ಅಮರಾವತಿಯಲ್ಲಿ ಸುಸ್ಥಿರತೆಯಡೆಗೆ ಖಾತ್ರಿ ನಡಿಗೆ ಅಭಿಯಾನಕ್ಕೆ ಚಾಲನೆ.
ಅಮರಾವತಿ ಅಕ್ಟೋಬರ್.9
2024-25ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ ರಿಂದ ಒಂದು ತಿಂಗಳ ವರೆಗೆ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಹುನಗುಂದ ತಾಲೂಕಿನ ಅಮರಾವತಿ ಗ್ರಾಮ ಪಂಚಾಯತಿಯಲ್ಲಿ ಬೇಡಿಕೆಗಳನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಲಾಯಿತು.ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮಸ್ಥರಿಗೆ ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರಿಗೆ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ವ್ಯಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ವೈಯಕ್ತಿಕ ಕಾಮಗಾರಿಗಳ ಹೆಚ್ಚಿನ ಅರ್ಜಿ ಸಲ್ಲಿಸಲು ತಿಳಿಸಿದರು.ಬಳಿಕ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಚಂದ್ರಗಿರಿ, ಗ್ರಾಮಸ್ಥರು ಸಮುದಾಯ ಕಾಮಗಾರಿಗಳ ಬದಲು ವ್ಯಯಕ್ತಿಕ ಕಾಮಗಾರಿಗಳ ಬಗ್ಗೆ ಅರ್ಜಿ ಸಲ್ಲಿಸಿದರೇ, ಇದರಿಂದ ನಿಮ್ಮ ಹೊಲದಲ್ಲಿ ಕೂಲಿ ಜೊತೆಗೆ ಕೆಲಸ ಸಿಗುತ್ತದೆ ಎಂದರು.ಬಳಿಕ ಎಸ್ಸಿ ಕಾಲೋನಿಗೆ ಭೇಟಿ ನೀಡಿ ದನದ ಶೆಡ್, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರಪ್ಪ ಚಂದ್ರಗಿರಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಅಧ್ಯಕ್ಷ ಬಸವರಾಜ ಕಮತ್ತರ, ಉಪಾಧ್ಯಕ್ಷೆ ನಾಗರತ್ನ ಮಾದರ, ಎಸ್.ಡಿ.ಎ ಕಾಂತಾ ಉದಗೇರಿ, ಡಾಟಾ ಎಂಟ್ರಿ ಆಪರೇಟರ್ ಮಂಜುನಾಥ್ ಮಾದರ, ವಾಟರಮನ್ ಗಳಾದ ಪ್ರವೀಣ ಹಾವನ್ನವರ, ಗಿರೀಶ್ ಹನುಮಗೌಡರ, ಸರ್ವ ಸದಸ್ಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.