ಕಾಮಗಾರಿಗಳ ಸ್ಥಳದಲ್ಲೇ ಕಾರ್ಮಿಕರ ಬೇಡಿಕೆ ಸಂಗ್ರಹಣೆ.
ಸೂಳೇಭಾವಿ ಅಕ್ಟೋಬರ್.13





2024-25ನೇ ಸಾಲಿನ ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಳದಲ್ಲೇ ಕಾಮಗಾರಿಗಳ ಬೇಡಿಕೆ ಸಂಗ್ರಹಣೆಗೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಕಾರ್ಮಿಕರ ಆಯವ್ಯಯ ತಯಾರಿಸುತ್ತಿದ್ದು, ಕೃಷಿ ಹೊಂಡ, ಬದು ನಿರ್ಮಾಣ, ದನದ ಶೆಡ್, ಕುರಿ ಶೆಡ್, ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವೈಯಕ್ತಿಕ ಕಾಮಗಾರಿಗಳ ಬಗ್ಗೆ ತಿಳಿಸಿಕೊಡಲಾಯಿತು. ಬಳಿಕ ಕೂಲಿ ಕಾರ್ಮಿಕರು ತಮ್ಮಗೆ ಬೇಕಾದ ಕಾಮಗಾರಿಗಳನ್ನು ಬರೆದು ಬೇಡಿಕೆ ಡಬ್ಬದಲ್ಲಿ ಹಾಕಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಎಸ್ ಡಿ. ಗೌಡರ, ಬಿಲ್ ಕಲೆಕ್ಟರ್ ವಾಯ್. ಎಚ್. ಕೋರಿ, ಬಿಎಫ್ ಟಿ ಸಂತೋಷ ಅಕ್ಕಿ, ಡಾಟಾ ಎಂಟ್ರಿ ಆಪರೇಟರ್ ಎಸ್. ಆರ್. ಕೊಳ್ಳಿ ಉಪಸ್ಥಿತರಿದ್ದರು.