ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ.
ಪಾಪಿನಾಯಕನಹಳ್ಳಿ ಅಕ್ಟೋಬರ್.11
ದಿನಾಂಕ 10.10.23 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಶ್ರೀಮತಿ ಅನಿತಾ ಗುರುರಾಜ್ ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಅಂಚೆ ಅಧೀಕ್ಷಕರಾದ ಶ್ರೀ ವಿ.ಎಲ್.ಚಿತಕೋಟೆ ಹಾಗೂ ಸಹಾಯಕ ಅಂಚೆ ಅಧೀಕ್ಷಕ ಶ್ರೀ ನರೇಂದ್ರ ನಾಯ್ಕ್ ,ಹೊಸಪೇಟೆ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶ್ರೀ ರಶೀದ್ ಸಾಹೇಬ್ ,ಶ್ರೀ ಮಾರುತಿ ,ಮಲ್ಲೇಶ್ ಪಂಚಾಯತಿ ಸದಸ್ಯರು ಹಾಗೂ ಪಾಪಿನಾಯಕನಹಳ್ಳಿ ಪೋಸ್ಟ್ ಮಾಸ್ಟರ್ ಬಿ.ಮಂಜುನಾಥ್ ಭಾಗವಹಿಸಿದ್ದರು . ಶ್ರೀ ನರೇಂದ್ರ ನಾಯ್ಕ್ ಅಂಚೆ ಕಚೇರಿಯಲ್ಲಿ ಹಲವಾರು ಸೇವೆಗಳು ಇವೆ ಉದಾರಣೆಗೆ ಅಂಚೆ ಗ್ರಾಮೀಣ ಜೀವ ವಿಮೆ ,ಉಳಿತಾಯ ಖಾತೆ , ಆವರ್ತಕ ನಿಧಿ, ಆಧಾರ್ ತಿದ್ದುಪಡಿ, ಹಾಗೂ ಗುಂಪು ಜೀವ ವಿಮೆ ಇವೆ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಹೇಳಿದರು.ಮತ್ತೊಬ್ಬ ಅತಿಥಿ ಮುಖ್ಯ ಶಿಕ್ಷಕರಾದ ಶ್ರೀಪಾದಯ್ಯ ಅಂಚೆ ಇಲಾಖೆ ಸುಮಾರು 1854 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಆರಂಭಿಸಿತು ಹಾಗೂ ಭಾರತಾದ್ಯಂತ ಸುಮಾರು 156000 ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ ಹಾಗೂ ನಮ್ಮ ಗ್ರಾಮದಲ್ಲಿ ಈ ಕಾರ್ಯಕ್ರಮ ಮಾಡಿದ ಅಂಚೆ ಇಲಾಖೆಗೆ ಗ್ರಾಮದ ಪರವಾಗಿ ಧನ್ಯವಾದಗಳನ್ನು ಹೇಳಿದರು. ಶ್ರೀ ರಶೀದ್ ಸಾಹೇಬ್ ಮಾತನಾಡಿ ಅಂಚೆ ಇಲಾಖೆ ಅಂದರೆ ಬರೀ ಪತ್ರ ಬಟವಾದೆ ಒಂದೇ ಅಲ್ಲ ಅಂಚೆ ಕಚೇರಿಯಲ್ಲಿ ಹಲವಾರು ಸೇವೆಯನ್ನು ಇಲಾಖೆ ನೀಡುತ್ತಾ ಇದ್ದಾವೆ ಇದರ ಸದುಪಯೋಗ ಪಡೆದು ಕೊಳ್ಳಿ ಎಂದು ಹೇಳಿದರುಕಾರ್ಯಕ್ರಮ ದ ಉದ್ಘಾಟಕರಾಗಿ ಮಾತನಾಡಿದ ಅಂಚೆ ಅಧೀಕ್ಷಕರಾದ ಶ್ರೀ ವಿ.ಎಲ್.ಚಿತಕೋಟೆ ಮೊದಲಿಗೆ ಸಾರ್ವಜನಿಕರು ಅಂಚೆ ಕಚೇರಿಗೆ ಬಂದು ತಮ್ಮ ನಿತ್ಯ ವ್ಯವಹಾರ ಮಾಡಬೇಕಾಗಿತ್ತು ಆದರೆ ಕೇಂದ್ರ ಸರಕಾರ ಮನೆ ಬಾಗಿಲಿಗೆ ಅಂಚೆ ಸೇವೆಯನ್ನು ನೀಡಲು ಅಂಚೆ ಜನ ಸಂಪರ್ಕ ಅಭಿಯಾನವನ್ನು ರೂಪಿಸಿದೆ ಇದರ ಅಂಗವಾಗಿ ನಿಮ್ಮ ಗ್ರಾಮಕ್ಕೆ ಬಂದಿದ್ದೇವೆ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.ಶ್ರೀ ಗೌರಿ ಶಂಕರ್ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ತೋರಣಗಲ್ಲು ,ವಿದ್ಯಾನಗರ,ಶಂಕರಗುಡ್ಡ,ಹಂಪಿ,ಕನ್ನಡ ಯೂನಿವರ್ಸಿಟಿ, ಹಂಪಿ ಪವರ್ ಹೌಸ್, ಕಮಲಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಅಂಚೆ ನೌಕರರು ,ಕೆ. ತಿಪ್ಪೇಸ್ವಾಮಿ (ಅಂಚೆ ಸಹಾಯಕ) ಹೊಸಪೇಟೆ.ಹಾಗೂ ಅಂಚೆ ಮೇಲ್ವಿಚಾರಕರಾದ ಶ್ರೀ ಟಿ.ವೆಂಕಟೇಶ್ ,ಭಾಗ್ಯಮ್ಮ,ಸೋಮಶೇಕರಯ್ಯ ಉಸ್ತುವಾರಿ ವಹಿಸಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ