ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲೆಯಲ್ಲಿ – ಪಾಲಕರ ಸಭೆ.
ಮಿರಗಿ ಜು.13

ಇಂಡಿ ತಾಲೂಕಿನ ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲೆಯು ಇತ್ತೀಚಿನ ದಿನ ಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಉತ್ತಮ ಕಾರ್ಯ ಸಾಧನೆಯತ್ತ ಸಾಗುತ್ತಿದೆ. ಈ ಶಾಲೆಯು ಗ್ರಾಮದ ಹೊರವಲಯದ ಅಂದಾಜು ಒಂದು ಕೀ.ಮಿ. ಅಂತರದಲ್ಲಿದ್ದು, ಇದು ನಿಜವಾಗಿಯೂ ಪ್ರಾಚೀನ ಕಾಲದ ಉತ್ತಮ ಶಿಕ್ಷಣದ ಕೇಂದ್ರ ಬಿಂದುವಾಗಿದೆ. ಈ ಶಾಲೆಗೆ ಉತ್ತಮವಾದ ಕ್ರೀಡಾಂಗಣವಿದ್ದು, ಸುತ್ತ ಮುತ್ತಲು ಬಗೆ-ಬಗೆಯ ಗಿಡ ಮರಗಳಿಗೆ. ಹೀಗೆ ವಿದ್ಯಾರ್ಥಿಗಳು ಕಲಿಯಲು ಪರಿಸರ ಮಡಿಲಿನ ಕೇಂದ್ರ ಬಿಂದುವಾಗಿದೆ. ಶಿಕ್ಷಣದ ಪ್ರಗತಿಗೆ ಅಲ್ಲಿಯ ಶಿಕ್ಷಕವೃಂದ ಹಾಗೂ ಎಸ್.ಡಿ.ಎಮ್.ಸಿ ಮೇಲುಸ್ತುವಾರಿ ಸಮೀತಿ ಹಗಲಿರುಳು ವಿದ್ಯಾರ್ಥಿಗಳ ಸಲುವಾಗಿ ಶ್ರಮ ವಹಿಸುತ್ತಿದ್ದಾರೆ .

ನೋಂದಾವಣೆಯಾದ ಈ ಶಾಲೆಯು ವಿದ್ಯಾರ್ಥಿಗಳಿಗೆ ದೊರಕ ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ವು ಹೊಂದಿದೆ. ಆದರೆ ಸರಕಾರದ ಆದೇಶಗಳ ಪ್ರಕಾರ ಪ್ರತಿ ತಿಂಗಳು ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಪ್ರಗತಿ-ಕುಂದು ಕೊರತೆಗಳ ಕುರಿತು ಚರ್ಚಿಸಿ ಸಮಸ್ಯೆಗಳಿದ್ದರೆ ಪರಿಹರಿಸುವ ವ್ಯವಸ್ಥೆ ಮಾಡುವ ಕುರಿತು ಇಂದು ಶಾಲೆಯಲ್ಲಿ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳ ಕುರಿತು ಪಾಲಕರು – ವಿದ್ಯಾರ್ಥಿಗಳು – ಶಿಕ್ಷಕರು ಚರ್ಚಿಸಿ, ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ ವಿಜಯಪುರ.