ನಾಳೆ ಕೂಡ್ಲಿಗಿ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಜನಜಾಗೃತಿ ನವಜೀವನ ಸದಸ್ಯರ ಸಮಾವೇಶ.
ಕೂಡ್ಲಿಗಿ ಅಕ್ಟೋಬರ್.9
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹೊಸಪೇಟೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೂಡ್ಲಿಗಿ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ನಡೆಯಲಿದೆ.ಕಾರ್ಯಕ್ರಮ ಮೊದಲಿಗೆ ಬೆಳಿಗ್ಗೆ 09:00 ಗಂಟೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜೀ ರವರ ಚಿತಾಭಸ್ಮದಿಂದ ಜಾಥಾ ಮೇನ್ ಬಾಯ್ಸ್ ಸ್ಕೂಲ್ ಆವರಣದ ಚಂದ್ರಶೇಖರ್ ಆಜಾದ್ ರಂಗಮಂದಿರದ ವರೆಗೆ ಜಾಗೃತಿ ಜಾಥಾ ಸಾಗಲಿದೆ.ದಿವ್ಯ ಸಾನಿಧ್ಯ ಹಿರೇಮಠದ ಶ್ರೀ ಷಟಸ್ಥಲ ಬ್ರಹ್ಮ ಪ್ರಶಾಂತ ಸಾಗರ ಶಿವಾಚಾರ್ಯ ಮಹಾ ಸ್ವಾಮಿಗಳು ಹಿರೇಮಠ ಸಂಸ್ಥಾನ ಕೂಡ್ಲಿಗಿ ಇವರ ಸಾರಥ್ಯದಲ್ಲಿ ಸಾಗುವುದು.
ಉದ್ಘಾಟನೆ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್,ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನಟರಾಜ್ ಬಾದಾಮಿ, ಉಪನ್ಯಾಸ ಪ್ರಾಚಾರ್ಯರಾದ ಕೊತ್ಲಮ್ಮ, ಕೊಪ್ಪಳ ವಿಭಾಗದ ಪ್ರಾದೇಶಿಕ ಕಚೇರಿಯ ನಿರ್ದೇಶಕ ಗಣೇಶ್ ಬಿ,ತಹಶೀಲ್ದಾರ್ ಟಿ.ಜಗದೀಶ್, ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಿರೋಜ್ಖಾನ್,ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್, ಬಿಇಓ ಪದ್ಮನಾಭಕರಣಂ, ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕಾವಲಿ ಶಿವಪ್ಪನಾಯಕ,ಜಿ.ಆರ್.ಸಿದ್ದೇಶ್ವರ್, ಹಡಗಲಿ ವೀರಭದ್ರಪ್ಪ, ಕಕ್ಕುಪ್ಪಿ ಗುಂಡಪ್ಪ, ಮೇನ್ ಬಾಯ್ಸ್ ಸ್ಕೂಲ್ ಎಸ್ಡಿಎಂಸಿ ಅಧ್ಯಕ್ಷ ನಲ್ಲಮುತ್ತಿ ದುರುಗೇಶ್, ಸೇರಿದಂತೆ,ತಾಲೂಕು ಯೋಜನಾಧಿಕಾರಿಗಳು, ಜಿಲ್ಲಾ ವ್ಯಾಪ್ತಿಯ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ವರ್ಗದವರು, ಕಚೇರಿ ಸಿಬ್ಬಂದಿ ವರ್ಗದವರು, ತಾಲೂಕಿನ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಆಗಮಿಸಲಿದ್ದಾರೆ ಎಂದು ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ತಿಳಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ,ಬಿ.ಸಾಲುಮನಿ ಕೂಡ್ಲಿಗಿ