ಕೂಡ್ಲಿಗಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಡಿ. ನಿವೇದಿತಗೆ – ಕನ್ನಡ ರತ್ನ ಪ್ರಶಸ್ತಿ.
ಕೂಡ್ಲಿಗಿ ಅಕ್ಟೋಬರ್.5

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಖಾಸಗಿ ಶಾಲೆಯೊಂದರ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಕುಮಾರಿ ಡಿ.ನಿವೇದಿತ ಗೆ “ಕನ್ನಡ ರತ್ನ” ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ. ಕನ್ನಡ ವಿಷಯದಲ್ಲಿ ದಾಖಲು ಪ್ರಮಾಣದಷ್ಟು ಅಂಕ ಪಡೆದ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ “ಕನ್ನಡ ರತ್ನ” ಪ್ರಶಸ್ತಿಯನ್ನು. ಕೂಡ್ಲಿಗಿ ಪಟ್ಟಣದ ಮೌಲಾನಾ ಅಜಾದ್ ಪ್ರೌಢಶಾಲೆಯ, SSLC ವಿದ್ಯಾರ್ಥಿನಿ ಡಿ.ನಿವೇದಿತರವರು, 2022-23ನೇ ಸಾಲಿನ ಪರೀಕ್ಷೆಯಲ್ಲಿ ಕನ್ನಡ ವಿಷಯರಲ್ಲಿ. 125ಕ್ಕೆ 123ಅಂಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯು, ಡಿ.ನಿವೇದಿತರ ಸಾಧನೆಯನ್ನು ಮನಗಂಡು. ಸಂಸ್ಥೆಯ ವತಿಯಿಂದ ಅಕ್ಟೋಬರ್ 1ರಂದು, ಹರಪನಹಳ್ಳಿ ಪಟ್ಟಣದಲ್ಲಿ ಜರುಗಿದ. “ರಾಜ್ಯ ಹಾಗೂ ಜಿಲ್ಲಾ ಮಟ್ಟದ-ಕನ್ನಡ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಿ.ನಿವೆದಿತರನ್ನು ಆಹ್ವಾನಿಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯ ಮಾನ್ಯರಿಂದ, 2022-23ನೇ ಸಾಲಿನ “ಕನ್ನಡ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

*ವಿದ್ಯಾರ್ಥಿನಿಯ ಪರಿಚಯ*- ಪ್ರತಿಭಾನ್ವಿತ ವಿದ್ಯಾರ್ಥಿನಿ ಡಿ.ನಿವೇದಿತರವರ ತಾಯಿ: ಶ್ರೀಮತಿ ಡಿ.ಶಿಲ್ಪಾ ಪರಶುರಾಮ. ತಂದೆ:ಡಿ.ಪರಶುರಾಮ. ಇವರು ಪಟ್ಟಣದ 13ನೇ ವಾರ್ಡ್ ನ ವಾಸಿಗಳಾಗಿದ್ದಾರೆ. ಕೃಷಿ ಹಿನ್ನಲೆಯ ಮಧ್ಯಮ ವರ್ಗದ ಕುಟುಂಬದವರಾಗಿದ್ದಾರೆ, ಹಾಗೂ ವಾಲ್ಮೀಕಿ ಸಮುದಾಯದ ಯುವ ಮುಖಂಡರಾಗಿದ್ದು. ಪಟ್ಟಣದಲ್ಲಿ ಹೆಚ್.ಪಿ.ಗ್ಯಾಸ್ ಸಿಲೆಂಡರ್, ಡೋರ್ ಡೆಲಿವರಿ ಯಾಗಿದ್ದಾರೆ. ವಿದ್ಯಾರ್ಥಿನಿ ಡಿ.ನಿವೇದಿತಾ ರವರು, ಸದ್ಯ ಪಟ್ಥಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ. ಪ್ರಥಮ ಪಿಯುಸಿ ತರಗತಿಯ ವಿಜ್ಞಾನ ವಿಭಾಗದಲ್ಲಿ, ವ್ಯಾಸಾಂಗ ಮಾಡುತ್ತಿದ್ದಾರೆ. ಅಭಿನಂದನೆಗಳ ಮಹಾಪೂರ – ಪ್ರತಿಭಾನ್ವಿತ ವಿದ್ಯಾರ್ಥಿನಿ ಡಿ.ನಿವೇದಿತಾ ರವರಿಗೆ, “ಕನ್ನಡ ರತ್ನ” ಪ್ರಶಸ್ತಿ ಲಭಿಸಿದ್ದಕ್ಕಾಗಿ. ಕೂಡ್ಲಿಗಿ ಪಟ್ಟಣ ಮತ್ತು ತಾಲೂಕಿನ ವಾಲ್ಮೀಕಿ ಸಮುದಾಯ, ಹಾಗೂ ವಿವಿಧ ಸಮುದಾಯಗಳ ಪ್ರಮುಖರು ಅಭಿನಂದಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳ ಒಕ್ಕೂಟ. ರೈತ ಸಂಘಟನೆ, ಪತ್ರಕರ್ತರ ಸಂಘಟನೆ, ಕಾರ್ಮಿಕ ಸಂಘಟನೆ, ಮಹಿಳಾ ಸಂಘಟನೆ, ನಾಗರಿಕರು ಗಣ್ಯರು ಹಾಗೂ ಸಾಹಿತಿಗಳು. ಸ.ಸಂ.ಪ.ಪೂ.ಕಾಲೇಜ್ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಹಾಗೂ ಸಮಸ್ತ ವಿದ್ಯಾರ್ಥಿಗಳು. ಮೌಲಾನಾ ಆಜಾದ್ ಪ್ರೌಢಶಾಲೆಯ ಪ್ರಾಂಶುಪಾಕರು ಉಪಾಧ್ಯಾಯರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು. ನೌಕರರ ಸಂಘದವರು, ಪಟ್ಟಣ ಹಾಗೂ ತಾಲೂಕಿನೆಲ್ಲೆಡೆಯ ಹೆಚ್.ಪಿ.ಗ್ಯಾಸ್ ವಿತರಕರು, ಹಿತೈಷಿಗಳು ಸ್ನೇಹಿತರು. ಪ್ರತಿಭಾನ್ವಿತ ವಿದ್ಯಾರ್ಥಿನಿ ಡಿ.ನಿವೇದಿತರನ್ನು ಅಭಿನಂದಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ