ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಲು ಸಿ.ಎಂ ಆದೇಶ – ಜಿಎಚ್. ಶ್ರೀನಿವಾಸ್.
ತರೀಕೆರೆ ಅಕ್ಟೋಬರ್.8
ಭದ್ರಾ ಜಲಾಶಯದಿಂದ ಶುದ್ಧ ಕುಡಿಯುವ ನೀರನ್ನು ಪ್ರತಿ ಮನೆಗಳಿಗೂ ಸಹ ಕೊಡುತ್ತೇವೆ ಎಂದು ಶಾಸಕ ಜಿಎಚ್ ಶ್ರೀನಿವಾಸ್ ರವರು ಇಂದು ಅಮೃತಪುರ ಸಮುದಾಯ ಭವನದಲ್ಲಿ ಕಂದಾಯ ಇಲಾಖೆ, ಜಿಲ್ಲಾಡಳಿತ ಚಿಕ್ಕಮಗಳೂರು, ತಾಲೂಕು ಆಡಳಿತ ತರೀಕೆರೆ, ಏರ್ಪಡಿಸಿದ್ದ ಜನ ಸಂಪರ್ಕ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಜನರ ಸಮಸ್ಯೆಗಳನ್ನು ಅವರಿರುವ ಸ್ಥಳಕ್ಕೆ ಅಧಿಕಾರಿಗಳು ಹೋಗಿ ಬಗೆಹರಿಸಲು ಮಾನ್ಯ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ.ಅದರಂತೆ ರಾಜ್ಯಾದ್ಯಂತ ಪ್ರತಿ ತಿಂಗಳು ಜನ ಸಂಪರ್ಕ ಸಭೆಯನ್ನು ಮಾಡುತ್ತಿದ್ದಾರೆ. ಹುಣಸಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣ, ಹೊಸ ಕೆರೆಗೆ ಏತ ನೀರಾವರಿ ಪೈಪ್ ಲೈನ್ ನಿರ್ಮಾಣ, ಕುಡಿಯುವ ನೀರಿನ ಪೈಪ್ ಲೈನ್ ನಿರ್ಮಾಣ, ಮುಖ್ಯ ರಸ್ತೆಗೆ ಡಿವೈಡರ್ ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಹಾಗೂ ಬಿಸಿಎಂ ಹಾಸ್ಟೇಲ್ ನಿರ್ಮಾಣ ಮಾಡಬೇಕು. ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಮನವಿ ನೀಡಿದ ಮೆರೆಗೆ ಶಾಸಕರು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಗೊಲ್ಲರಹಳ್ಳಿ ಸರ್ವೇ ನಂಬರ್ 46 ರಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ರೈತ ಆದಿ ಕರ್ನಾಟಕ ಜನಾಂಗಕ್ಕೆ ಮನೆ ನಿವೇಶನಗಳನ್ನು ಒದಗಿಸಿ ಕೊಡುತ್ತೇವೆ ಎಂದು ಹೇಳಿದರು. ಉಪ ವಿಭಾಗಾಧಿಕಾರಿ ಡಾ. ಕೆ ಜೆ ಕಾಂತರಾಜ್ ಮಾತನಾಡಿ ರೈತರ ಸಮಸ್ಯೆಗಳಾದ ಪಹಣಿ ತಿದ್ದುಪಡಿ ಪೌತಿ ಖಾತೆ ಬದಲಾವಣೆಗಳನ್ನು ಜಾತಿ ಪತ್ರ, ಆದಾಯ ಪತ್ರಗಳನ್ನು ಹಾಗೂ ಮಾಶಾಸನ, ವಿಧವಾ ವೇತನ, ವೃದ್ದಪ್ಯಾ ವಿರಾಮ ವೇತನ ಮಾಡಿಕೊಡಲು ಮಾರ್ಗದರ್ಶನ ನೀಡಿದ್ದೇವೆ. ಸ್ಮಶಾನ ಇಲ್ಲದ ಜಾಗಗಳಲ್ಲಿ ಸ್ಥಳವಕಾಶ ಸಿಕ್ಕರೆ ಸ್ಮಶಾನ ಮಂಜೂರಾತಿ ಮಾಡುತ್ತೇವೆ,ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿ ಪಡೆಯಿರಿ.ಪಹಣಿಗೆ ಆಧಾರ್ ಜೋಡಣೆ ಮಾಡಿಸಿರಿ. ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಿದ್ದಾರೆ ಎಂದು ಹೇಳಿದರು. ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ರವರು ಮಾತನಾಡಿ ಜನ ಪ್ರತಿನಿಧಿಗಳು ಶಾಸಕರು ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿರಿ,ಮಾಡುವ ಕೆಲಸ ಬೇಗನೆ ಮಾಡಿರಿ,ಅದು ಸ್ಥಿರವಾಗಿರುವಂತೆ ಜನರು ಮರೆಯದಂತೆ ಕೆಲಸಗಳನ್ನು ಮಾಡಿರಿ ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗೀತಾ ಶಂಕರ್ ಮತ್ತು ತಹಶೀಲ್ದಾರ್ ರಾಜೀವ ರವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಧವಾ ವೇತನ ಮಂಜೂರಾತಿ ಪತ್ರ, ವೃದ್ದಪ್ಯಾ ವಿರಾಮ ವೇತನ ಮಂಜೂರಾತಿ ಪತ್ರ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌರಮ್ಮ ಉಪಾಧ್ಯಕ್ಷರಾದ ಚೇತನ್ ಕುಮಾರ್, ಸದಸ್ಯರಾದ ಮಂಜುನಾಥ್, ಪೊಲೀಸು ಉಪ ನಿರೀಕ್ಷಕರಾದ ತಿಪ್ಪೇಶ್, ತಾಲೂಕು ಆರೋಗ್ಯ ಅಧಿಕಾರಿ ಡಾ, ಚಂದ್ರಶೇಖರ್, ಪಶು ಸಂಗೋಪನಾ ವೈದ್ಯರಾದ ಬಸಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗಿರೀಶ್ ಚೌಹಾನ್, ರೈತ ಸಂಪರ್ಕ ಕೇಂದ್ರದ ಕರಿಯಪ್ಪ ಉಪಸ್ಥಿತರಿದ್ದು ರಾಜ್ಯಸ್ವ ನಿರೀಕ್ಷಕರಾದ ಕಾಂತರಾಜ್ ನಿರೂಪಿಸಿ ಗೌತಮಿ ಸ್ವಾಗತಿಸಿ ಧನಂಜಯ ವಂದಿಸಿದರು.
ಜಿಲ್ಲಾ ವರದಿಗಾರರು.ಎನ್.ವೆಂಕಟೇಶ್.ತರೀಕೆರೆ