ಗೃಹಲಕ್ಷ್ಮೀ ಯೋಜನೆಗೆ 2 ತಿಂಗಳಿನಲ್ಲೇ ಗ್ರಹಣ..!

ಕೊಟ್ಟೂರು ಅಕ್ಟೋಬರ್.6

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಕುಟುಂಬದ ಯಜಮಾನಿಯರ ಖಾತೆಗೆ 2000 ರೂ. ಹಣ ಜಮಾ ಆಗದೆ ಆಹಾರ ಇಲಾಖೆ ಕಚೇರಿ ಹಾಗೂ ಬ್ಯಾಂಕುಗಳಿಗೆ ಎಡದಾಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಧಾರ್ ಸೀಡಿಂಗ್, ಎನ್‌ ಪಿಸಿಐ ಮ್ಯಾಪಿಂಗ್ ಸಂಕಷ್ಟ:ಮತ್ತೊಂದು ಕಡೆ ತಾಲೂಕಿನಲ್ಲಿ ಸುಮಾರು 5000ಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮೀ ಅರ್ಜಿ ನೊಂದಾಯಿಸಿಕೊಂಡು 2000 ಹಣಕ್ಕಾಗಿ ಬ್ಯಾಂಕುಗಳು ಮತ್ತು ಕಂಪ್ಯೂಟರ್ ಕೇಂದ್ರಗಳಿಗೆ ನಿತ್ಯ ಅಲೆದಾಡುತ್ತಿದ್ದರೂ ಯಾವ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಗೃಹಲಕ್ಷ್ಮೀಗೆ ಅರ್ಜಿ ಹಾಕಿ ಎರಡು ತಿಂಗಳು ಕಳೆದರೂ ಖಾತೆಗೆ ಹಣ ಜಮಾ ಆಗದೆ ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗದೆ ಮ್ಯಾಪಿಂಗ್ ಮಾಡಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಂದ ಸಿದ್ಧ ಉತ್ತರ ಬರುತ್ತಿದೆ. ಆದರೂ ಖಾತೆಗೆ ಇನ್ನೂ ಹಣ ಜಮಾ ಆಗದೆ ಗ್ರಾಮಇನ್‌ ಕೇಂದ್ರಗಳಿಗೆ ಹೋದರೆ ನಮ್ಮದು ಅರ್ಜಿ ಹಾಕುವುದು ಅಷ್ಟೇಕೆಲಸ ಬ್ಯಾಂಕಿಗೆ ಹೋಗಿ ವಿಚಾರಿಸಿ ಎಂದು ನಾಮಫಲಕ ಹಾಕಿದ್ದಾರೆ. ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವ ಹಾಗೆ ಬಿಪಿಎಲ್ ಕುಟುಂಬದ ಯಜಮಾನಿಯರ ಪರಿಸ್ಥಿತಿಯಾಗಿದೆ. ಕೆಲವು ಕುಟುಂಬಗಳಿಗೆ ಹಣ ಬಂದರೆ ಮತ್ತೊಬ್ಬರಿಗೆ ಹಣ ಜಮಾ ಆಗದೆ ಪರಿ ತಪಿಸುತ್ತಿದ್ದಾರೆ. ಇನ್ನು ಕೆಲವರು ರೇಷನ್ ಕಾರ್ಡ್ ತಿದ್ದುಪಡಿ ಆದರೂ ಅರ್ಜಿ ಸಲ್ಲಿಕೆಯಾಗದೆ ಪರ ದಾಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಕೊಟ್ಟೂರು ತಾಲೂಕಿನಲ್ಲಿ ಸುಮಾರು 3000 ಯಜಮಾನಿಯರಿಗೆ ಹಣ ಜಮೆಯಾಗಿಲ್ಲ ಕೂಡಲೇ ಚುನಾವಣಾ ಪೂರ್ವದಲ್ಲಿ ಸರ್ಕಾರ ಘೋಷಿಸಿದಂತೆ ಅರ್ಹ ಬಿಪಿಎಲ್ ಕುಟುಂಬದ ಯಜಮಾನಿ ಮಹಿಳೆಗೆ ನ್ಯಾಯ ಒದಗಿಸಲಿ ಎಂಬುದು ಅಭಿಲಾಷೆಯಾಗಿದೆ.ಆಹಾರ ಇಲಾಖೆಯಿಂದ ಭಾರೀ ಯಡವಟ್ಟುತಾಲೂಕಿನಾದ್ಯಂತ ಬಹುತೇಕ ಕುಟುಂಬದ ಯಜಮಾನಿಯರು ಗೃಹಲಕ್ಷ್ಮೀ ಪೋರ್ಟಲ್‌ನಲ್ಲಿ ನೊಂದಣಿ ಮಾಡಿದ್ದರೂ ಖಾತೆಗೆ ಹಣ ಜಮಾ ಆಗದಿರುವ ಸಮಸ್ಯೆ ಒಂದು ಕಡೆ ಯಾದರೆ, ಸುಮಾರು ಸಾವಿರ ಮಂದಿಗೆ ಆಹಾರ ಇಲಾಖೆಯ ತಂತ್ರಾಂಶದಲ್ಲಿ ಬಿಪಿಎಲ್ ಕುಟುಂಬದ ಯಜಮಾನಿ ಮಹಿಳೆಯನ್ನು ತಿದ್ದುಪಡಿ ಮಾಡಿದ್ದರೂ ಸಹ ಗೃಹಲಕ್ಷ್ಮೀ ಪೋರ್ಟಲ್ ನಲ್ಲಿ ಅಪಡೆಟ್ ಆಗದೆ ಎರಡು ತಿಂಗಳಿಂದ ನಿತ್ಯವೂ ಆಹಾರ ಇಲಾಖೆಯ ಬಾಗಿಲು ತಟ್ಟುತ್ತಿದ್ದಾರೆ.ನಮ್ಮ ಅತ್ತೆಯವರು ತೀರಿ ಹೋಗಿದ್ದು, ಎರಡು ತಿಂಗಳ ಹಿಂದೆ ರೇಷನ್ ಕಾರ್ಡ್ ಅಪಡೆಟ್ ಆಗಿದೆ. ಆದರೆ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಹೋದರೆ ಇನ್ನು ನಮ್ಮ ತಾಯಿ ಹೆಸರು ಬದಲಾಗದೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಮತ್ತೊಂದು ಕಡೆ ಅಕ್ಕಿಯ ಬದಲಿಗೆ ನೀಡುವ ಹಣ ಕೂಡ ಜಮೆಯಾಗಿಲ್ಲ.- ನೊಂದ ಮಹಿಳೆಯರು, ಕೊಟ್ಟೂರು. -ನಮಗೆ ನೀಡಿರುವ ಆಹಾರ ಇಲಾಖೆ ಮಾಹಿತಿ ಪ್ರಕಾರ ರೇಷನ್ ಕಾರ್ಡ್ ಡೆಟಾಬೇಸ್‌ನಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮೀ ಪೋರ್ಟಲ್‌ ನಲ್ಲಿ ಬದಲಾಗಿಲ್ಲ ಇದಕ್ಕೆ 68 ದಿನಗಳ ಗಡುವು ನೀಡಿದ್ದಾರೆ. ಬಿ.ಮಂಜುನಾಥ, ಆಹಾರ ನಿರೀಕ್ಷಕಮೂರು ತಿಂಗಳಿಂದ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದವರು ಹಣ ಬಂದಿಲ್ಲ ಎನ್ನುತ್ತಿದ್ದು, ರೇಷನ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಯಾದರೂ, ಇನ್ನೂ ಕೆಲವರು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಇದರಿಂದ ನಾವು ರೋಸಿಹೋಗಿದ್ದು, ಆಹಾರ ಇಲಾಖೆ ಹಾಗೂ ಬ್ಯಾಂಕುಗಳಿಗೆ ಹೋಗಿ ವಿಚಾರಿಸಿ ಎಂದು ಹೇಳಿ ಕಳುಹಿಸುತ್ತಿದ್ದೇವೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button