ಮುಳವಾಡ ಏತ ನೀರಾವರಿಯ ಭೂಮಿ ಪೂಜೆ ಸಮಾರಂಭ.
ಹಂದಿಗನೂರ ಜನೇವರಿ.15

ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ, ನಮ್ಮ ತಂದೆ ದಿವಂಗತ ಎಂ.ಸಿ.ಮನಗೂಳಿ ಅವರ ಆಶಯದಂತೆ ನನ್ನ ಮತ ಕ್ಷೇತ್ರದ ಸಂಪೂರ್ಣ ನೀರಾವರಿ ಮಾಡುವುದು ನನ್ನ ಜವಾಬ್ದಾರಿ, ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಗೆಲ್ಲಿಸಿದ್ದೀರಿ ನಿಮ್ಮ ವಿಶ್ವಾಸಕ್ಕೆ ತಕ್ಕಂತೆ ಕೆಲಸ ನಾನು ಮಾಡುತ್ತೇನೆ, ಶಾಸಕರಾದ ಅಶೋಕ ಮನಗೂಳಿ, ಸಿಂದಗಿ ಮತಕ್ಷೇತ್ರದ ಹಂದಿಗನೂರ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ಯೋಜನೆ ಹಂತ 3 ರ ಅಡಿಯಲ್ಲಿ ಬರುವ ವಿಜಯಪುರ ಮುಖ್ಯ ಕಾಲುವೆ ಬರುವ ವಿತರಣಾ ಕಾಲುವೆ ಸಂಖ್ಯೆ 49 ಮತ್ತು ಲ್ಯಾಟರಲ್ ಹಾಗೂ ಕಟ್ಟಡಗಳ ಒಳಗೊಂಡ ಕಾಮಗಾರಿ ಪೂಜಾ ನೆರವೇರಿಸಿ ಮಾತನಾಡಿ. ರೈತರ ಹೊಲಗಳಿಗೆ ನೀರು ಕೊಡಬೇಕು ಗ್ರಾಮದಲ್ಲಿ ಇರುವ ಜನರಿಗೆ ಶುದ್ಧವಾದ ಕುಡಿಯುವ ನೀರು ಕೊಡ ಬೇಕಾಗಿದೆ,

ಹಿಂದೆ ಈ ಕೆರೆಯ ಬಗ್ಗೆ ಚರ್ಚೆ ಮಾಡಿ ಈ ಗ್ರಾಮಕ್ಕೆ ನಮ್ಮ ತಂದೆಯವರು 2018 – 19 ನೇ ಸಾಲಿನಲ್ಲಿ ಐದು ಬೋರುಗಳನ್ನು ಹೊಡಿಸಿದ್ದರು, ಮತ್ತು ಸರ್ಕಾರಿ ಜಮೀನಿನ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ 18 ಎಕರೆ 20 ಗುಂಟೆ ಜಮೀನಿನಲ್ಲಿ ಆಗಿನ ಸಂದರ್ಭದಲ್ಲಿ ಒಂದುವರೆ ಕೋಟಿಯ ಕಾಮಗಾರಿಯನ್ನು ನಮ್ಮ ತಂದೆಯವರು ಚಾಲನೆ ನೀಡಿದ್ದರು, ನಮ್ಮ ತಂದೆ ಬಿಟ್ಟು ಹೋದ ನೀರಿನ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ನಾನು ಸಂಪೂರ್ಣವಾಗಿ ನೀರಾವರಿಯನ್ನಾಗಿ ಮಾಡುತ್ತೇನೆ,ಹಾಗೂ ಈ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ ಬರುವ ದಿನ ಮಾನಗಳಲ್ಲಿ ಮಾಡುತ್ತೇನೆ, ಎಂದು ಮಾತನಾಡಿದರು ಈ ಪೂಜಾ ಸಮಾರಂಭದಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಈರಗಂಟೇಪ್ಪ ಬಿರಾದಾರ ಕಾಂಗ್ರೆಸ್ ಮುಖಂಡರಾದ ಅಶೋಕ ಕೋಳರಿ, ಆಲಮೇಲ, ಗುತ್ತಿಗೆದಾರರಾದ ಬಸನಗೌಡ ಪಾಟೀಲ್, ಮುಖಂಡರಾದ ಅಶೋಕ ಗೌಡ ಸಿದ್ದರೆಡ್ಡಿ, ರಾಮನಗೌಡ ಬಿರಾದಾರ್, ಚಂದ್ರಶೇಖರ್ ನ್ಯಾಮಣ್ಣವರ್, ಶಿವಪುತ್ರ ಚೋರಗಸ್ತಿ, ಯಲ್ಲಪ್ಪ ಕುರುಕುಂದಿ, A E ಶಂಕರಗೌಡ ಪಾಟೀಲ್, A E ಅನಂತಕುಮಾರ್ ಕುಲಕರ್ಣಿ, ಹಾಗೂ ಗ್ರಾಮದ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ