ಹಿರಿಯ ಪತ್ರಕರ್ತ ಪ್ರಭಾಕರನ್ ನಿಧನಕ್ಕೆ ತೀವ್ರ ಸಂತಾಪ.
ಬೆಳಗಾವಿ ಅಕ್ಟೋಬರ್.8
ದಿ ಹಿಂದು ಪತ್ರಿಕೆಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದ ಕೇರಳದ ಜಿ ಪ್ರಭಾಕರನ್ ನಿನ್ನೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇಶದ ಪತ್ರಿಕಾ ಸಮೂಹದ ಹಿತಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅವರ ನಿಧನ ದೇಶದ ಪತ್ರಿಕಾ ಸಮೂಹಕ್ಕೆ ವಿಶೇಷವಾಗಿ ಯೂನಿಯನ್ ಚಟುವಟಿಕೆಗಳಿಗೆ ತುಂಬಲಾರದ ಹಾನಿಯಾಗಿದೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಅವರ ನಿಧನದಿಂದಾಗ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಮತ್ತು ಅವರ ಪರಿವಾರದವರಿಗೆ ನೀಡಲಿ ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಪ್ರಾರ್ಥಿಸುತ್ತೇನೆ.-ಮುರುಗೇಶ್ ಶಿವಪೂಜಿರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ , ಇಂಡಿಯನ್ ಜರ್ನಲ್ ಈಸ್ಟ್ ಇಂಡಿಯನ್ ನ್ಯೂ ಡೆಲ್ಲಿ.ಮತ್ತು ಕರ್ನಾಟಕ ಪತ್ರಕರ್ತರ ಸಂಘ, ವಿಜಯ ನಗರ ಜಿಲ್ಲಾ ಸಂಘಟನೆಯ ಅಧ್ಯಕ್ಷರು ಮತ್ತು ಸಂಘದ ಪದಾಧಿಕಾರಿಗಳು ವಿಜಯನಗರ ಹಾಗೂ ಕೂಡ್ಲಿಗಿ ತಾಲೂಕು ಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕರ್ನಾಟಕ ಪತ್ರಕರ್ತರ ಸಂಘದಿಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ