತಿಂಗಳಿನಿಂದ ಸೋಪ್ ಕಿಟ್ ಮತ್ತು ನೋಟ್ ವಿತರಣೆ ಮಾಡದೇ ಇರುವ ವಿಷಯ ಸಧ್ಯ ಬೆಳಕಿಗೆ ಬಂದಿದೆ.ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನಲ್ಲಿ 5 ಮೆಟ್ರಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿದ್ದರೇ ಎರಡು ಮೆಟ್ರಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದಲ್ಲಿ ಒಟ್ಟು 626 ಜನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು.ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಜೂನ್ ತಿಂಗಳಲ್ಲಿ ಒಂದು ಡಜನ್ ನೋಟ್ ಬುಕ್ ಮತ್ತು ಪೆನ್ನು ವಿತರಸಿ ಬೇಕು ಮತ್ತು ಪ್ರತಿ ತಿಂಗಳು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಒಂದು ಮೈ ಸೋಪು,ಎರಡು ಬಟ್ಟೆಯ ಸೋಪು ಮತ್ತು ಒಂದು ಟುಥ್ ಪೇಸ್ಟ್ ಹಾಗೂ ಒಂದು ಕೊಬ್ಬರೆ ಎಣ್ಣಿ ಬಾಟಲ್ ನೀಡಬೇಕು. ಟೆಂಡರ್ ಪ್ರಕ್ರಿಯೆ ತಡವಾದರೇ ಸ್ಥಳೀಯವಾಗಿ ಖರೀದಿಸಿ ಕೊಡಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ನಿರ್ದೇಶನ ನೀಡಿದ್ದರೂ ಕೂಡಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ದಿವ್ಯ ನಿರ್ಲಕ್ಷ್ಯತನದಿಂದ ಕಳೆದ ಮೂರು ತಿಂಗಳಿನಿಂದ ಸೋಪು ಕಿಟ್ ಮತ್ತು ನೋಟ್ ಬುಕ್‌ಗಳನ್ನು ಹಂಚಿಕೆ ಮಾಡದೇ ಇರೋದರಿಂದ ಪ್ರತಿಯೊಂದು ವಸತಿ ನಿಲಯದ ಬಡ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಬಿದ್ದಿದ್ದಂತೂ ನಿಜ.ಅದನ್ನು ತುಂಬಿ ಕೊಡುವರ‍್ಯಾರು ಎನ್ನುವ ಪ್ರಶ್ನೆ ಸಧ್ಯ ಸಮಾಜ ಕಲ್ಯಾಣ ಅಧಿಕಾರಿಗಳ ಮುಂದಿದೆ.ಮೊದಲೇ ಕಿತ್ತಿ ತಿನ್ನುವ ಬಡತನ ಆರ್ಥಿಕ ಪರಸ್ಥಿತಿ ಸರಿಯಿಲ್ಲದೇ ಇರೋದರಿಂದ ಯಾರದೋ ಕೈ ಕಾಲು ಹಿಡಿದು ಸರ್ಕಾರಿ ಹಾಸ್ಟೇಲ್ ಸೇರಿಸುತ್ತಾರೇ ಅಂತಹ ಮಕ್ಕಳಿಗೆ ಸರ್ಕಾರ ಕೋಟಿ ಕೋಟಿ ಹಣ ವ್ಯಯಿಸಿ ಮಾಡಿದರೂ ಕೂಡಾ ಟೆಂಡರ್ ಪ್ರಕ್ರಿಯೆ ತಡವಾಗಿದೇ ಅಂತ ನೆಪ ಹೇಳಿಕೊಂಡು ಸ್ಥಳೀಯವಾಗಿ ಕಿಟ್ ಖರೀದಿ ಮಾಡಿ ಕೊಡಲು ಅವಕಾಶವಿದ್ದರೂ ಕೂಡಾ ವಿದ್ಯಾರ್ಥಿಗಳ ಕೈಯಿಂದ ಖರ್ಚು ಮಾಡಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.ಅರ್ಧ ಶೈಕ್ಷಣಿಕ ವರ್ಷ ಮುಗಿದ ಮೇಲೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸೆ.23 ರಂದು ಕಿಟ್ ಸಪ್ಲಾಯ್ ಮಾಡಿದ್ದಾರೆ ಎನ್ನುವ ಮಾತಿದೆ.ಅದು ಎಷ್ಟರ ಮಟ್ಟಿಗೆ ಹಂಚಿಕೆಯಾಗಿದೆ ಎನ್ನುವುದು ಇನ್ನೂ ನಿಗೂಢ.ಬಾಕ್ಸ್ ಸುದ್ದಿ-ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳ ಮಕ್ಕಳಿಗೆ ಸೋಪ್ ಕಿಟ್ ಟೆಂಡರ್ ಪ್ರಕ್ರಿಯೆಯು ರಾಜ್ಯ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿತ್ತು.ಇದರಿಂದ ಜೂನ್‌ದಿಂದ ಸೋಪ್ ಕಿಟ್ ಜಿಲ್ಲೆ ಯಾವದೇ ವಸತಿ ನಿಲಯಗಳಿಗೆ ವಿತರಣೆಯಾಗಿಲ್ಲ.ಆದರೆ ಟೆಂಡರ್ ಪ್ರಕ್ರಿಯೆ ತಡವಾಗುತ್ತೇ ಎನ್ನುವ ಕಾರಣಕ್ಕೆ ತಾಲೂಕಿನ ಸಹಾಯಕ ನಿರ್ದೇಶಕರಗಳಿಗೆ ಸ್ಥಳೀಯವಾಗಿ ಖರೀದಿಸಿ ಮಕ್ಕಳಿಗೆ ವಿತರಿಸಲು ತಿಳಿಸಲಾಗಿದೆ.ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡಲಾರದು ತಪ್ಪು.ನಂದಾ ಹಣಬರಟ್ಟಿ ಜಿಲ್ಲಾ ಉಪನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟಿ.ಬಾಕ್ಸ್ ಸುದ್ದಿ-ಸೋಪ್ ಕಿಟ್ ಟೆಂಡರ್ ಸ್ಟೇಟ್ ವಿಷಯ ಇತ್ತು ಅದಕ್ಕೆ ಅವಳಿ ತಾಲೂಕಿನ ಯಾವದೇ ಹಾಸ್ಟೇಲ್‌ಗಳಿಗೆ ಕೊಟ್ಟಿಲ್ಲ.ಸ್ಥಳೀಯವಾಗಿ ಖರೀದಿಸಿ ಕೊಡಲು ಖರ್ಚು ವೆಚ್ಚದ ಸಮಸ್ಯೆಯಾಗುತ್ತೇ.ನಾವು ಕೇಳೋ ರೇಟ್‌ನಲ್ಲಿ ಸಿಗಲ್ಲ ಎನ್ನುವ ಕಾರಣಕ್ಕೆ ಖರೀದಿಸಿ ಕೊಟ್ಟಿಲ್ಲ.ಸಪ್ಟೆಂಬರ್‌ದಲ್ಲಿ ಬಂದಿವೆ ಕೊಟ್ಟಿದ್ದೇವೆ.ಮಲ್ಲಿಕಾರ್ಜುನ ಕಟ್ಟಿಮನಿ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಹುನಗುಂದ.
ತಾಲೂಕ ವರದಿಗಾರರು.ಮಲ್ಲಿಕಾರ್ಜುನ.ಎಕ.ಬಂಡರಗಲ್ಲ ಹುನಗುಂದ