ಗ್ರಾಮಗಳ ಮಣ್ಣು ದೆಹಲಿ ತಲುಪುತ್ತಿರುವುದು ಹೆಮ್ಮೆಯ ಸಂಗತಿ – ಇ.ಓ ದೇಶಪಾಂಡೆ.
ಹುನಗುಂದ ಅಕ್ಟೋಬರ್.11
ತಾಲ್ಲೂಕಿನ ಮಣ್ಣು ಬಹಳ ಪವಿತ್ರವಾದದ್ದು, ಕೂಡಲ ಸಂಗಮನಾಥನ, ವಿಜಯ ಮಹಾಂತೇಶ್ವರಂತಹ ಶರಣರು ನಡೆದಾಡಿದ ಪವಿತ್ರ ಮಣ್ಣು ದೆಹಲಿ ಸಂಸತ್ತು ತಲುಪುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ತಿಳಿಸಿದರು.ಹುನಗುಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅತಿ ಶಾಂತಿಯ ದೇಶ ಅಂದರೇ ಅದು ಭಾರತ, ಇಂತಹ ಪವಿತ್ರ ನೆಲದಲ್ಲಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಯುವ ಕೇಂದ್ರ ಅಧಿಕಾರಿಗಳಾದ ಸುಷ್ಮಾ ಗೌವಳಿ ಮಾತನಾಡಿ, ರಾಜ್ಯದಲ್ಲಿನ ಪವಿತ್ರ ಮಣ್ಣನನ್ನು ಎರಡು ಹಂತದಲ್ಲಿ ಪಡೆದುಕೊಂಡು ದೆಹಲಿಗೆ ಕಳುಹಿಸಲಾಗುತ್ತದೆ. ಸದ್ಯ ಎರಡನೇ ಹಂತದಲ್ಲಿ ಮನೆ ಮನೆಗೆ ಭೇಟಿ ನೀಡಿ ಮಣ್ಣು ಇಲ್ಲಾ ಅಕ್ಕಿಯನ್ನು ಪಡೆದುಕೊಳ್ಳಲಾಗುತ್ತಿದೆ. ಇದಕ್ಕೆ ಸಹಕರಿಸಿದ ತಾಪಂ ಇಓ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.ಬಳಿಕ ಮಾನ್ಯ ಸಹಾಯಕ ನಿರ್ದೇಶಕ ಮಹಾಂತೇಶ್ ಕೋಟಿ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿಗಳಿಂದ ಪವಿತ್ರ ಮಣ್ಣನನ್ನು ಪಡೆದುಕೊಂಡಿದ್ದು, ಇದು ಹುನಗುಂದ ತಾಲೂಕಿನ ಮಣ್ಣಿನ ಮಹತ್ವವನ್ನು ದೇಶ ಮಟ್ಟದಲ್ಲಿ ಸಾರುತ್ತದೆ ಎಂದು ತಿಳಿಸಿದರು. ಬಳಿಕ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಬಳಿಕ ಮಾಜಿ ಸೈನಿಕರಾದ ರಾಘವೇಂದ್ರ ಜಬಳಪ್ಪನವರ, ಬಿ.ಸಿ. ಗೌಡರ, ಬಿ. ಎಂ. ಧನ್ನೂರ ಅವರಿಗೆ ತಾಲೂಕ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇನ್ನೂ ತಾಲೂಕು ಪಂಚಾಯತಿಯಿಂದ ಸಂಗಮೇಶ್ವರ ದೇವಸ್ಥಾನದವರೆಗೆ ಜಾಥಾ ಹಮ್ಮಿಕೊಳ್ಳಲಾಯಿತು. ಬಳಿಕ ನೆಹರು ಯುವ ಕೇಂದ್ರವರಿಗೆ ಪವಿತ್ರ ಮಣ್ಣನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿಗಳು ಡಿ. ಎಂ ಅಸೋದಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, MRW ಸಂಗಪ್ಪ ಬೀರಗೊಂಡ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷರು, VRW ಸಿಬ್ಬಂದಿ ವರ್ಗ, ತಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.