ದಲಿತರ ಕಾಲೋನಿ ಸ್ವಚ್ಛತೆಗೆ ಮುಂದಾದ ಮುಖ್ಯಾಧಿಕಾರಿ ಎ.ನಸರುಲ್ಲಾ.
ಕೊಟ್ಟೂರು ಅಕ್ಟೋಬರ್.5

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹ್ಯಾಳ್ಯಾ ರಸ್ತೆಯಲ್ಲಿ ವಾಸಿಸುತ್ತಿರುವ ದಲಿತರ ಕಾಲೋನಿಗಳಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿರುವ ವರದಿಗೆ ಸ್ಪಂದಿಸಿದ ಪಟ್ಟಣದ ಮುಖ್ಯಾಧಿಕಾರಿಗಳು ಗುರುವಾರ ತಾವೇ ಸ್ವಚ್ಛತೆಗೆ ಇಳಿದರು. ಅಲ್ಲಲ್ಲಿ ಬಿದ್ದಿದ್ದ ಕಸದ ರಾಶಿಗಳನ್ನು ತಮ್ಮ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ದಲಿತ ಕಾಲೋನಿಗೆ ಹಾಜರಾಗಿ ವಿಲೇವಾರಿ ಮಾಡಿ, ತುಂಬಿ ಹೋಗಿದ್ದ ರಾಜ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕ್ರಮ ಕೈಗೊಂಡು, ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು. ಹಗರಿಬೊಮ್ಮನಹಳ್ಳಿ ರಸ್ತೆಯ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದು. ಈ ಕಾಮಗಾರಿ ಕಳಪೆಯಾಗಿ ನಡೆಯುತ್ತಿರುವುದನ್ನು ನೋಡಿಯೂ ನೋಡದಂತೆ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಈ ಕಾಮಗಾರಿಕೆ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಭೀತಿ ಇರುವಾಗಲು ಈ ಕಳಪೆ ಮುಂದುವರಿಸುತ್ತಿದ್ದಾರೆ ಎಂದರೆ ಜನರ ಆರೋಗ್ಯದ ಬಗ್ಗೆ ಎಷ್ಟು ಇಲ್ಲಿನ ಅಧಿಕಾರಿಗಳಿಗೆ ಕಾಳಜಿ ಇದೆ ಎಂಬುದು ಅಧಿಕಾರಿಗಳ ನಿರ್ಲಕ್ಷ್ಯವೇ ಸೂಚಿಸುವುದು ಎಂದು ಇಲ್ಲಿನ ಜನರಿಗೆ ತಿಳಿದು ಬರುತ್ತದೆ.

ಈ ಕಾಮಗಾರಿಯಿಂದ ದಲಿತರ ಕಾಲೋನಿಗಳಲ್ಲಿರುವ ಮನೆಗಳಿಗೆ ಚರಂಡಿ ನೀರು ನುಗ್ಗುವ ಸಂಭವವಿದ್ದರೂ ಸಹ ಲೋಕೋಪಯೋಗಿ ಇಲಾಖೆ ಕಳಪೆ ಕಾಮಗಾರಿ ಕಂಡರೂ ಕಾಣದಂತೆ ಮೂಕ ಪ್ರೇಕ್ಷಕರಾಗಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ದಲಿತರ ಬಗ್ಗೆ ಇವರಿಗಿರುವ ಕಾಳಜಿಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ದಲಿತ ಮುಖಂಡರಾದ ಅಜ್ಜಪ್ಪ, ಚಂದ್ರಶೇಖರ್ ಇತರೆ ದಲಿತ ಮುಖಂಡರು ಹಾಜರಿದ್ದರು ಹೇಳಿಕೆಗಳನ್ನು ನೀಡಿದ್ದಾರೆ.ಕೋಟ್ನಮ್ಮ ಕಾಲೋನಿಗಳ ಹತ್ತಿರವೇ ಲೋಕೋಪಯೋಗಿ ಇಲಾಖೆಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಕಳಪೆಯಾಗಿದೆ. ಈ ಕಳಪೆ ಕಾಮಗಾರಿಯಿಂದ ಮುಂದೆ ನಮ್ಮ ಮನೆಗಳಿಗೆ ಚರಂಡಿ ನೀರು ನುಗ್ಗುವ ಸಂಭವವಿದೆ. ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆಅಮರೇಶ್, ದಲಿತ ಮುಖಂಡರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು