ನಿಧನ ವಾರ್ತೆ:ಬುಟ್ಟೀರಪ್ಪರ ವೀರಪ್ಪನವರ ಹನುಮಂತಪ್ಪ ನಿಧನ – ಕೂಡ್ಲಿಗಿ.
ಕ್ಯಾಸನಕೆರೆ ಅಕ್ಟೋಬರ್.5

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚೌಡಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕ್ಯಾಸನಕೆರೆ ಗ್ರಾಮ ನಿವಾಸಿ ಯಾದ ಡಾ. ಬಿ. ಆರ್. ಅಂಬೇಡ್ಕರ್ ನಗರದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹನುಮಂತಪ್ಪ ರವರು (87) ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ಬೆಳಿಗ್ಗೆ 11.30 ರ ಸಮಯಲ್ಲಿ ತಮ್ಮ ಮನೆಯಲ್ಲಿ ನಿಧನ ಹೊಂದಿರುತ್ತಾರೆ. ಇವರಿಗೆ 3 ಗಂಡು 2 ಜನ ಹೆಣ್ಣು ಮಕ್ಕಳಿದ್ದು ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಕ್ಯಾಸನಕೆರೆ ಗ್ರಾಮದ ಇವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 10:30ಕ್ಕೆ ಗಂಟೆಗೆ, ಗ್ರಾಮದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಗ್ರಾಮ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಬುಟ್ಟೀರಪ್ಪರ ವೀರಪ್ಪ ನವರ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ಹನುಮಂತಪ್ಪ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ