ಅಪ್ಪ ಎಂದರೆ…..

ದುಡ್ಡಲ್ಲಿ ಬಡವನವನು, ಪ್ರೀತಿಯಲ್ಲಿ
ಅದೇಷ್ಟೋ ಶ್ರೀಮಂತ,
ತಾನು ಕಷ್ಟಪಟ್ಟು ನಮ್ಮ ಸಲಹೋ
ಹೃದಯವಂತ.
ಇಡೀ ಕುಟುಂಬಕ್ಕೆ ಆಧಾರವಾಗಿರೋ
ಗುಣವಂತ,
ನನ್ನ ಪಾಲಿಗೆ ಸಿಕ್ಕಂತಹ ಭಗವಂತ .
ಅಪ್ಪ ಕಷ್ಟವೆಂದರೆ ಸಾಕು ಬರುವನು
ನಾನೀರುವೆನಂತ,
ಅಪ್ಪ.. ಅಪ್ಪ… ನೀ ನನ್ನಂತರಾತ್ಮದ
ಪರಮಾತ್ಮ.
✍️ಕು|| ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ. ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ ಕಲಬುರ್ಗಿ